
ಸದಾ ಹಸಿರಿನ ಉಸಿರು ಕವಿಯ ಕಾವ್ಯದ ಭೂಮಿ ಆಶೆಗಳಿವೆ, ಕನಸುಗಳಿವೆ ನೂರಾರು ಉಸಿರಾಡಿದರೆ ನನ್ನ ಕಾವ್ಯ ಬದುಕುತ್ತೇನೆ. ಇಲ್ಲಿಯ ಒಂದೊಂದು ವಸ್ತುವಿನಲ್ಲೂ ಗತಮರೆತ ಇತಿಹಾಸ ಹುಡುಕುತ್ತೇನೆ. ಕಾವ್ಯ ಬದುಕಿದರೆ ಉಸಿರಾಡುತ್ತೇನೆ. ವಿಶಾಲ ಭೂಮಿಯ ಮೇಲೆ ಸ...
ಕೊತ ಕೊತನೆ ಕುದಿದು ಉಕ್ಕುವ ಸಾರಿನಲಿ ಉಪ್ಪು ಹುಳಿ ಖಾರಗಳ ಹದ ಮಾಡಿದ ಹೊದರು ಉಕ್ಕಿ ಬರುವ ನೊರೆಯ ಶಾಪ ವಿಮೋಚಿತ ಗುಳ್ಳೆ ಒಡೆದು ಸ್ರವಿಸಿದ ಕನಸು ಮುಚ್ಚಿದ ಕದ ಬಿಚ್ಚಿದ ಶಾಪ ಮುಕ್ತ ಅಹಲ್ಯೆಯರ ನೋವಿನ ಹನಿಗಳಲ್ಲಿ ಬೆಳಕಾಗಿ ಕುಡಿಯೊಡೆದು ಹೂವಾಗಿ ...
ವ್ಯವಸ್ಥೆಯ ಒಳಗಿನಿಂದ ಒಂದೊಂದೇ ಪ್ರಶ್ನೆಗಳೇಳುತ್ತವೆ ರಾಜಕೀಯದ ಬಣ್ಣ ಬಯಲಾಗುತ್ತದೆ ಶಸ್ತ್ರಾಸ್ತ್ರ ಕೆಳಗಿಟ್ಟ ಅವರು ಶಾಂತಿ ಮಂತ್ರಗಳ ಜಪಿಸುತ್ತಿದ್ದಾರೆ ನೋಡು! ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲಿ ಕೆಂಪು ಬಣ್ಣಕ್ಕೆ ಅನೇಕ ಛಾಯೆಗಳಿವೆ ತಾನೇ? ಶ...
ಅಂದು ಇಡೀ ರಾತ್ರಿ ಬಿಳಿಯ ಹಾಳೆಗಳಲಿ ಕಪ್ಪು ಅಕ್ಷರಗಳನ್ನು ಮೂಡಿಸುತ್ತಲೇ ಇದ್ದೇ ಕವಿತೆ ನನ್ನೊಳಗೋ ನಾನು ಕವಿತೆಯೊಳಗೋ ಇಬ್ಬರೂ ಒಂದಾದ ಅದ್ಭುತ ರಾತ್ರಿಯದು. ಅರಿವಿಲ್ಲ ನನಗೆ ಲೋಕದ್ದು ವಶೀಕರಣಗೊಂಡಿದ್ದೆ ಕಾವ್ಯ ಪುಂಗಿಯ ನಾದಕೆ ಹೆಡೆಯಾಡಿಸುತ್ತಿ...
ಮುಳ್ಳುಗಳ ಮಧ್ಯದಲ್ಲಿಯೇ ಗುಲಾಬಿ ಹುಟ್ಟುತ್ತದೆ ನಿಜ. ಪ್ರೀತಿ ಹೂ ಅರಳುವ ಕ್ರಿಯೆ ನಿರಂತರ ನಡೆಯುತ್ತಲೇ ಇರುತ್ತದೆ ನೋಡು. ಅಮವಾಸ್ಯೆ ಕತ್ತಲಲ್ಲಿ ಏಕಾಕಿ ಕಾಡಿನಲ್ಲಿ ಪಯಣಿಸುತ್ತೇನೆ ನಿಜ, ರಾತ್ರಿ ಕಳೆದುಹೋದ ಸೂರ್ಯ ಮತ್ತೇ ಹುಟ್ಟುತ್ತಲೇ ಇರುತ್ತ...
