
ಅಧಿಕ ಇಳುವರಿಗೆಂದೇನೇನೋ ಮಾಡುತಲಿರಲು ಅಧಿಕವಾಗಿಹುದಲಾ ಎಮ್ಮೊಳಗೆ ರೋಗರುಜಿನಗಳು ಬದನೆ ಬೆಂಡೆಯೊಳಿದ್ದ ರೋಗವನಲ್ಲಿಂದಲೋಡಿಸ ಲದುವೆ ಬಂದಡರಿಹುದೆಮ್ಮ ತನುವಿನೊಳು ಕಾದುವಾ ವಿಷವದರ ಹಿಂದು ಹಿಂದಿನೊಳು – ವಿಜ್ಞಾನೇಶ್ವರಾ *****...
ಆ ಹೂವ ಈ ಹೂವ ಕೊಯ್ಯುವಳೇ ಆ ದಂಡಿ ಈ ದಂಡೀ ಕಟ್ಟುವಳೇ || ೧ || ಆ ಹೂವ ಈ ಹೂವ ಮುಡಿಯುವಳೇ ಆ ಕುಣಿತ ಈ ಕುಣಿತ ಕೊಣಿಯುವಳೇ || ೨ || ಮಲಕೂ ಮಲಕೂ ನಡಿಯುವಳೇ ಆ ಕುಣಿತ ಈ ಕುಣಿತ ಕೊಣಿಯುವಳೇ || ೩ || ಅತ್ತಾ ಇತ್ತಾ ನೋಡುವಳೇ ಬಾರೇ ಬಾರೇ ನನ್ನವಳೇ ...
ಬಾಲ್ಯದಲಿ ತಾರ್ಕಿಕರ ತಾತ್ವಿಕರ ಸಭೆಗಳಿಗೆ ಆದರದೊಳಾಂ ಸಾರಿ ವಾದಗಳ ಕೇಳಿ, ಕಾದಾಟಕೆತ್ತ ಕೊನೆಯೆಂದು ಕಾಣದೆಯಿರಲು ಪೋದ ದಾರಿಯೊಳೆ ನಡೆಯುತ ಮರಳಿ ಬಂದೆಂ. *****...
ಒಬ್ಬನೆಂದರೊಬ್ಬನೇ ಒಬ್ಬನೊಳಗೆ ಇಬ್ಬನೇ ಇಬ್ಬನೇ ಮೂವನೇ ಒಬ್ಬನೊಳಗೆ ಎಷ್ಟನೇ ಒಂದು ಒಡಲ ನೋಡಿ ನಾವು ಒಬ್ಬನೆನುವೆವು ಒಂದು ಒಡಲಿಗೊಬ್ಬನೇ ಎಂದುಕೊಳುವೆವು ಒಬ್ಬನಲ್ಲ ಇಬ್ಬನಲ್ಲ ಒಳಗಿರುವವನಿಗೆ ಲೆಕ್ಕವಿಲ್ಲ ಬಂದು ಹೋಗಿ ಮಾಡುತಾರೆ ಒಕ್ಕಲಿಗರೆ ಎಲ್ಲ...
ಸೃಷ್ಟಿ ಸ್ವಯಂಪ್ರಭೆಯಗುಹೆಯ ದಾರಿಗನಾಗಿ ಚೇತನಂ ನಡೆಯುತಿರೆ, ವಿಸ್ಮಯಂಗೊಳಿಸಿತಿದ ನೂತನದ ನಸುಕೊಂದು ಒಂದೆಡೆಯೊಳ್ ; ಅದರಿಂದ ಸ್ಪಷ್ಟ ಮಂದದಕಾಯ್ತು ಅಹಮಸ್ಮಿ ಎಂಬರಿವು. ನಾನುಂಟು’ ಎನ್ನುತಿದು ಹಿಗ್ಗಿ ಕಣ್ಮನ ತೆರೆಯ- ಲೆನಿತು ಭಯಮಾಯ್ತದಕೆ...













