Latha Gutti

ಆತ್ಮಹತ್ಯೆ

ನಾನು ಕಾಯ್ದೆ ಬರಲಿಲ್ಲ ಅವಳು ನಾನೇ ಹೋದೆ ಕರೆಯಲಿಲ್ಲ ಒಳಗವಳು ಕರೆದರವರು ತೋರಿಸಿದರವರು ಹೇಳಿದರವರು ಮುಖ ಮುಚ್ಚಿದರು ಈಗವಳಿಗೆ ೩ ತಿಂಗಳಾಗಿತ್ತಂತೆ. *****

ನೆಪ

ಮಸಾಲೆ ದೋಸೆ ಬೇಕೆಂದಾಗೆಲ್ಲಾ ಏನಾದರೂ ನೆಪ ಹೇಳಿ ಗಂಡನೊಂದಿಗೆ ಮುನಿಸಿಕೊಳ್ಳುವದು ಅವನ ಪ್ರೀತಿ ಬೇಕೆಂದಾಗೆಲ್ಲ ಅವನಿಷ್ಟದ ಅಡುಗೆ ಮಾಡುವದು. *****

ಮ್ಯಾಚಿಂಗ್

ಮಾನಸಿಕವಾಗಿ ಗಂಡ ಮ್ಯಾಚಿಂಗ್ ಆಗದೇ ಇದ್ದರೂ…. ಒಳಗೊಳಗೆ ತೊಳಲಾಡಿದರೂ…. ಚಿತ್ತಾರದ ಮಾಂಗಲ್ಯ ಮ್ಯಾಚಿಂಗ್ ಕುಂಕುಮ ಬೇಕು ಫ್ಯಾನ್ಸಿ ಯುವತಿಯರಿಗೆ *****

ಬರಿ ಓಳು (ಷೋ)

ಇಸ್ತ್ರಿ ಬ್ಲೌಜು ಸ್ಟಾರ್‍ಚ್ ಸೀರೆ ಉಟ್ಟು ಗರಿ ಗರಿಯಾಗಿ ಕಂಡರೇನು, ಗಂಡನ ಬಿಸಿ ಅಪ್ಪುಗೆ ಇಲ್ಲದೆ ಎದೆಗೂಡಿನ ಭಾವನೆಗಳೆಲ್ಲ ಮುದುಡಿರುವಾಗ! *****

ಪರಿಣಾಮ

ಕಂಬನಿಯಲ್ಲಿಯೇ ಕಡಲು ನಿರ್‍ಮಿಸಿಕೊಳ್ಳುತ್ತಿದ್ದ ಅವಳು ಸ್ತ್ರೀವಾದಿಗಳ ಭಾಷಣ ಕೇಳಿ ಪುರುಷ ದ್ವೇಷಿಯಾಗಿ ಈಗ ಭೋರ್‍ಗರೆಯುತ್ತಿದ್ದಾಳೆ. *****