
ಈ ನೆಲ, ಕಲ್ಲು-ಮಣ್ಣು, ಈ ವಾಸ್ತವತೆ ವ್ಯವಹಾರ ಈ ಲಿಂಗ ಬೇರು, ಈ ಅಳ, ಈ ಎಲುಬು, ಈ ಗರ್ಭಗುಡಿ ಈ ಸಾವು ಗೋಳು, ಈ ಮಾಂಸದ ಹಸಿವು ಕರುಳಿನ ನಾಚಿಕೆಗೇಡಿತನ ಈ ಕಾಲದ ಕರಾಳ ಹಸ್ತ, ಈ ಇರುಳ ಕಾಳ ಕುಂತಳ ಲೋಕಗೆದ್ದ ಹಣ, ಹೆದರಿಸುವ ಹೆಣ ಈ ಹಗರಣ ಹಗಲು, ಒ...
ನಮ್ಮ ಮನೆ ಹೊತ್ತಿಕೊಂಡು ಉರಿಯುತ್ತಿದೆ ನೋಡಿರೊ! ಆದರೂ ನಮ್ಮದು ಭವ್ಯ ದಿವ್ಯ ಎಂದು ಭ್ರಮಿಸಿದ್ದೀರಿ ನಮ್ಮ ಜನ ಕ್ಷಯ ರೋಗಿಗಳಾಗಿದ್ದಾರೆ ಕಾಣಿರೋ! ಆದರೂ ನಾವು ಭೀಮ-ರಾಮಾರ್ಜುನರೆಂದು ನಂಬಿದ್ದೀರಿ ನಮ್ಮ ಕೋಣೆಗಳು ಕತ್ತಲ ಮಸಿ ಉಗುಳುತ್ತಿವೆಯಲ್ಲರೋ...
ನೀನೆಲ್ಲಿಂದು? ಕಣ್ಮರೆಯಾದ ಚಿಕ್ಕೆ ಆಗಾಗ ಹೊಳೆದು ಕರಗುವಂತೆ ಮನದ ಮೆಲುಕಾಟದಲ್ಲಿ ಕನಸಾಗಿ ಕಾಣುವೆ ನಿನ್ನೊಡನಾಟದ ಹಾಲುಸಕ್ಕರೆಯ ಸವಿಯಂತೂ ನನಗಿಲ್ಲ ಆದರೆ ಆಗಾಗ ಫಳಕ್ಕೆಂದು ಮಿಂಚಿ ತೆರವಾದ ಬಾನಿಂದ ಮಳೆಯಂತೆ, ಅಳುವಿನಂತೆ ಇಳೆಗಿಳಿಯುವೆ, ನೆಲವೇನ...
ಅವಳ ಮೈಗೆ ಮಣ್ಣ ಬಣ್ಣ, ಮನಕ್ಕೂ ಮಣ್ಣ ಸತ್ವ, ಅವಳು, ಆಗಾಗ ಹರಿಸುತ್ತಾಳೆ ನಲ್ಮೆಯ ನಗುವನ್ನು, ಮೈತುಂಬಿಕೊಂಡ ತೊರೆಯನ್ನು. ಕೆಲವು ದಿನ ಎಲುಬು ಮೈಯಲ್ಲಿ ನರನರ ಬರಲಾದ ಮರದಂತಿರುತ್ತಾಳೆ, ‘ಎಷ್ಟು ಸೊರಗಿರುವಿಯಲ್ಲೇ ತಾಯಿ’ ಎಂದರೆ ಅಯ್ಯೋ ಬಿಡಪ್ಪಾ ...














