Home / Kannada Poems

Browsing Tag: Kannada Poems

ಒಮ್ಮೆ ಹುಟ್ಟುತ್ತೇವೆ ಒಬ್ಬತಾಯಿಯ ಗರ್ಭದಿಂದ ಅಣ್ಣ ತಮ್ಮಂದಿರಾಗಿ, ಅಕ್ಕತಂಗಿಯರಾಗಿ, ಇನ್ನೊಮ್ಮೆ ಸಿಗುವುದೇ ಈ ಯೋಗ? ಮರೆತೇ ಬಿಡುತ್ತೇವೆ ಜಗಳಾಡುತ್ತೇವೆ. ಒಂದೇ ಬಟ್ಟಲಲ್ಲಿ ಉಂಡು ಒಂದೇ ಮನೆಯಲ್ಲಿ ಬೆಳೆದೂ ಒಬ್ಬರಿಗೊಬ್ಬರು ಅಪರಿಚಿತರಾಗುತ್ತೇವೆ...

ಎಲ್ಲೋ ನೋಡಿದ್ದೇನೆ ಇವರನ್ನು ಕೇಳಿದ್ದೇನೆ ಮಾತುಗಳನ್ನು ಯಾರಿವರು? ಅಟ್ಟದಿಂದ ಬೆಟ್ಟಕ್ಕೆ ಏರಿಸಿ ಧೊಪ್ಪನೆ ಕೆಡುವವರು ಕಂಬಿ ಇಲ್ಲದೆ ರೈಲು ಬಿಡುವ ಅತಿ ಮಾನುಷರು. ಮಾತಿನಲ್ಲೇ ಮನೆ ಕಟ್ಟಿ ಮಾತಿನಲ್ಲೇ ಹೊಟ್ಟೆ ಬಟ್ಟೆ ಮಾತಿನಲ್ಲೇ ಸ್ವರ್ಗ ತೋರಿಸು...

ಕಣ್ಣಲ್ಲಿ ನೀರು ತುಂಬಿ ತುಟಿಯಲ್ಲಿ ನಗು ಅರಳಿಸುತ್ತೇವೆ ನಾವು ನಗುನಗುತ್ತಾ ಅಳುತ್ತೇವೆ. ಅಳು ಮುಚ್ಚಿ ನೋವು ಮರೆಸಿ ನಗುನಗುತ್ತಾ ಬೆರೆಯುತ್ತೇವೆ. ಹೊರಜಗತ್ತಿಗೆ ಸದಾ ಸುಖಿಗಳು ನಾವು ನಗುನಗುತ್ತಲೇ ಇರುವ ಅದೃಷ್ಟಶಾಲಿಗಳು! ಗೃಹಲಕ್ಷ್ಮಿಗಳು. ದೂರ...

ಬದಲಾಗಿದೆ ಕಾಲ ಸೂಕ್ಷ್ಮಾತಿಸೂಕ್ಷ್ಮ ಸಂಕ್ರಮಣ ಕಾಲ ಅಡಿಯಿಡುವ ಮುನ್ನ ನುಡಿ ಜಾರುವ ಮುನ್ನ ಎಚ್ಚರವಿರಲಿ ಹೂವೇ ಹಾವಾಗಿ ಪ್ರಕೃತಿ ವಿಕೃತಿಯಾಗಿ ಅಮೃತವೇ ವಿಷವಾಗಿ ಜೀವ ತೆಗೆಯಬಹುದು ಎಚ್ಚರವಿರಲಿ ಮಾತು ಮುತ್ತಾಗದೇ ಮೃತ್ಯುವಾಗಿ ನಗುವ ಬೆಳದಿಂಗಳು ಕ...

ಹೊಸಕವಿತೆ ಬರೆಯ ಹೊರಟಾಗ ನನಗರಿವಾಯಿತು ನನ್ನೊಡಲು ಬರಿದಾಗಿದೆಯೆಂದು! ಹಳೆಯ ಕವಿತೆಗಳೆಲ್ಲ ಸತ್ತು ಹೋಗಿದ್ದವು ಹೊಸ ಹುಟ್ಟಿಗೆ ಜೀವ ಭಾವ ಕಾದುಕೊಂಡಿತ್ತು ಆದರೆ ಹೊಸ ಕವಿತೆ ಹುಟ್ಟಲಿಲ್ಲ! ಮನಸ್ಸು ಭಾವದ ಸಂಭೋಗವಾದರೂ ಹೊಸಹುಟ್ಟು ಉದಯಿಸಲಿಲ್ಲ. ಹೇ...

