
ಮೊಳಕೆಯಲ್ಲೇ ಕೊರಳ ಕುಣಿಕೆ ಕಣ್ಣು ಮೂಗು ಮುಚ್ಚುವಷ್ಟು ಧೂಳು ದಣಿವು ಸೆಟೆದ ಎದೆಯಲ್ಲಿ ನೆರೆಬಂದು ಬಿಡದೆ ಬಂಡೆ ಸಂದಿಯಲ್ಲೂ ಚಿಗುರು ಸುತ್ತಮುತ್ತೆಲ್ಲ ಮುನ್ನೂರು ಉಗುರು. ಗರಿಕೆ ಹುಲ್ಲಿನ ಮಧ್ಯೆ ಗೊರಕೆ ಹೊಡೆಯದೆ ಎದ್ದು ಕಲ್ಲ ಕ್ಯಾಕರಿಸಿ ಅತ್ತ ...
ಕಿಲ್ಲೆ ಕಿಮ್ಮತ್ತುಗಳ ಹೊತ್ತ ಗೋರಿ- ಗಳು ತೀಡಿ ತೀಡಿ ಕಿಚ್ಚು ಹುಚ್ಚೆದ್ದು ಹೋರಿ; ದಕ್ಕಿಸಿಕೊಳ್ಳುವೆನೆಂದು ದಾಪುಗಾಲು ಹಾಕುತ್ತಿದ್ದೇನೆ ಹಾರುವ ಹದ್ದು ಸುತ್ತ ಸಂಕೀರ್ಣ ಸದ್ದು ಮೂಳೆಗಳ ಕೂಳೆ ಮೇಲೆ ಕಾಲು ಹಾಕಿ ಆಟ ಆಡುತ್ತಿದ್ದೇನೆಂದು ಅನ್ನಿಸಿ...













