ಸುಡುಸುಡುವ ಕಾವಲಿಗೆ
ಬಿದ್ದ ಕ್ಷಣದಲ್ಲಿ
ಹಸಿಹಿಟ್ಟಿನ ರೊಟ್ಟಿ
ಮೈಯೆಲ್ಲಾ ಪ್ರತಿರೋಧದ
ಕಡು ಕೆಂಪನೆ ಕಲೆಗಳು.
ನಿಧಾನಕ್ಕೆ………
ಎಲ್ಲಾ ರೂಢಿಯಾಗಿ
ತನ್ನ ಸುಟ್ಟುಕೊಳ್ಳುತ್ತಲೇ
ಹಸಿವಿಗೆ ಬೇಕೆಂದಂತೆ
ಬೇಯುವ ಹಾಳತ.
ಮತ್ತೆಲ್ಲಾ ಮಾಮೂಲೇ.
ಸುಡುಸುಡುವ ಕಾವಲಿಗೆ
ಬಿದ್ದ ಕ್ಷಣದಲ್ಲಿ
ಹಸಿಹಿಟ್ಟಿನ ರೊಟ್ಟಿ
ಮೈಯೆಲ್ಲಾ ಪ್ರತಿರೋಧದ
ಕಡು ಕೆಂಪನೆ ಕಲೆಗಳು.
ನಿಧಾನಕ್ಕೆ………
ಎಲ್ಲಾ ರೂಢಿಯಾಗಿ
ತನ್ನ ಸುಟ್ಟುಕೊಳ್ಳುತ್ತಲೇ
ಹಸಿವಿಗೆ ಬೇಕೆಂದಂತೆ
ಬೇಯುವ ಹಾಳತ.
ಮತ್ತೆಲ್ಲಾ ಮಾಮೂಲೇ.