Home / ಬೊಗಸೆಯೊಳಗಿನ ಬಿಂದು

Browsing Tag: ಬೊಗಸೆಯೊಳಗಿನ ಬಿಂದು

ಓ ಈಡಿಪಸ್ ನಿನ್ನೆದೆಂತಹ ಬದುಕು ಅಮಾನುಷ ವಿಧಿಬರಹಕೆ ಈಡಾಗಿ ಅರಿಯದೆ ಹಿಂದೆಂದೂ ನಡೆಯದಿದ್ದ ಮುಂದೆಂದೂ ನಡೆಯದಿರುವ ಘನಘೋರ ದುರಂತಕ್ಕೆ ಬಲಿಯಾದೆ ನವಮಾಸಗಳು ತನ್ನೊಡಲಲಿ ನಿನ್ನನಿರಿಸಿಕೊಂಡ ಹೆತ್ತವಳಿಗೆ ಮಾಲೆ ಹಾಕಿ ಅವಳೊಡೆಯನಾದೆ ಅವಳ ನಗ್ನತೆಯಲಿ...

ಇಷ್ಟುಕಾಲ ಒಟ್ಟಿಗಿದ್ದು ಅರ್ಥೈಸಿ ಕೊಂಡದೆಷ್ಟು ನನ್ನ ಕಣ್ಣೀನಾಳದ ಭಾವ ನೀ ಅಳೆಯಲು ನಿನ್ನ ಅಂತರಂಗದ ಬಿಂಬವಾ ನಾ ಅರಿಯಲು ಯತ್ನಿಸಿದಷ್ಟು ಗೌಪ್ಯ ಇದ್ದವಲ್ಲ ಮದ್ಯ ಗೋಡೆಗಳು ನೀನು ಕಟ್ಟಿದ್ದೊ ನಾನು ಕಟ್ಟಿದ್ದೊ ಅಂತು ಎದ್ದು ನಿಂತಿದ್ದವು ಆಳೆತ್ತರ...

ದ್ವೀಪದ ಸುತ್ತಲೂ ನೀಲ ಕಡಲು ಹವಳದ ಒಡಲು ಮುಚ್ಚಿಟ್ಟ ಲೋಕ ಬಿಚ್ಚಿಡಲಾರದ ನಾಕ ಆಳದಲ್ಲೆಲ್ಲೋ ಬಿಸುಪು ಕಣ್ತಪ್ಪಿಸುವ ಹೊಳಪು ದೂರ ಬಹುದೂರ ದ್ವೀಪದ ಮಡಿಲು ಈಜಿದಷ್ಟು ದಣಿವು ಗುರಿ ತಲುಪಲಾರದ ಸೆಳವು ಬೇಕು ಇಂತಿಷ್ಟೆ ಕಸುವು ಹವಳದ ದಾಹ ದ್ವೀಪದ ಮೋಹ ...

ಧರೆಯ ಮೇಲೆಲ್ಲಾ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು ಹಾರುತ್ತವೆ ಒಮ್ಮೊಮ್ಮೆ ಒಡಲೊಳಗೆ ಅಂದೆಂದೋ ಯಾವನದೋ ತೆವಲಿಗೆ ಹುಟ್ಟಿದ ಆಚಾರ ವಿಚಾರಗಳ ತುಳಿದರೆ, ಉಕ್ಕುಕ್ಕಿ ಹರಿಯುತ್ತಿದ್ದ ಮಧುರ ಪ್ರೇಮದ ಪರಿ ಪರಿಧಿದಾಟಿ ವಿಜೃಂಭಿಸಿ ಹಿಡಿತದ್ಹೊರಗೆ ಹಾರಿದರ...

ಅದಾವ ಕ್ಷಣದಲೊ ಗಮ್ಯತೆ ಸೇರಿ ಮಾಸವೊಂದರಲ್ಲೇ ಅಸ್ತಿತ್ವ ತೋರಿ ಅಸ್ಪಷ್ಟತೆಯಲ್ಲೇ ಪ್ರಭಾವ ಬೀರಿ ನಿನ್ನಾಟ ಒಡಲಲಿ ಬಾರಿ ಮತ್ತೇರಿ ಸೃಷ್ಟಿಕ್ರಿಯೆಯ ಆ ಕೈಚಳಕ ಹೊತ್ತು ತಂದಿದೆ ವರ್ಣಿಸಲಾಗದ ಪುಳಕ ಒದಿವಾಗ ಅವ ಎಡ ಬಲಕ ರೋಮಾಂಚನದ ಸಿಹಿಸಿಂಚನ ಮನಕ ನಿ...

