ವಿಷವನೌಷಧಿಯೆಂದು ಎಮ್ಮನ್ನದಾ ಕೃಷಿಯೊಳದಾವ ಹಿಡಿತವಿಲ್ಲದೆರೆಯುತಿರೆ ಔಷಧ ವಿಜ್ಞಾನಕಿಂದಮಿತದವಕಾಶವಲಾ ವೇಷದೊಳಿಪ್ಪಜ್ಞಾನವನೆ ವಿಜ್ಞಾನವೆನೆ ವಿಶೇಷದವಕಾಶವೆಲ್ಲರಿಗು ಭಲಾ – ವಿಜ್ಞಾನೇಶ್ವರಾ *****...

ಹಕ್ಕೀ ವೋಡ್ಸೂ ನೆವನಾ ಮಾಡಿ ಕವಣೀ ಬೀಸಿದ್ಯಾ? ಚಿಕ್ಕಾ ಹುಡಗೀ ಮಾತ ಕೇಳಿ ನಾಟಾ ಹೂಡಿದ್ಯಾ? ||೧|| ನವಲಾ ಬಂತೋ ನವಲಾ ನಮ ಸೋಗಿ ಬಣ್ಣದ ನವಲಾ ನವಲಾ ಬಂದರೆ ಬರಲೀ ನಮ್ಮಗೆ ವಜ್ರದ ಬಣ್ಣದ ನವಲಾ ||೨|| ಸುಗ್ಗೀ ಸರ್‍ವತ್ತಾದಲ್ಲಿ ಹೂವಿನಂತಾ ಪಾರವಾ ನ...

ಜೀವನದ ಗುರಿ ಸಾಫಲ್ಯವಾಗಲಿ ಜೀವನಕ್ಕೊಂದು ಶುಚಿತ್ವ ಇರಲಿ ಮಲಿನತೆ ಸ್ವಾರ್‍ಥ ವಿಷ ಜಂತು ಯಾವ ಭಾಗದಿಂದಲೂ ಬೇಡ ಇನಿತು ಮನದ ವಿಕಾರತೆ ತ್ಯಾಗಿಸು ದೇವರ ಸಾಕ್ಷಾತ್ಕಾರದತ್ತ ಸಾಗಿಸು ಹೃದಯವು ವಿರಾಗ ಭಾವದಿ ಹೊಳೆಯಲಿ ಮನವು ತ್ಯಾಗ ಭಾವದಿ ತೊಳೆಯಲಿ ಸು...

ಕಟ್ಟುತಾವೆ ಹಕ್ಕಿ ಮಾಡಿನಲ್ಲಿ ಗೂಡು ಎಂಥ ಸಂಭ್ರಮ ಎಂಥ ಹುಲ್ಲು ಎಂಥ ಕಡ್ಡಿ ಈ ಮಾಡಿನಲ್ಲಿ ಬಂದು ಸೇರಿ ಎಂಥ ಸಂಭ್ರಮ ಕಟ್ಟುತಾವೆ ಜೇನ್ನೊಣ ಕೊಂಬೆಯಲ್ಲಿ ಹೊಟ್ಟು ಎಂಥ ಸಂಭ್ರಮ ಎಂಥ ಪರಾಗ ಎಂಥ ಮಧುರ ಈ ಕೊಂಬೆಯಲ್ಲಿ ಬಂದು ಸೇರಿ ಎಂಥ ಸಂಭ್ರಮ ಹುಟ್ಟ...

ಬೇಡದೆ ಬಿಸುಡಿದ ವಸ್ತುವೊಲಾಯ್ತಿಳೆ ಕೆಳ ಕೆಳಗಾಳದ ಕಣಿವೆಯೊಳು; ಕಪ್ಪೆಯ ಗೂಡೋ, ಹುತ್ತವೊ ಇದು ಎನೆ ನಗೆಗೇಡಾಯಿತು ನೆರೆಹೊಳಲು; ಕೆರೆಯೋ ಕೊಚ್ಚೆಯೊ, ಪೈರೋ ಪಾಚೆಯೊ, ಹಳುವೋ ಹುಲ್ಗಾವಲ ಹರಹೋ? ಎನ್ನುತ ಭ್ರಮಿಸುವ ತೆರವಿಂದಾಯಿತು ನಂದಿಯ ಬೆಟ್ಟದ ಮೇ...

ಅತ್ತಿ ಸಸ್ತೆರ ಜಗಳಾ ಹತ್ತು ವರುಷವು ಆಗಿ| ಬಿಚ್ಚಿ ಹೇಳ್ಯಾಳ ಮಾತ ತನ್ನ ಮಗನ ಮುಂದ| ಸೂಯಿ ||೧|| ಬಿಚ್ಚೀನೆ ಹೇಳ್ಯಾಳ ಮಗನ ಮುಂದ ಈವ ಮಾತಾ| ಬಿಟ್ಟಬಿಡೊ ಮಗನೆ ನಿನ್ನ ಮಡಽದೀನ| ಸೂಯಿ ||೨|| ಬಿಟ್ಟಾರ ಬಿಡಲಾಕ ಕಟ್ಟಿದ್ದ ಗಂಟಲ್ಲ| ಹತ್ತು ಮಂದಿ ರ...

ಕಾಣಲಿಹುದನು ಕಂಡೆನೆಲ್ಲ, ಕೊಳ್ಳಲಿಹುದನು ಕೊಂಡೆನೆಲ್ಲ, ಹಿರಿವುದೆಂದೀ ಸಂತೆ ಬಲ್ಲ ರಾರು ನೆರಸಿದನಲ್ಲದೆ? ೪ ಬಂದು ಪೋಪರು ಮೊತ್ತಮೊತ್ತದೆ- ಯಾರಿಗೇಕೇನೆಂದು ಗೊತ್ತದೆ? ಬಾಳದೊಡವೆಗೆ ಬೆಲೆಯ ತೆತ್ತುದೆ ನನ್ನ ಪಾಲಿನ ಕೌತುಕ. ೮ ಇಲ್ಲಿ ಇನ್ನಿರಲಿಷ್...

ಕನ್ನಡಮ್ಮನ ಕರುಳಿನ ಕುಡಿಯೆ ‘ಏನಾದರೂ ಆಗು’ -ಮೊದಲು ಕನ್ನಡ ಮಣ್ಣಿನ ಸತ್ವಹೀರಿ-ನೀ ಗಂಧದ ಮರವಾಗು-ನೀ ಗಂಧದ ಕೊರಡಾಗು ಪಂಪ-ರನ್ನ-ಸರ್ವಜ್ಞ-ದಾಸರ ಜ್ಞಾನದ ಬೆಳಕಲ್ಲಿ ತೊಳೆಯುತ ನಿನ್ನಯ ಕತ್ತಲ ಕೊಳೆಯನು ಸ್ಫಟಿಕವೇ ಆಗಿಲ್ಲಿ-ಬೆಳ ಕಾಗುತ ಬೆಳೆಯುತಲಿ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...