ಮಳೆ
ಅತ್ತೆ ಗುಡುಗಿ ಮಾವ ಮಿಂಚಿ ಗಂಡನ ಸಿಡಿಲೆರಗೆ ಹೆಣ್ಣಿನ ಕಣ್ಣಲ್ಲಿ ಮಳೆಯ ಧಾರೆ ****
ಅತ್ತೆ ಬ್ಯಾಟಿಂಗ್ ಸೊಸೆ ಬೌಲಿಂಗ್ ಮಾವ, ಮಗನ ಫೀಲ್ಡಿಂಗ್, ಇದು ಸಂಸಾರದ ಕ್ರಿಕೆಟ್ ನೋಡಲು ಬೇಡ ಇದಕ್ಕೆ ಟಿಕೆಟ್ *****
ನನ್ನ ನಿದ್ದೆಗೆ ನಿನ್ನ ಕಣ್ಣೇಕೆ? ನನ್ನ ಹುದ್ದೆಗೆ ನಿನ್ನ ಬುದ್ಧಿ ಏಕೆ? ನನ್ನ ಹಸಿವಿಗೆ ನಿನ್ನ ತೃಪ್ತಿ ಎಕೆ? ನನ್ನ ಅಂತರಾತ್ಮಕೆ ನನ್ನ ಕೀಲಿ ಕೈ ಇರೆ. […]
ಮನಸ್ಸಿನಲ್ಲಿ ಕವನ ತುಂಬಿದಾಗ ಕವನದಲ್ಲಿ ಮನಸ್ಸು ತುಂಬುತ್ತದೆ ಮನಸ್ಸಿನಲ್ಲಿ ದವನ ತುಂಬಿದಾಗ ಕವನದಲ್ಲಿ ಬಾಳ ಗಮನ ತುಂಬುತ್ತದೆ ****