ಒಡಲಲ್ಲೊಂದು ಕುಡಿ ಚಿಗುರಲಿಲ್ಲವೆಂದೇಕೆ ಹಲುಬುವಿರಿ, ಕುಡಿ ಗಾಗಿ ಹಂಬಲಿಸಿ ಕೊರಗಿ ಸೊರಗಿ ಬಾಳನ್ನೇಕೆ ವ್ಯರ್ಥಗೊಳಿಸಿ ಶೂನ್ಯ ವನ್ನಾಗಿಸುವಿರಿ ನಿಮ್ಮದೇನು ರಘುವಂಶ ಸೂರ್ಯವಂಶವೇ ಕುಲದೀಪಕನಿಲ್ಲದೆ ವಂಶ ಅಳಿಯತೆನಲು ಒಡಲು ಬರಿದಾಗಿಸಿದ ಆ ದೈವಕೆ ಸ...

ಬಣ್ಣಗೆಟ್ಟ ಇರುಳುಗಳ ನಡುನಡುವೆ ಹೊರಳಿ ನರಳಿವೆ ವಿರಹದುರಿಯ ದಳ್ಳುರಿ, ಎಲ್ಲಿ? ಎಲ್ಲಿ? ಹೋದವೆಲ್ಲಿ ಮುಗಿಲ ಪಡೆ? ಸುರಿಸದೆ ಒಂದಿಷ್ಟು ತಣ್ಣನೆ ಹನಿಗಳ ಬಾಯಾರಿವೆ, ತೊನೆಯುವ ಬಯಕೆ ಆಸೆಗಳ ಚೆಲ್ಲಾಟದಲಿ ಮೂಕಸಂಕಟ ಯಾರಿಗೆ ಬೇಕಾಗಿತ್ತು ನೂರು ಹೆಣ್ಣ...

ಕುದುರೆ ಏರಿಬರುವ ಶೂರಧೀರ ನನ್ನವ ಲೋಕಸುಂದರ ಚೆನ್ನ ಚೆನ್ನಿಗ ತನ್ನ ತುಂಬಿಕೊಂಡ ಕಣ್ಣ ಒಳಗೆ ಮತ್ಯಾರನೂ ನೋಡ ಬಯಸದವನ ಕೊರಳಿಗೆ ತನ್ನ ಮಾಲೆ ಕನಸು ಕಂಡ ಮಾಧವಿ ಏನಾಯ್ತೆ ಸಖಿ ನಿನ್ನ ವಿಧಿ ಮಾರಾಟವಾಯ್ತೆ ಒಡಲು ಅಷ್ಟಶತ ಶ್ವೇತ ಅಶ್ವಕೆ ಹುಂಬ ಶಿಷ್ಯನ...

ಇವಳು ನನ್ನವ್ವ ತಂಪಿಗಾಗಿ ಕಾದವಳು ಹನಿ ಬೀಳದೆ ಒಡಲೆಲ್ಲ ಬಿರುಕು ಬಿರುಕು ಬರಗಾಲ ಒಳಗೂ ಹೊರಗು ಒಲೆಯ ಒಳಗಿನ ಬಿಸಿ ಕಾವು, ಕಾವಿನಲಿ ಬೆಂದ ಅವ್ವ ಹನಿಗಾಗಿ ಮೊಗವೆತ್ತಿ ನಡುನೆತ್ತಿಯ ಮೇಲಿನ ಕಪ್ಪು ಮೋಡಕ್ಕಾಗಿ ಕಾಯುತ್ತಲೇ ಇರುವಳು ಬೆಳ್ಳ ಬೆಳ್ಳನೆ ...

ನನ್ನ ಎದೆಯ ಮೀಟಿಮೀಟಿ ಏನ ಹುಡುಕತಲಿರುವೆ ಅಲ್ಲಿಲ್ಲ ಯಾವ ಲೋಹದದಿರು ಹೊನ್ನ ಹೊಂಗನಸು, ಬೆಳ್ಳಿನವಿರು ಪಚ್ಚೆ ಹವಳದ ಭಾವಗಳು ಬರಿದು ಬರಿದು, ಈಗಿನ್ನೇನು ಅಲ್ಲಿಹುದು ನೀನಿದ್ದೆ ಅಂದು ಅಲ್ಲಿ ಬರಿ ಛಾಯೆ ಇಂದು ಇಲ್ಲಿ ಈ ಮನವ ಬಗೆದು ಬಗೆದು ನೆತ್ತರವ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...