ಅದು ಕೋಟೆಯಂತೆ ಕಟ್ಟಿದ ಗೋಡೆ ದಪ್ಪ ದಪ್ಪ ಕಪ್ಪು ಕಲ್ಲಿನ ಕೋಟೆ ಗೋಡೆಯಾಚೆಗೆ ಸ್ವಚ್ಛಂದ ಪಾರಿವಾಳ ಗೋಡೆಗಳ ಮಧ್ಯ ನಾನು ಸಮಾಧಿ. ಬದುಕು ಕಬ್ಬಿಣದ ಕಠಿಣ ಹಾದಿ ಹಿಮಾಲಯದ ಹಿಮನೀರು ನಾನಾದರೆ ಬಿಸಿನೀರ ಬುಗ್ಗೆಯಂತೆ ಕುದಿವ ನೀರವನು ಕಿಲುಬುಗಟ್ಟಿದ ಸಂ...
ಸಿಗುತ್ತದೆ ಈ ಪುಣ್ಯಭೂಮಿಯಲಿ ತಾಯಂದಿರ ಗರ್ಭಗಳು ಬಾಡಿಗೆಗೆ ತಾಯ್ತನದ ಬಯಕೆಗಳ ಅದುಮಿಟ್ಟು ದುಡ್ಡು ಕೊಟ್ಟವರಿಗೆ ಹೆತ್ತು ಕೊಡುವರು ಇಲ್ಲಿ ಬಾಡಿಗೆ ತಾಯಂದಿರು ಬಸಿರಲಿ ಮೂಡಿದ ಮಗು ಒದ್ದು ಮೈ ಬದಲಿಸುವ ಚಲನೆ ತಾಯ್ತನದ ಖುಷಿಯ ಘಳಿಗೆಯಲಿ ಕಲ್ಲಾಗಿ ...
ಸುಮ್ಮನೆ ಬಿದ್ದಿರುವ ಉದ್ದುದ್ದ ಸರಹದ್ದು ಎತ್ತೆರತ್ತರಕ್ಕೆ ಬೆಳೆದ ದೇವದಾರುಗಳು ಅಸ್ತಿತ್ವ ಅಲುಗಾಡುವ ಯಾತನೆಗಳ ಮಧ್ಯೆ ಶಬ್ದ ಮೀರಿದ ಸಂಕಟಗಳ ನುಂಗಿ ದೀರ್ಘ ಬದುಕಿನ ವಿಷಾದಗಳ ಮರೆತು ಗುನಿಗುನಿಸಿ ಹಾಡುತ್ತಿದೆ ನೋಡು ಗಡಿಯಲ್ಲಿ ಸರಹದ್ದುಗಳೇ ಇಲ್...
ಚೂರಾದ ಕನ್ನಡಿ ಜೋಡಿಸಿ ಪ್ರತಿಬಿಂಬ ಕಾಣುವ ತವಕ ಹರಡಿದ ತುಂಡು ಕನಸುಗಳ ಹರಿದ ಚಿಂದಿಗಳ ಹೊಂದಿಸಿ ಎಲೆ ಚಂಚಿ ಹೊಲಿಯುವಾಸೆ ಬಿರಿದ ಹಾಳು ಗೋಡೆಗಳಲ್ಲಿ ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು ಬೆಳದಿಂಗಳ ಆ ಬಯಲಿನಲಿ ಲಾಂದ್ರದ ಮಂದ್ರ ಬೆಳಕು ಚಂದ್ರನಿಗ...
ನನ್ನ ಪುಟ್ಟ ಕೆಂಪು ಹೃದಯದೊಳಗೆ ಅದೆಷ್ಟು ನೋವಿನ ಲಂಗರುಗಳು ಈ ಪುಟ್ಟ ಕಪ್ಪು ಕಣ್ಣುಗಳೊಳಗೆ ಅದೆಷ್ಟು ನೀರ ಸಾಗರಗಳು. ನನ್ನ ಪುಟ್ಟ ಮನೆಯ ಅಂಗಳದೊಳಗೆ ಅದೆಷ್ಟೋ ಸೂರ್ಯನ ಬೆಳಕಿನ ಕಿರಣಗಳು, ನನ್ನ ಪುಟ್ಟ ಗುಡಿಸಲ ಚಿಮಣಿ ದೀಪದೊಳಗೆ ಅದೆಷ್ಟು ಬೆಳಕಿ...














