ನೆಲದ ನೆರಳಿನ ರೊಟ್ಟಿ
ಆಕಾಶದಗಲದ
ದೈತ್ಯ ಹಸಿವಿನ
ಅವಶ್ಯಕತೆಯಂತೆಲ್ಲಾ
ಬದಲಾಗುವುದಿಲ್ಲ
ಬದಲಾಗಬೇಕಿಲ್ಲ.
ರೊಟ್ಟಿ ರೊಟ್ಟಿಯೇ
ಹಸಿವು ಹಸಿವೇ.
ನೆಲಕ್ಕದರದೇ ಶಕ್ತಿ
ಆಕಾಶಕ್ಕದರದೇ ಮಿತಿ.