ನಟ್ಟಿರುಳ ಕರಿಮುಗಿಲ ನೀರ್-ತುಂಬಿಗಳ ನಡುವೆ ಹುಣ್ಣಿಮೆಯ ಕಣ್ಣ ತೆರೆದಿದೆ. ತಾರೆ ಬಂದಿವೆ ಬಾನ ಬೀದಿಗೆ. ಅತ್ತ ಹಿಡಿದ ಸೋನೆಯ ಶ್ರುತಿಗೆ ಗಾಳಿಯೇ ಹಾಡುತಿದೆ. ಇತ್ತ ಈ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ...
ಕಾಲದ ಕಡಲಲಿ ಉಸಿರಿನ ಹಡಗು ತೇಲುತ ನಡೆದಿದೆ ಹಗಲೂ ಇರುಳೂ; ನೀರಲಿ ತೆರೆದಿವೆ ನಿಲ್ಲದ ದಾರಿ.- ಎಲ್ಲಿಂದೆಲ್ಲಿಗೆ ಇದರ ಸವಾರಿ! ಕಾಮನ ಕೋರುವ ಕಣ್ಣು ಇದಕ್ಕೆ, ಬಯಕೆಯ ಬೀರುವ ಬಾವುಟ-ರೆಕ್ಕೆ, ಕ್ಷುಧಾಗ್ನಿ ಹೊರಳುವ ತುಂಬದ...
"ಗಂಡಯ್ಯ, ಗಂಡಯ್ಯ, ಬಿಡು ನಿನ್ನ ಚಿಂತೇಯ? ಪರದಾಟ ಸಾಕಿನ್ನು, ಮಹರಾಯ! ನಾ ನಿನ್ನ ಕೈಹಿಡಿದ ಹೆಂಡತಿಯೆ ಆಗಿರಲಿ,- ನಿನ್ನ ಮನೆಯಾಳಲ್ಲ ಸ್ವಾಮಿ !" ಎರಡರಲಿ ಒಂದೇನೊ ಆಳಾಗಿ ಇರಬೇಕು, ನನ್ನ ಚಿನ್ನಾ, ಓ ನನ್ನ...
ಹಾಸಿಗೆಯೆ ಹರಸಿರುವ ದುಂಡುಮಲ್ಲಿಗೆಯರಳೆ ಆ ತುಂಬು ಹೆರಳ ಹೆಣ್ಣೆಲ್ಲಿ? ಬಿಳಿ ದಿಂಬಿನಂಚಿನಲಿ ಗೆರೆ ಬರೆದ ಕಾಡಿಗೆಯೆ, ಆ ದೀಪದುರಿಯ ಕಣ್ಣೆಲ್ಲಿ? ಅತ್ತ ಮಂಚದ ಕೆಳಗೆ ಬಿದ್ದ ಕಾಲುಂಗುರವೆ, ಆ ನವಿಲನಡೆಯ ಹೆಣ್ಣೆಲ್ಲಿ? ಬೆಳ್ಳಿ ಬಟ್ಟಲಿನೊಳಗೆ...
ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು. ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು. ಜೊಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು. ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು...