
ಇನ್ನುಮೇತಕೆ ನಿನ್ನ ಮುಸುಕು ಮೌನವ ತೊರೆಯೆ? ಮುಚ್ಚಾಲೆಯಾಡಿ ದೊಲ್ಲಯಿಸುವೇಕೆನ್ನ? ತಳಮಳಿಪುದೆನ್ನ ಮನ ನಿನ್ನ ತೆರೆಯಂ ಹರಿಯೆ- ನಿಲುಕದಲೆ ತಡೆವೆ; ಬುಲ್ಲಯಿಸುವೇಕೆನ್ನ? ೪ ಸೊಲ್ಲಿಲ್ಲದುಲಿಗಳಿಂದುಲಿವ ನಿನ್ನಯ ಸೊಲ್ಲ ಸೆಲೆಯಿಂದ ಹಾಡುಲಿಯ ಬಲ್ಲುದೇ...
ನನ್ನ ಷೇಕ್ಸ್‌ಪಿಯರನ ಪವಿತ್ರ ಅಸ್ಥಿಯನಿಡಲು ಯುಗ ದುಡಿದು ಜೋಡಿಸಿದ ಕಲ್ಲರಾಶಿಯ ಮಹಲು ಬೇಕೆ ? ಅಥವಾ ಮುಗಿಲ ಇರಿವ ಪಿರಿಮಿಡ್ಡುಗಳ ತೆರೆ ಸಾಕೆ ಮರೆಸಲು ಪುನೀತ ಅವಶೇಷಗಳ? ಸ್ಮೃತಿಯ ಪ್ರಿಯಪುತ್ರನೇ, ಪ್ರಥಮಪಾತ್ರನೆ ಎಲ್ಲ ಕೀರ್‍ತಿಗೂ, ನಿನಗಂಥ ಕಳಪ...
ಬಯಸಿದ್ ಸಾಮಾನ್ ಬೇಕಾದಂಗೆ ಇರಲಿ ಇಲ್ದೇನ್ ಇರಲಿ- ತಾಪತ್ರೇಯನಕ್ ತಪ್ಪಿದ್ದಲ್ಲ! ಸುಳ್ಳಂತ್ ಅನ್ನೌನ್ ಬರಲಿ! ೧ ಬುಂಡೇಲ್ ಒಂದ್ ತೊಟ್ ಇರೊಗಂಟ್ಲೂನೆ ನಿದ್ದೆ ಗಿದ್ದೆ ಬರದು! ಬುಂಡೇ ಕಾಲಿ ಆಗೋದ್ರನಕ ನಿದ್ದೆ ಬರಲೇ ಬರದು! ೨ ಈ ತಾಪತ್ರೇನ್ ತಳ್ಳಾಕ...
ರಾಗ ದೇಶ ಜಿಲ್ಲಾ-ತ್ರಿತಾಲ ಏನೆದ್ಭುತ ಮಹಿಮೆಯೊ ನಿನ್ನ ಪ್ರಭೋ ಪೊಗಳಲಳವೆ ಎನ್ನ || ಪಲ್ಲ || ತಡೆಯರಿಯದೆ ಹರಿಯುವ ಗಗನತಲಂ ನಿನ್ನೊಡೆತನದ ಪತಾಳೆಯೊಲು ವಲಂ ನೆಳಲಿಸಿ ಹೊದಿಪುದು ವಸುಮತಿಯಗಲಂ ನಿನ್ನ ಪ್ರಭಾವವನು || ೧ || ನಿಲಲಾರದ ದಿನಕರನನುದಿನದಿ...
ನಿನ್ನ ಪ್ರೀತಿಸಿ ನಾನು ನಿನಗಿತ್ತ ಮಾತನ್ನು ಮುರಿದೆ ನಿಜ, ನೀನೊ ಮುರಿದಿರುವೆ ಎರಡೆರಡು ಸಲ; ಒಮ್ಮೆ ಹಾಸಿಗೆಯಲ್ಲಿ ಕೊಟ್ಟ ಭರವಸೆಯನ್ನು, ಮತ್ತೆ ಕೂಡಿಕೆಯಾಗಿ ಕೊಟ್ಟ ಮಾತನ್ನು ಸಹ. ಯಾಕೆ ದೂರಲಿ ಹೇಳು ಮಾತ ಮುರಿದವಳೆಂದು, ನಾನೆ ಹಿರಿಯಪರಾಧಿ, ಮು...
ಬಿಟ್ಟಿದ್ದೆ ಯೆಂಡ ಅಲ್ಲಿ- ನೆಟ್ಗೆ ಬಂದೆ ಇಲ್ಲಿ. ಎಲೇಲೇಲೇ ರಸ್ತೆ! ಯೇನು ಅವ್ವೆವಸ್ತೆ! ಮೈ ಕೈ ಯೆಲ್ಲ ಮುದರಿ ಯಾಕೇ ಕುಣೀತಿ ಕುದರಿ? ಕೊಟ್ಟೆ ಯಲ್ಲ ಗಸ್ತು! ಕುಡಿದ್ದೀಯ ರಸ್ತೆ! ಚಂದ್ರನ್ ಮುಕವೇಕ್ ಸೊಟ್ಟು? ಅದ್ದು! ಬಲಗಣ್ ಛಟ್ಟು! ಉಳ...













