ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ

ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ ಎಲ್ಲದರ ಬಲ ಮೀರಿ ಆಳುತ್ತಿರಲು ಸಾವು ಹೂವಿಗೂ ಹೆಚ್ಚು ಕೋಮಲವೆನ್ನಿಸುವ ವಿರಳ ಚೆಲುವು ತಡೆದೀತೇನು ಅದರ ಆಕ್ರೋಶವನು ? ದುರ್ಭೇದ್ಯ ಶಿಲೆಗೆ, ಉಕ್ಕಿನ ದ್ವಾರಗಳ ಧೃತಿಗೆ...

ಕಾಲಪುರುಷನ ಕ್ರೂರಹಸ್ತ ಹಳೆವೈಭವದ

ಕಾಲಪುರುಷನ ಕ್ರೂರಹಸ್ತ ಹಳೆವೈಭವದ ಭವ್ಯ ಸ್ಮೃತಿಗಳ ಗರ್ವಭಂಗ ಮಾಡಿದ್ದನ್ನು; ಎತ್ತರದ ಸೌಧಗಳೆ ತತ್ತರಿಸಿ ನೆಲಕುರುಳಿ ಮರ್ತ್ಯರೋಷಕ್ಕೆ ವಿಗ್ರಹಗಳಳಿದ್ದನ್ನು ; ದಡದ ಮಡಿಲಿಗೆ ಬೆಳೆದ ಭಾರಿ ರಾಜ್ಯಗಳನ್ನೆ ಹಸಿದ ಸಾಗರ ಉಕ್ಕಿ ನೆಕ್ಕಿ ತೇಗಿದ್ದನ್ನು; ಗಟ್ಟಿ...

ಕಾಲ ನನ್ನನು ಹೇಗೊ ಹಾಗೆ ಒಲವನೂ ಕಾಡಿ

ಕಾಲ ನನ್ನನು ಹೇಗೊ ಹಾಗೆ ಒಲವನೂ ಕಾಡಿ ಕ್ರೂರ ಹಸ್ತಗಳಿಂದ ಹಿಡಿದು ಹಿಂಡುವನು; ಮೈಯ ನೆತ್ತರು ಬತ್ತಿ ಹಣೆಯಲ್ಲಿ ಗೆರೆಮೂಡಿ ನನ್ನ ಪ್ರೇಮಿಯ ಪ್ರಾಯಭರಿತ ಹೊಂಬೆಳಗು ಕಡಿದಾದ ಕಾಲದಿರುಳಲ್ಲಿ ಮರೆಯಾಗುವುದು; ಚೆಲುವ ಪ್ರಭುವಲ್ಲಿ ಮೇಳೈಸಿರುವ...

ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ

ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ ; ಮುಂಚೆ ಸರಿದುದರ ಎಡೆದೊರೆತು ಹಿಂದಿನ ಕ್ಷಣಕೆ ಒಂದೆ ಸಮ ಸ್ಪರ್ಧೆಯಲಿ ಮುಂದೊಡುತಿವೆ ಜೊತೆಗೆ. ಕಣ್ತೆರೆದ ಬದುಕು ಬೆಳಕಿನ...

ನನ್ನನ್ನು ಮೊದಲು ನಿನ್ನ ಗುಲಾಮನಾಗಿಸಿದ

ನನ್ನನ್ನು ಮೊದಲು ನಿನ್ನ ಗುಲಾಮನಾಗಿಸಿದ ದೈವ ನನಗೊಂದು ಕಟ್ಟಳೆಯನ್ನು ವಿಧಿಸಿತು, ನಿನ್ನ ಪ್ರಿಯ ಸುಖ ಸಮಯದಲ್ಲಿ ತಲೆಹಾಕದೆ ನೀನೆ ಕರೆಸುವ ತನಕ ತೆಪ್ಪನಿರು ಎಂದಿತು. ನಾನು ಸೇವಕ ತಾನೆ ? ಒಡೆಯ ವಿಧಿಸಿದ ವಿರಹ-...

ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ?

ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ? ಕಾಯುವೆನು ನಿನ್ನ ಬಿಡುವಿಗೆ, ನಿನ್ನ ಇಚ್ಛೆಗೆ; ನನ್ನ ಕಾಲ ಅಮೂಲ್ಯವೇನಲ್ಲ ಪ್ರಭು, ನೀನೆ ಕಾರ್ಯವೊಂದನು ನನಗೆ ಆದೇಶಿಸುವವರೆಗೆ. ನಿನಗಾಗಿ ಕಾಯುತ್ತೆ ಗಡಿಯಾರ ನೋಡುತ್ತ ಕೊನೆಯಿರದ -...

ಅಮೃತಶಿಲೆಯಲಿ ಕಡೆದ ಚಿನ್ನಲೇಪನವಿರುವ

ಅಮೃತಶಿಲೆಯಲಿ ಕಡೆದ ಚಿನ್ನಲೇಪನವಿರುವ ರಾಜಸ್ಮಾರಕ ಮೀರಿ ಬಾಳುವುದು ಈ ಕಾವ್ಯ, ಕಾಲದ ಹೊಲಸು ಪಾಚಿ ಮೆತ್ತಿರುವ ಸ್ಮಾರಕವ ಮೂದಲಿಸಿ ಹೊಳೆವೆ ನೀ ಕವಿತೆಯಲಿ ಬಲುಭವ್ಯ ಯುದ್ಧದಲಿ ಎಲ್ಲ ವಿಗ್ರಹ ಮಣ್ಣಿಗುರುಳುವುವು, ಬುಡಮೇಲು ಮಾಡುವುವು ಭವ್ಯ...

ಸತ್ವ ದಯಪಾಲಿಸುವ ಸತ್ಯದಾಭರಣ

ಸತ್ವ ದಯಪಾಲಿಸುವ ಸತ್ಯದಾಭರಣ ಪಡೆದು ಸೌಂದರ್ಯ ಅದೆಷ್ಟು ಮೆಚ್ಚಾಗುವುದು! ಸುಂದರ ಗುಲಾಬಿ ಹೂ ಮೊದಲಿಗಿಂತಲು ಚಂದ ಅದರೊಳಗೆ ಹುದುಗಿದ ಸುಗಂಧ ಬಲದಿಂದ. ಕಣಗಿಲೆಯ ಹೂವೂ ಗುಲಾಬಿ ಹೂವಿನ ದಟ್ಟ ಕೆಂಪುಬಣ್ಣವ ಪಡೆದು, ಮುಳ್ಳ ಜೊತೆ...

ನಿನ್ನಲ್ಲಿ ಲಕ್ಷೋಪಲಕ್ಷ ಛಾಯೆಗಳುಂಟು !

ನಿನ್ನಲ್ಲಿ ಲಕ್ಷೋಪಲಕ್ಷ ಛಾಯೆಗಳುಂಟು ! ಯಾವ ಸತ್ವವ ಬಳಸಿ ನೀನು ಮೂಡಿರುವೆ ? ಬೇರೆಲ್ಲರಿಗು ಒಂದು ಛಾಯೆ ಮಾತ್ರದ ನಂಟು, ನೀನೊ ಎಲ್ಲಾ ಛಾಯೆಗಳಿಗು ನೆಲೆಯಾಗಿರುವೆ. ‘ಅಡೋನಿಸ್’ ನಿಜದಲ್ಲಿ ಬಲು ಚೆಲುವ ಆದರೂ ನಿನ್ನ...

ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು

ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು ಮೆರೆಸಿ ಅವನೆದೆಯನ್ನು ಸುಖದೊಳದ್ದುವುದು; ಎಲ್ಲೊ ಒಮ್ಮೊಮ್ಮೆ ತೆರೆಯುವನು ಅವನು ಅದನ್ನು, ಇಲ್ಲವೋ ಅಪರೂಪ ಸುಖ ಹಳಸಿಹೋಗುವುದು. ಅವನಂತೆ ನಾನು ಸಹ. ಉದ್ದ ಎದೆಸರದಲ್ಲಿ ಎಲ್ಲೊ ಅಲ್ಲಲ್ಲಷ್ಟೆ ಹರಳು...