ಹಣ್ಣೆಲೆಯು ಹಾರುತಿರೆ, ನೀರಿನುಗೆಯಾಗುತಿರೆ ದಿನದ ಬಿಸಿಲಿಗೆ ಹೂವು ಬಾಡುತಿರಲು, ಮೈಗರೆದು ಮಿಡುಕುತಿದೆ ಮೂಕ ಶೋಕವು, ಸೃಷ್ಟಿ ಕೋಗಿಲೆಯ ಕೊರಳಿನಲಿ ಹಾಡುತಿರಲು. ಮನದ ಮಗಳಾದ ನುಡಿ ಹುರುಳಿನಲಿ ನರಳುತಿದೆ. ಹಾಡು ನೆಲೆಗಾಣದಲೆ ನವೆಯುತಿಹುದು. ಬಾಳಸ...

ಹಸಿದು ಹಸಿಯುಣುವವರ ಕಂಡು ಮರುಗುತಲದಕೆ ಬಿಸಿ ಉಪ್ಪಡುಗೆ ರುಚಿಯನು ಕೊಟ್ಟುಪಚರಿಸಿದರೆ ಭಲೆ ಎನಬಹುದು ಹುಸಿ ಭರವಸೆಯ ಉಪ್ಪನೆಲ್ಲರಷ್ಟಷ್ಟಿಡುತಿರಲತಿಯಾಗಲದ ನು ಸರಿಪಡಿಸೆ ಸುರಿದ ನೀರತಿಯಾಗಿ ಮಿಕ್ಕಿದಡುಗೆಯ ಗಬ್ಬು ವಾಸನೆಗೆಲ್ಲರಾ ಹೊಟ್ಟೆ ತೊಳಸುತಿ...

ನವಲ ಕಂಡೀರಾ ನಮ್ಮ ನವಲ ಕಂಡೀರ್‍ಯಾ? ಕಡಲೀಯಾ ಹೊಲದಾಗ ಇತ್ತ ನಮ್ಮ ನವಲು || ೧ || ನವಲ ಕಂಡೀರ್‍ಯಾ ನಮ್ಮ ನವಲ ಕಂಡೀರ್‍ಯಾ? ಗೋದಿಯಾ ಹೊಲದಾಗ ಇತ್ತ ನಮ್ಮ ನವಲು ನವಲ ಕಂಡೀರಾ ನಮ್ಮ ನವಲ ಕಂಡೀರ್‍ಯಾ ? || ೨ || ರಾಗೀಯ ಹೊಲದಾಗ ಇತ್ತ ನಮ್ಮ ನವಲು ನ...

ಬದುಕು ಇದು ಎಂಥ ಬದುಕು ದೇವರ ಧ್ಯಾನಿಸಿದ ಈ ಬದುಕು ಬದುಕಿಗೆ ಇಲ್ಲಿ ಕಿಂಚಿತ್ತು ಮರುಕು ದೇವರ ಧ್ಯಾನಿಸದೆ ಕಾಯ ಮುರುಕು ನನ್ನೆದೆ ತುಂಬಲಿ ಕೃಷ್ಣನ ರೂಪ ನನ್ನ ಕರ್‍ಣದಲಿ ಅವನದೆ ಪದರೂಪ ಆ ಕಣ್ಣಗಳಲಿ ಪ್ರೀತಿಯ ಸಲ್ಲಾಪ ಜೀವ್ಹೆಯಲ್ಲಿರಲಿ ನಿತ್ಯ ಕೃ...

ನೀಂ ಕುಡಿವ ಮದಿರೆಯುಂ ನೀನೊತ್ತುವಧರಮುಂ ಮಿಕ್ಕೆಲ್ಲ ಪುರುಳಂತೆ ಶೂನ್ಯಮೆಂಬೆಯೊ?- ಕೇಳ್, ಅಂತಾದೊಡೇಂ? ನೀನೆ ಶೂನ್ಯನಪ್ಪವನಲ್ತೆ? ಶೂನ್ಯತೆಯೆ ನಿನಗಿರಲ್ಕವುಗಳಿಂ ಕುಂದೇಂ? *****...

