ಷೇಕ್ಸ್‌ಪಿಯರನನ್ನು ಕುರಿತು

ನನ್ನ ಷೇಕ್ಸ್‌ಪಿಯರನ ಪವಿತ್ರ ಅಸ್ಥಿಯನಿಡಲು
ಯುಗ ದುಡಿದು ಜೋಡಿಸಿದ ಕಲ್ಲರಾಶಿಯ ಮಹಲು
ಬೇಕೆ ? ಅಥವಾ ಮುಗಿಲ ಇರಿವ ಪಿರಿಮಿಡ್ಡುಗಳ
ತೆರೆ ಸಾಕೆ ಮರೆಸಲು ಪುನೀತ ಅವಶೇಷಗಳ?
ಸ್ಮೃತಿಯ ಪ್ರಿಯಪುತ್ರನೇ, ಪ್ರಥಮಪಾತ್ರನೆ ಎಲ್ಲ
ಕೀರ್‍ತಿಗೂ, ನಿನಗಂಥ ಕಳಪೆ ಸಾಕ್ಷಿಯು ಸಲ್ಲ;
ನಮ್ಮ ಎದೆಯಲಿ ಉಕ್ಕಿ ಸುರಿವ ಸಂತಸ ಬೆರಗೆ
ನೀನು ನಿರ್‍ಮಿಸಿಕೊಂಡ ಚಿರಸ್ಮಾರಕವು ನಿನಗೆ.
ಕೃತಿಯ ಸಾಲೇ ಹರಿಸಿ ಕಲೆಯ ಬಲು ಮೆಲುನಡೆಯ
ಅಪಹಾಸ್ಯಕೆಳೆದ ಹಿರಿಕವಿಯೆ, ನಿನ್ನ ಅಮೂಲ್ಯ
ಪುಟಪುಟಗಳಿಂದಲೂ ಅಮೃತ ಸೂಕ್ತಿಗಳನ್ನ
ಹೆಕ್ಕಿಕೊಂಡಿದೆ ಜನರ ಹೃದಯ. ಓದಲು ನಿನ್ನ,
ನಮ್ಮಲ್ಪ ಕಲ್ಪನೆಯ ಕೊಚ್ಚಿ ಕವಿವುದು ಬೆರಗು,
ನಾವಾಗುವೆವು ಅಮೃತಶಿಲೆ ಪೂರ್‍ತಿ ಮೈಮರೆದು.

ಎಂಥ ಸ್ಮಾರಕ ನಿನಗೆ, ಏನು ಭವ್ಯ ಪ್ರಸಿದ್ಧ,
ರಾಜರೂ ಅದರ ಸಲುವಾಗಿ ಸಾಯಲು ಸಿದ್ಧ!

– ಜಾನ್ ಮಿಲ್ಟನ್
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಲಿಯೂ ಬೆಕ್ಕೂ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೭

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…