ಅಂಗಳಕ್ಕಿಳಿದು ತಮ್ಮಟೆ ಬಾರಿಸಿ ಶಂಖ ಊದಿ ದೇವರ ಬಲ ಹೆಚ್ಚಲಿ ಹಾವಿನ ಬಲ ಕುಂದಲಿ ಹರಿಯೋ ಹರಿ ಎನ್ನುತ್ತಾ ಸುತ್ತಿದರು ಮುಳುಗಿ ಮಿಂದು ಉಂಡು ಮಲಗಿದರು ಅಂದಿಗೆ ಧನ್ಯತೆ ಫ್ಯಾಕ್ಟರಿಗಳ ಚಿಮಿಣಿಗಳ ದಟ್ಟ ನೆರಳುಗಳ...
ಓ ಓಸಿರಿಸ್! ನೈಲ್ ನದಿಯೇಕೆ ಉಕ್ಕಲಿಲ್ಲ? ನಿನ್ನ ಕೊಳೆಯುತ್ತಿರುವ ಮೈಯಿಂದ ಸಸ್ಯಗಳೇಕೆ ಹುಟ್ಟಲಿಲ್ಲ? ನಿನ್ನೆಲುಬುಗಳ ಹುಡುಕಿ ತಂದು ರಾಸಿ ಹಾಕಿ ಕರೆದರೂ ಕಾದರೂ ಸತ್ತ ನೀ ಮರಳಿ ಬರಲಿಲ್ಲ! ಆಶ್ವಯುಜ ಶುದ್ಧ ಮಾರ್ನಮಿ ಬರಲೆಂದು...
ನಾಯಿಗಳಿದ್ದಾವೆ! ಎಚ್ಚರಿಕೆ! ಎಂದು ಯಾಕೆ ಬೆದರಿಸುತ್ತೀರಿ, ಫಲಕದ ಹಿಂದೆ ನಿಂದು? ನಾವು ಬರೇ ಈ ಬೀದಿಯಲ್ಲಷ್ಟೆ ಹೋಗುತ್ತೇವೆ ಮೌನ ಅಸಹ್ಯವಾದಾಗ ಮಾತಾಡುತ್ತೇವೆ ಅಳದಿರುವುದಕ್ಕಾಗಿ ಒಮ್ಮೊಮ್ಮೆ ನಗುತ್ತೇವೆ ನಾಯಿಗಳನ್ನು ಛೂ ಬಿಟ್ಟು ಬೆದರಿಸುತ್ತೀರಿ ನೀವು ನಾಯಿಗಳಿದ್ದಾವೆ...
ಕೆಲವೊಮ್ಮೆ ಫಕ್ಕನೆ ಕಣ್ಣು ಕತ್ತಲೆಗಟ್ಟಿ ಇದೀಗ ಎಲ್ಲವೂ ಮುಗಿದೆ ಹೋಯಿತು ವಸ್ತು ಸ್ಥಲ ಕಾಲಗಳ ದಾಟಿ ಎಲ್ಲಿಗೋ ಹೊರಟೆ ಹೋಯಿತು ಎನಿಸುತ್ತದೆ ಸತ್ತವರ ನೆನಪು ಬರುತ್ತದೆ ನೀರಿನಲ್ಲಿ ಬಿದ್ದವರ ಹಾಸಿಗೆಯಲ್ಲಿ ಸತ್ತವರ ಸ್ವಂತ ರಕ್ತ...
ಬೇಹಿನವರಿಂದ ಸುದ್ದಿ ಸಂಗ್ರಹಿಸಿ ರಾಯಭಾರಿಗಳ ಕರೆಸಿ ಕಿಟಕಿಬಾಗಿಲುಗಳ ಭದ್ರಪಡಿಸಿ ಮಂತ್ರಾಗಾರದಲ್ಲಿ ಒಂದು ದುಂಡು ಮೇಜಿನ ಸುತ್ತ ಆಪ್ತೇಷ್ಟನಂಟರೂ ಮಂತ್ರಿಗಳೂ ವಿಶೇಷ ಆಮಂತ್ರಿತರೂ ಪರಿಣತರೂ ಮಂಡಿಸಿ ಗೂಢಾಲೋಚನೆ ನಡಿಸಿ ಫೈಲುಗಳ ಮೇಲೆ ಫೈಲುಗಳೋಡಿ ಟಿಪ್ಪಣಿಗಳ ಕೆಳಗೆ...
ಎಲ್ಲರೂ ಎದ್ದು ಹೋದರು ಒಬ್ಬೊಬ್ಬರಾಗಿ ಕೆಲವರು ಗುಂಪುಗಳಾಗಿ ಇಲ್ಲಿ ಬಂದಿದ್ದ ಜನರು ಗಳಿಗೆಯ ಮೊದಲು ಇಲ್ಲಿ ಸೇರಿದ್ದವರು ಸೇರಿ ಹೆಣ್ಣು ಗಂಡುಗಳು ಪಾನೀಯದಲ್ಲಿ ಸಂಗೀತದಲ್ಲಿ ನೃತ್ಯದಲ್ಲಿ ಸೇರಿ ಒಂದಾಗಿ ಒಂದೆ ಕ್ರಯಾವಿಧಿಯಲ್ಲಿ ತೊಡಗಿಸಿಕೊಂಡವರು ಟೇಬಲಿನ...
ಹೋಟೆಲುಗಳಲ್ಲಿ ಥಿಯೇಟರುಗಳಲ್ಲಿ ಆಫೀಸುಗಳಲ್ಲಿ ಅವರೇ ಇದ್ದರು ಏಕಾಂತದಲ್ಲೂ ಅವರು ಬಂದರು ಪರಿಚಯದವರಂತೆ ಕಣ್ಸನ್ನೆ ಮಾಡಿ ಕರೆದರು ಕೈ ಕುಲುಕಿದರು ಅಮುಕಿದರು ನಕ್ಕರು ವಿಚಾರಿಸಿದರು ಉಪದೇಶಿಸಿದರು ಮಾರ್ಗದ ಕೊನೆ ಮುಟ್ಟಿದಾಗಲೂ ನಿಂತೇ ಇದ್ದಾಗಲೂ ನರನರ ಎಳೆದಾಗಲೂ...
ಇಳಿದೆ ಇಳಿದು ಜನಸ್ತೋಮದಲ್ಲಿ ಸೇರಿ ಸೇರಿ ನುಗ್ಗಿದೆ ನುಗ್ಗಿ ಸ್ಟೇಶನಿನ ಹೊರಬಂದೆ ಬಂದು ಈ ಅಗಾಧ ಜನಸ್ತೋಮದಲ್ಲಿ ನುಗ್ಗಿದೆ ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ ಸಾಗಿ ನಗರಕ್ಕೆ ಬಂದು ಎದ್ದೆ ಎದ್ದು...