ರಾವಣಾಂತರಂಗ – ೨೦
ಅತಿಕಾಯನ ಅವಸಾನ ಕುಂಭಕರ್ಣನ ಮರಣವಾರ್ತೆ ನನ್ನ ಕಿವಿಗೆ ಕಾದಸೀಸವನ್ನು ಹೊಯ್ದಂತಾಯಿತು. ಎಲ್ಲರೂ ಕೈಬಿಟ್ಟು ಹೋಗುತ್ತಿದ್ದಾರೆ. ಧೂಮ್ರಾಕ್ಷ, ರುಧಿರಾಸುರ, ಪ್ರಹಸ್ತ, ಈಗ ಕುಂಭಕರ್ಣ ನಾಳೆ ಇನ್ಯಾರೋ ಹೋಗಲಿ ಎಲ್ಲರೂ ಸಾಯಲಿ, ಲಂಕೆಯೇ ನಿರ್ನಾಮವಾಗಲಿ ನನ್ನ ಹಠಕ್ಕೆ...