Home / Hannerdmath

Browsing Tag: Hannerdmath

ಜೋಗುಳದ ಹರ್ಷದಲಿ ಜಲಬಾಣ ಹೊಡೆದಂತೆ ಓ ಕೇಳು ಓ ಹುಡುಗ ನಿನ್ನ ನಾಡು ಚೈತನ್ಯ ಚಿಲುಮೆಗಳು ಚಿಜ್ಞಾನ ನವಿಲುಗಳು ಥಾಥೈಯ್ಯ ಕುಣಿದಂತೆ ಶಕ್ತಿ ಬೀಡು ಸತ್ತವರು ಸತ್ತಿಲ್ಲ ಸುಜ್ಞಾನ ಬಿತ್ತಿಹರು ಇತಿಹಾಸ ಹಾಡಿಹುದು ಭವ್ಯಗಾನ ಹಿಮಶೈಲ ಮುಡಿಯಿಂದ ಸಹ್ಯಾದ್...

ಗುಳ್ಳೌ ಬಾರೇ ಗೌರೌ ಬಾರೇ ಸೀಗೌ ಬಾರೇ ಸಿವನಾರೇ ಗೆಳತೇರೆಲ್ಲಾ ಗರ್ದಿಲ್ಬಾರೆ ಸುಬ್ಬೀ ಸುಬ್ಬೀ ಸುವನಾರೇ ಗುರ್‍ಹೆಳ್ಹೂವಾ ಗುಲಗಂಜ್ಹಚ್ಚಿ ಗೆಳತೇರ್‍ಕೂಡಿ ಆಡೋಣು ಕುಂಬಾರ್‍ಗುಂಡಾ ತಿಗರೀ ತಿರುವಿ ಬಗರೀ ಬಿಂಗ್ರೀ ಆಗೋಣು ಚಂಚಂ ಚಂದಾ ಮುಗಿಲಾ ನೀರಾ ...

ತಾಯಿ ಬಂದೆ ತುಳುಕಿ ನಿಂದೆ ಕಣ್ಣ ನೀರ ತಟದಲಿ || ನಿನ್ನ ಹಸ್ತ ಶಿವನ ಹಸ್ತ ಶಾಂತ ಗಂಗೆ ಧೋ ಧೋ ನಿನ್ನ ಎದೆಯ ಹಾಲ ಹೊಳೆಯು ಸುರಿದ ಜೋಗ ಜೋಜೋ ಕೋಟಿ ಕೋಟಿ ಕೋಟಿ ಆತ್ಮ ರೆಲ್ಲ ನಿನ್ನ ಶಿಶುಗಳು ದೇಶ ಭಾಷೆ ಕೋಶ ಕೀಲ ರೆಲ್ಲ ನಿನ್ನ ಹನಿಗಳು ಗುಟುಗು ಗು...

ಓಂಽಽ ಶಾಂತಿಽಽಽ ಓಂಽಽ ಶಾಂತಿಽಽಽಽ|| ಓಂ ಶಾಂತಿಯೋಂ ಶಾಂತಿ ಓಂ ಶಾಂತಿಯೋಂ ಶಾಂತಿ ಆತ್ಮಸಾಗರ ತುಂಬ ಓಂಕಾರವೊ ಕಡಲೊಳಗೆ ಮುಗಿಲೊಳಗೆ ಜಗದೊಳಗೆ ಯುಗದೊಳಗೆ ಶಿವನ ಸಾಗರ ತುಂಬ ಝೇಂಕಾರವೊ ಓ ನೋಡು ಈ ಕಾಡು ಈ ಹಸಿರು ಈ ಹೂವು ಓಂಕಾರ ಗಾನದಲಿ ಮೀಯುತ್ತಿವೆ...

ಸಾಕು ಕೇಕೇ ನೂಕು ಗೇಗೇ ಬೇಕು ಜೈ ಜೈ ಗೀತಿಕೆ! ಸಾಕು ಕಲ್ಲು ಸಾಕು ಮುಳ್ಳು ಕಲ್ಲು ಮುಳ್ಳಿನ ಗೆಳೆತನ ಪಕ್ಷಿಯಾಗೈ ವೃಕ್ಷ ಏರೈ ಮಾಡು ಹೂವಿನ ಒಗೆತನ ದಲದ ಗಲ್ಲದ ಗಂಧ ಗುಡಿಯಲಿ ಕಾಣು ಆತ್ಮದ ಚುಂಬನ ಎಲ್ಲಿ ಕೋಮಲ ಎಲ್ಲಿ ಪರಿಮಳ ಅಲ್ಲಿ ಅರುಹಿನ ಔತಣ ಮ...

