ಕಾಡುತ್ತಿವೆ ರಾತ್ರಿಗಳು ಹಗಲು ಕಟ್ಟಿದ ಇರುಳ ಕೋಟೆ ಒಳಗೆ ಒಂದೇ ಸಮ ಕತ್ತಿವರಸೆ ಪ್ರಾಣ ಹೋಗದ ಸಾವುಗಳು ಸದ್ದು ಮಾಡದ ನೋವುಗಳ. ಕತ್ತಲ ಸೋನೆ ಚರಿತ್ರೆಯಲ್ಲಿ ತೋಯ್ದ ಮೆದುಳ ನೆಲದಲ್ಲಿ ಮನಸ್ಸಿನ ಬೀಜ ಬಿರಿದು...
ನಾನು ಕಾಲಿಟ್ಟಲ್ಲಿ- ಕರುಳು ಕಿಟಾರನೆ ಕಿರುಚಿ ಬೆವರೊಡೆಯುತ್ತದೆ. ನೆರಳು ನಗುತ್ತದೆ. ನಾನು ಕೂತಲ್ಲಿ- ನೆಲ ಕೀವೊಡೆದು ಬಾವು ಬಿರಿಯುತ್ತದೆ; ನೋವು ಹರಿಯುತ್ತದೆ. ನಾನು ಮಲಗಿದಲ್ಲಿ- ಮಂಚ ಮೌನ ಮುರಿದು ಉರಿಯುತ್ತದೆ; ಕನಸು ಬೂದಿಯಾಗುತ್ತದೆ. *****
ಬೆದೆ ಹತ್ತಿದ ಎದೆ ಹಾಡಿದಾಗ ಸದೆ ಬಡಿಯುವ ಸಿಂಹಾಸನವೇ ಸಾವ ಸಂಭ್ರಮದಲ್ಲಿ ನೋವು ನಿವಾರಿಸುವ ಜೋಳವಾಳಿಯೇ. ಕಾಲ ಚಕ್ರ ಉರುಳುತ್ತಲೇ ಅರಿವು ಅರಳುತ್ತ ನಾಲಗೆ ನಿಧಾನವಾಗಿ ಮಿಸುಕಾಡುತ್ತಿದೆ ಬಾಯೊಳಗೆ ಬ್ರಹ್ಮಾಂಡ, ಶತಶತಮಾನದ ವಿರಾಟ್ ದರ್‍ಶನ...
ಬೋಧಿ ವೃಕ್ಷದ ಚಿತ್ರ ಬರೆದವರೆಲ್ಲ ಬುದ್ಧರಲ್ಲ ಹೆಚ್ಚೆಂದರೆ ಸಿದ್ದಾರ್‍ಥರು! ಕತ್ತಲಲ್ಲಿ ಕದ್ದು ಎದ್ದು ಹೋಗುವ ಇವರು ಬರೀ ಸಿದ್ದಾರ್‍ಥರೇ ಹೊರತು ಬುದ್ಧರಲ್ಲ. ಯಾಕೆಂದರೆ- ಬುದ್ಧರಾಗುವವರ ಬಾಯಲ್ಲಿ ನರಿ, ಮರಿಹಾಕುವುದಿಲ್ಲ. ನರಿ ನಾಲಗೆಯಲ್ಲಿ ನಯವಾಗಿ ನೆತ್ತರು...
ನಿಸರ್‍ಗವೆಂದರೆ ನನಗೆ ತುಂಬಾ ಇಷ್ಟ. ಆದರೆ ನಾನು ಹಿಗ್ಗುತಿಲ್ಲ- ಮೊಗ್ಗು ಮೌನಕ್ಕೆ, ಮಾತು ಹೂವಿಗೆ ಹಸಿರು ಹೃದಯಕ್ಕೆ, ಸೂರ್‍ಯ ಉದಯಕ್ಕೆ. ನಾನು ಹಿಗ್ಗುತ್ತೇನೆ- ಮಾವು ಮಾವಾಗಿ ಬೇವು ಬೇವಾಗಿ ಹಸಿರು ಹಸಿರಾಗಿ ಬೋಳು ಬೋಳಾಗಿ...
ನನ್ನ ಈ ನಾಡಿನಲ್ಲಿ ಭವ್ಯ ನಾಮ ಬೀಡಿನಲ್ಲಿ ಬೇಗೆಯೇ ಬೆಟ್ಟವಾಗಿ ಉತ್ತರಕ್ಕೆ ಕಾವಲು. ಬೆವರೆಲ್ಲ ನದಿಗಳಾಗಿ ಮೂರು ದಿಕ್ಕು ಕಡಲು. ಅತ್ತ ಬೆಟ್ಟ ಇತ್ತ ನೀರು ನಡುವೆ ನಗಲು ಎದ್ದವು- ಮೂಳೆಗಳೇ ಮರಗಳಾಗಿ ಆಸೆ...