ಒಂದೇ ಸಮನೆ ಸುರಿಯುತ್ತಿದೆ ಮಸಲಧಾರೆ. ಅಬ್ಬರವೇನು? ಆರ್ಭಟವೇನು? ಎಲ್ಲಿ ಅಡಗಿತ್ತೋ ಬೆಟ್ಟ ಗುಡ್ಡಗಳ ನಡುವೆ ಎಷ್ಟು ದಿನಗಳಾದವೋ ಕಾದು ಕುಳಿತ ಕಣ್ಣುಗಳು ಮಂಜಾಗಿ ಮರೆಯಾದವು ಯಾರು ದಬ್ಬಿದರೋ ಕಾಣೆ ದಿಢೀರನೆ ಬಿತ್ತು ಸುಮ್ಮನೆ ಬಂದರೆ ಕೇಳಿ ಬರುವಾಗ...

ನಾನು ಚಿತ್ರಿಕನಲ್ಲ ಆದರೂ ಬಾಳಿನೊಂದು ಹಾಳೆಯಲಿ ಚಿತ್ತಾರ ಬರೆಯ ಬಯಸಿದೆ. ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ ಕುಸುರಿ ಕೆಲಸದ ಚತುರತೆಯಿಲ್ ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ. ಆದರೂ ಆಸೆ – ಬಾಳ ಕೊನೆಯ ಸಂಪುಟದ ಒಂದು ಹಾಳೆಯ...

ಏನಿದು? ಮಾಯೆ ಸೃಷ್ಠಿಯ ಛಾಯೆ ಎಲ್ಲಿಂದ ಎಲ್ಲಿಯವರೆಗೆ ಹರಡಿದೆ ಜಗತ್ತಿನ ಛಾಯೆ ಯಾರಾತ? ಎಲ್ಲಿಡಗಿಹನಾತ? ಸೃಷ್ಠಿಯ ರಹಸ್ಯವ ತಿಳಿಸದಾತ? ಕತ್ತೆತ್ತಿದರೆ ನೀಲಾಕಾಶ ಅಸಂಖ್ಯ ತಾರೆಗಳ ಇತಿಹಾಸ ಸೂರ್ಯ ಚಂದ್ರ ಗ್ರಹಗಳ ಪರಿವೇಷ ನದಿ ಸಾಗರ ಸಂಗಮ ಸಮಾವೇಷ ...

ದಿನಾ ಪತ್ರಿಕೆ ಬಿಡಿಸಿದರೆ ಸಾಕು ನೆನಪಿಗೆ ಬರುವುದು ಎಂದೋ ಕೇಳಿದ್ದ ಏಡಿಗಳ ಕಥೆ; ಮನತುಂಬುವುದು ಆ ಕಥೆಯೊಳಗಿನ ವ್ಯಥೆ. ಪರದೇಶಗಳಿಗೆ ಕಳುಹಿಸಲೆಂದು ಹಡಗು ತುಂಬಿದ್ದರು ಮೀನು ತುಂಬಿದ್ದ ಬುಟ್ಟಿಗಳ. ದೀರ್ಘ ಪ್ರಯಾಣ, ತೆರೆಗಳ ನಿರಂತರ ಹೊಡೆತ ಕುಲು...

ಬದುಕು ಬಲು ಭಾರ ಹಾದಿಯೂ ಅತಿ ದೂರ ಮುಗಿಯದ ಪಯಣ ಎಲ್ಲಿಂದ ಎತ್ತಣ. ಸಾಗುತಿದೆ ಬದುಕು ಭಯ ಆತಂಕಗಳ ಸಂಕೋಲೆ ಉದಯಿಸುವ ಸೂರ್ಯನೊಂದಿಗೆ ನೂರಾರು ಚಿಂತೆ ಬೇಗೆ ಪರಿಭ್ರಮಿಸುತ್ತಿದೆ ಮನ ಗರ ಗರ ಸುತ್ತುವ ಹದ್ದಿನಂತೆ ಕ್ಷಣ ಚಿತ್ತ ಕ್ಷಣ ಪಿತ್ತ. ಭೀತಿ ಭೀ...

1...56789...14

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...