ದೀಪಾ ನೋಡೊ ನಿನ್ನೊಳು ದೀಪಾ ನೋಡೋ ಹೊಳೆಹೊಳೆ ಹೊಳೆಯುವ ತಿಳಿವೆಳಗಿನ ದೀಪ ದೀಪಾ ನೋಡೊ ಬೆಳ್ಳಿಯ ದೀಪಾ ನೋಡೊ|| ಈ ಚಿಪ್ಪು ತಲಿಯಾಗ ಉಪ್ಪುಪ್ಪು ನೀರಾಗ ಈ ಸೆಳವು ಆ ಸೆಳವು ತಿರುಗೂಣಿ ಮ್ಯಾಗೊ ದೀಪಾ ನೋಡೂ ಏಂಚಂದ ದೀಪಾ ನೋಡೊ|| ನಗುನಗು ನಗತೈತೆ ಬೆಳ...

ಕಾಳ ರಾತ್ರಿಯ ಚೋಳ ಭಯದಲಿ ಆತ್ಮ ಹಾವನು ತುಳಿದಿದೆ ||ಪ|| ರಾತ್ರಿ ಜಾರದೆ ಪಾತ್ರ ತೀರದೆ ಸೂರ್ಯದೇವನು ಏಳನೆ ಯುಗದ ಗಂಟೆಯ ಜಗದ ಗಂಟೆಯ ಒಮ್ಮೆ ಬಾರಿಸಿ ಕರೆಯನೆ ಹಗಲು ಕರಗಿದೆ ಇರುಳ ಮೌನದಿ ಮಿಂಚು ಹುಳಗಳು ಹಾರಿ ಮಿನುಗು ತಾರೆಯ ಗುನುಗು ರಾಗದಿ ಚಳಿ...

ನಾಲ್ಕು ವರುಷಗಳ ಶಾಸ್ತ್ರ ಪಂಡಿತ ಶಾಸ್ತ್ರಿ ಮೂರು ನಿಮಿಷದ ಶೂನ್ಯ ನೀ ಬಲ್ಲೆಯಾ ಅದ್ವೈತ ತರ್ಕದಲಿ ಗಣಿತಜ್ಞ ನೀನಾಗಿ. ನಿಶ್ಯಬ್ದದಲಿನಿಂದು ನಗಬಲ್ಲೆಯಾ ಶೂನ್ಯ ಹೇಳಲು ಹೋಗಿ ಸೊನ್ನೆ ಯಾದೆಯ ಜಾಣ ಕಾಜಾಣ ಕೋಗಿಲೆಯ ಮಾಜಾಣರು ನಿನ್ನ ಕಣಜದ ಒಳಗೆ ಹಣಜಲ...

ದೇವ ದೇವನ ಮಾತು ಕೇಳಲಿ ಹೂವು ಹೂವಿಗೆ ಹೇಳಲಿ || ಕೊಳಲ ಗಾನಕೆ ಮಳಲು ಕರಗಲಿ ಮುಳ್ಳು ಮಲ್ಲಿಗೆಯಾಗಲಿ ಬಿಸಿಲು ತಣ್ಣಗೆ ತಂಪು ತುಂಬಲಿ ಚಂದ್ರಬಿಂಬವ ಕುಡಿಯಲಿ ಸ್ವೈರ ಕೇಳಿ: ವೈರ ಹೋಳಿ ಗೈರು ಹಾಜರಿ ಹಾಕಲಿ ಕಣ್ಣು ತುಂಬಲಿ ಗಲ್ಲ ತುಂಬಲಿ ನಗೆಯು ತುಟ...

ಇಲ್ಲಕಲ್ಲ ಜಾತ್ರ್ಯಾಗ ಕೊಂಡೇನ ಈ ಗಡಿಗಿ ಜ್ವಾಕೆವ್ವ ತಂಗೆವ್ವ ಜಾರಿಬಿಟ್ಟಿ ಚಂದೇನ ಚಾರೇನ ಚಕ್ರದುಂಡಿನ ಗಡಿಗಿ ಜೋಲ್ಹೋಗಿ ಜಲ್ಲೆಂದು ಚಲ್ಲಿಬಿಟ್ಟಿ ಹಾಡು ಹಾಡಿನ ವಳಗ ಬೋರಂಗಿ ಈ ಹುಡುಗಿ ಹೊಕ್ಕಾಳ ಗುಂಯ್ಯಂತ ಗುನಗತಾಳ ಗಡಗೀಯ ಮಾರ್‍ಯಾಳ ಪುರಿಭಾಜ...

1...34567...14

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...