ಬುದ್ಧನ ಮಾಡಿ ಹೇಗಾದರು ಮಾಡಿ ಮರದಿಂದ ಮಾಡಿ ಮಣ್ಣಿಂದ ಮಾಡಿ ಕಲ್ಲಿಂದ ಮಾಡಿ ಹುಲ್ಲಿಂದ ಮಾಡಿ ದಂತದಿಂದ ಮಾಡಿ ಚಂದ್ರಕಾಂತದಿಂದ ಮಾಡಿ ಬುದ್ಧನೆಂದರೆ ಬುದ್ಧ ಮಾಯಾದೇವಿಯ ಕನಸು ಬುದ್ಧ ಶುದ್ಧೋದನನ ನನಸು ಬುದ್ಧ ಯಶೋಧರಾ ಬುದ್ಧ ರಾಹುಲ ಬುದ್ಧ ಗೌತಮ ಬ...

ಕಲನಾದಿನಿ ಕಾವೇರಿಯ ತೀರದಿ ತನ್ನನೆ ನೆನೆಯುತಲವನಿದ್ದ; ತನ್ನ ಬಿಜ್ಜೆ ಕುಲ ಶೀಲ ಸಂಪತ್ತು ತನ್ನ ರೂಪು ತನ್ನೊಳೆ ಇದ್ದ. ತನ್ನವರೊಲ್ಲದ ಸರಸತಿ ನವವಧು ಗಂಡನ ಮಡಿವಾಳಿತಿಯಾಗಿ ಹಿಂಡುಬಟ್ಟೆಗಳ ಹಿಂಡಲು ಬಂದಳು ಜವ್ವನದುಲ್ಲಸದೊಳು ತೂಗಿ. ಕರೆಯೊಳಗಿಬ್ಬ...

ಬೆಚ್ಚಗೆ ಬೆಳಗಿನ ಸೂರ್‍ಯ ಕಿರಣಗಳ ಹಿತ ತಣ್ಣನೆಯ ತನಿಗಾಳಿ ಸುಳಿಸುಳಿದು ಹಿಡಿದಿಪ್ಪಿ ತೊರೆ ಹಳ್ಳಗಳ ಹರಿವ ಜುಳುಜುಳು ನಾದ ಹಿಂಜಿದ ಹತ್ತಿ ಹರಡಿದಂತೆ ಸುತ್ತಲೂ ಕಾಡಿನ ಜೀರುಂಡೆಗಳ ಝೇಂಕಾರದ ನಾದ ಕಾಡ ಗುಬ್ಬಚ್ಚಿಗಳ ಚಿಲಿಪಿಲಿ ಕಲರವ ಬಯಲ ನಡುವಿನ ...

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ- ಬಾಳ್ವೆ ಸಂಗರರಂಗವೆಂಬುದಂ ಮರೆದು, ಸಿಂಗರಂ ಗೆತ್ತು ಶಸ್ತ್ರಂಗಳಂ ಮುರಿದು ವಿಧಿಗೆರೆದು ಕಡೆದೀವೆವಳಲ ಸಂಕಲೆಯಂ. ಕಾದದೊಡೆ ಬಾಳೇಕೆ? ಕಾದೆನೆನೆ ನಿನ್ನ ಸಂಧಿಪುದೊ? ಬಂಧಿಪುದೊ? ಬಗೆಯ ವಿಧಿಯದರಿಂ ಬಿಳಿಯ ಪಳವಿಗೆ...

ಕನ್ನಡ ನಾಡು ಸುವರ್ಣ ಬೀಡು ಮುತ್ತು ಹರಿವ ಜಾಡು ಕನ್ನಡ ನಾಡಿನ ಚೆಲುವಿಗೆ ಒಲಿದು ಹಾಡುವೆ ನಾ ಹಾಡು – ಎದೆ ತುಂಬಿ ಬಂದ ಹಾಡು ಬೇಲೂರಿನ ಶಿಲೆ ಶಿಲ್ಪಿಗಳಾ ಕಲೆ ಸಮ್ಮೋಹನವಾಗಿ ಮಲೆನಾಡಿನ ಸಿರಿ ಜಲಪಾತದ ಝರಿ ಸಂಕೀರ್ತನವಾಗಿ ಹಾಡಿದೆ ಜುಳುಜುಳ...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...