ಗಳಿಗೆಬಟ್ಟಲ ತಿರುವುಗಳಲ್ಲಿ – ೧೪
ರೊಟ್ಟಿ ಹೊರಗಿನ ಬಯಲು ಒಳಗಿನ ಆಲಯ ಅಂಚಲ್ಲಿ ಆವಿರ್ಭವಿಸುವ ಮಿಥ್ಯಾಗರ್ಭ. ಬಯಲು ಆಲಯಗಳ ಪರಿಧಿ ದಾಟುತ್ತಾ ಅಖಂಡ ಭೂಮಂಡಲ ವ್ಯಾಪಿಸುವ ರೊಟ್ಟಿಯೂ ಕಾಯುವುದು ನಿರ್ವಾಣಕ್ಕಾಗಿ, ಹಸಿವೆಗಾಗಿ ಅಲ್ಲ.
ರೊಟ್ಟಿ ಹೊರಗಿನ ಬಯಲು ಒಳಗಿನ ಆಲಯ ಅಂಚಲ್ಲಿ ಆವಿರ್ಭವಿಸುವ ಮಿಥ್ಯಾಗರ್ಭ. ಬಯಲು ಆಲಯಗಳ ಪರಿಧಿ ದಾಟುತ್ತಾ ಅಖಂಡ ಭೂಮಂಡಲ ವ್ಯಾಪಿಸುವ ರೊಟ್ಟಿಯೂ ಕಾಯುವುದು ನಿರ್ವಾಣಕ್ಕಾಗಿ, ಹಸಿವೆಗಾಗಿ ಅಲ್ಲ.
ಹಸಿಹಿಟ್ಟು ತಟ್ಟಿತಟ್ಟಿ ಒಂದೇ ಪದರದ ರೊಟ್ಟಿ ಹಾಳೆ. ಕಾವಲಿಯ ಮೇಲೆ ಬೇಯಲಿಕ್ಕಿದ್ದೇ ಉಬ್ಬಿದೆರಡು ಪದರ. ರೊಟ್ಟಿ ಒಂದೇ ಪದರವೆರಡು. ಆಂತರ್ಯ ನಿರ್ವಾತ ಬಹಿರ್ಮುಖ ಸಾಂಗತ್ಯ ಹಸಿವೆಗೆ ಅನೂಹ್ಯ.
ಸುಡುಸುಡುವ ಕಾವಲಿಗೆ ಬಿದ್ದ ಕ್ಷಣದಲ್ಲಿ ಹಸಿಹಿಟ್ಟಿನ ರೊಟ್ಟಿ ಮೈಯೆಲ್ಲಾ ಪ್ರತಿರೋಧದ ಕಡು ಕೆಂಪನೆ ಕಲೆಗಳು. ನಿಧಾನಕ್ಕೆ……… ಎಲ್ಲಾ ರೂಢಿಯಾಗಿ ತನ್ನ ಸುಟ್ಟುಕೊಳ್ಳುತ್ತಲೇ ಹಸಿವಿಗೆ ಬೇಕೆಂದಂತೆ ಬೇಯುವ ಹಾಳತ. […]
ನೆಲದ ನೆರಳಿನ ರೊಟ್ಟಿ ಆಕಾಶದಗಲದ ದೈತ್ಯ ಹಸಿವಿನ ಅವಶ್ಯಕತೆಯಂತೆಲ್ಲಾ ಬದಲಾಗುವುದಿಲ್ಲ ಬದಲಾಗಬೇಕಿಲ್ಲ. ರೊಟ್ಟಿ ರೊಟ್ಟಿಯೇ ಹಸಿವು ಹಸಿವೇ. ನೆಲಕ್ಕದರದೇ ಶಕ್ತಿ ಆಕಾಶಕ್ಕದರದೇ ಮಿತಿ.
ರೊಟ್ಟಿ ಅರಗಿಸುವ ಪ್ರತಿಕ್ಷಣ ಹಸಿವು ಕಲಿಸುತ್ತಲೇ ಇರುತ್ತದೆ ನಿರ್ದಯತೆಯ ಪಾಠ ರೊಟ್ಟಿಗೆ ಅಕಾರಣ ಮೋಹದ ಭ್ರಮೆ.
ರೊಟ್ಟಿ ರೊಟ್ಟಿಯಲ್ಲಿಲ್ಲ ಹಸಿವಿನಲ್ಲಿ ಸುಮ್ಮನೆ ಪಾಪ ಪ್ರಜ್ಞೆ ಪಾಪದ ರೊಟ್ಟಿಗೆ. ತಪ್ಪು ರೊಟ್ಟಿಯದೂ ಅಲ್ಲ ಹಸಿವಿನದೂ ಅಲ್ಲ ಚಾಣಾಕ್ಷ ರುಚಿಯದು.
ರೊಟ್ಟಿಯ ಕವಿತೆ ಕೇಳಿ ಲೇವಡಿ ಮಾಡಿ ನಗುತ್ತಿತ್ತು ಹಸಿವು. ಈಗ ರೊಟ್ಟಿಯೂ ನಿರ್ಭಾವುಕ ಹಸಿವಿನಂತೆ ಕವಿತೆ ಅನಾಥ ಎಂದಿನಂತೆ.
ಬೀದಿ ರಾಡಿಯಲಿ ಉರುಳುರುಳಿ ಆಡಿ ಮೈ ಮನವೆಲ್ಲಾ ಹಗುರಾಗಿ ಗಾಳಿಯಲಿ ತೇಲಾಡಿ ತನ್ನನೇ ಮರೆವ ಕನಸು ರೊಟ್ಟಿಗೆ. ಜಾಣ ಕುರುಡು ಜಾಣ ಕಿವುಡು ಜಾಣ ಮರೆವು. ಎಚ್ಚರದ […]
ಹಸಿವಿನ ಸ್ವಾರ್ಥಕ್ಕೆ ಸಿಕ್ಕು ನುಚ್ಚು ನೂರಾಗುವ ರೊಟ್ಟಿಯೆಂಬೋ ಸಂತ ಹಸಿವಿನ ಒಡಲಲ್ಲಿ ಸದ್ದಿಲ್ಲದೇ ಮೆಲ್ಲನೆ ಬಿತ್ತುತ್ತದೆ ಸಾವಿರಾರು ಪ್ರೀತಿಯ ಬೀಜ.
ತಿನ್ನುವ ಮೊದಲೂ ನಂತರವೂ ಹೆಸಿವು ಅಸ್ವಸ್ಥ. ರೊಟ್ಟಿ ಸದಾ ನಿರುಮ್ಮಳ ಏನೇನೂ ಆಗಿಯೇ ಇಲ್ಲವೆಂಬಂತೆ ತಟಸ್ಥ.