ದೇವರ ಕಾನಲ್ಲಿ ಗೋರಂಬದೇತಕ್ಕಾ?
ನೇಗಲೇ ನೂರು ನೊಗನೂರೂ || ೧ ||

ನೇಗಲೇ ನೂರೂ ನೊಗನೂರಾದರೇ
ಹೂಡ ಬಿಟ್ಟಿತ್ತೇ ಲಯನೂರೂ || ೨ ||

ಹೂಡ ಬಿಟ್ಟಿತ್ತೇ ಲಯನೂರುಲಾದರೇ
ಎತ್ತಿಗೆ ನೀರೆಲ್ಲೀ ಕುಡುಸಿದಿಯೋ? || ೩ ||

ಎತ್ತಿಗೆ ನೀರೆಲ್ಲೀ ಕುಡುಸೀದೀಲಾದರೇ
ದೇವರ ಕೆರಿಯಲ್ಲಿ ಕುಡಸಿದೀನೋ || ೪ ||

ದೇವರ ಕೆರಿಯಲ್ಲಿ ಕುಡಸಿದೀಲಾದರೇ
ನೋಡೀ ಕಟ್ಟಣ್ಣಾ ನಮ್ಮೆತ್ತಾ || ೫ ||

ನೋಡೀ ಕಟ್ಟಣ್ಣಾ ನಮ್ಮೆತ್ತುಲಾದರೇ
ತಪ್ಪೀ ಬರತಿತ್ತೇ ಮದುಲಿಂಗಾ || ೬ ||

ತಪ್ಪೀ ಬರತಿತ್ತೇ ಮದುಲಿಂಗಾಲಾದರೇ
ಮದಲಿಂಗ ಜೋಕ್ಯೋ ಮಗ ಜೋಕ್ಯೋ || ೭ ||

ಮದಲಿಂಗ ಜೋಕ್ಯೋ ಮಗ ಜೋಕ್ಯೋಲಾದರೇ
ಹೋರೀ ಕೊಳ್ಳಿನಾ ಸರುಗೆಂಟೇ || ೮ ||

ಹೋರೀ ಕೊಳ್ಳೀನಾ ಸರುನುತ್ತೆಲಾದರೇ
ದೇವರಿಗೇ ಹೋಗೀ ಬರತೀವೋ || ೯ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.