Home / Baraguru Ramachandrappa

Browsing Tag: Baraguru Ramachandrappa

ಕಂಡೆಯಾ ಗೆಳೆಯಾ, ನೀನು ಕಂಡೆಯಾ ಕೌರವನ ಕಗ್ಗತ್ತಲ ಕವಡೆ ಕವಿಯುತ್ತ ತಿವಿಯುತ್ತ ಸೀರೆ ಸೆಳೆಯುತ್ತ ಸಭಾಪರ್‍ವವಾದದ್ದು ಕಂಡೆಯಾ ಶರೀರ ತುಂಬ ಸಿಂಹಾಸನ ತುಂಬಿ ಮಧುಮತ್ತ ನಾದ ಬಿಂದು ಎದೆಯನ್ನು ಸದೆ ಬಡಿದು ಆದದ್ದು ಮತ್ತೇನೂ ಅಲ್ಲ ಗೆಳೆಯ- ಅಧಿಕಾರ ಕ...

ಇತಿಹಾಸ ಪ್ರಸಿದ್ಧ ಊರಿಗೆ ಹೋದೆ; ಆ ಊರಿನ ಕರಿಯ ಹರಿದ ಬಾಳಿನ ಗೆಳೆಯ ತೋರಿಸಿದ ಒಂದೊಂದೇ ಸ್ಥಳ. ಕನಸು ಕಲ್ಲೊಳಗೆ ಮೂಡಿದ ಮೂರ್‍ತಿ ಭೂತ ಬೆಟ್ಟವಾದ ಕೋಟೆಯ ಕೀರ್‍ತಿ ಸೀತೆ ಸ್ನಾನ ಮಾಡಿದ ಪುರಾಣ ರಾಮ ತಂಗಿದ್ದ ಆವರಣ. ಎಲ್ಲ ನೋಡಿ ಎದುರುನಿಂತಿದ್ದ ಕ...

ಗುಲಾಬಿಯ ವಾಸನೆ ಹಿಡಿಯಹೋಗಿ ಮೂಗೊಳಗೆ ಮುಳ್ಳು ಮುರಿದು ಅದೇ ಮೂಗುತಿಯೆಂದು ಮುಟ್ಟಿ ಮುಟ್ಟಿ ನೋಡುತ್ತ ಕನ್ನಡಿ ಮೀರಿ ಮುಖ ಹಿಗ್ಗಿಸುತ್ತ ಉರುಹೊಡೆದ ಇತಿಹಾಸ ಹೇಳುತ್ತ ವರ್‍ತಮಾನದ ಮಾನ ಕಳೆಯುತ್ತ ಕನ್ನಡಿಗೆ ಕಲ್ಲು ಬೀಳುತ್ತದೆ. ಆತ್ಮ ಚೂರುಚೂರಾಗು...

ಗಿಳಿಯೊಳಗೆ ಗಿಡುಗ ಕೂತು ಊರು ಹಾಳಾಗುವವರೆಗೆ ಆಕಾಶದಲ್ಲಿ ಹಾರಾಡುತ್ತದೆ ಗಿಡುಗ, ಒಳಗೊಳಗೇ ಕುಕ್ಕುತ ರಕ್ತ ಮಾಂಸಗಳನ್ನು ಬಸಿದಾಗ ಆಯತಪ್ಪಿದ ಆಕಾಶದ ಗಿಳಿ ತಿಪ್ಪರಲಾಗ ತೂರಾಡುತ್ತದೆ. ಗಿಳಿಯೊಳಗೆ ಸಿಡಿಲು ಸ್ಫೋಟಗೊಂಡು ಚೂರು ಚೂರಾಗಿ ನೆಲಕಚ್ಚಿದಾಗ...

ಹೇಗೆ ಹೇಳಲಿ ನಿಮಗೆ ನನ್ನೊಳಗಿನ ಪಂಜಾಬು ಸ್ವರ್‍ಣ ದೇಗುಲದಲ್ಲಿ ಕರ್‍ಣ ಕಿವುಡು ಹೇಗೆ ಹೇಳಲಿ ನಿಮಗೆ ನನ್ನೊಳಗಿನ ಕಾಶ್ಮೀರ ಸೇಬು ತೋಟದ ತುಂಬ ಚೀರು ಚೂರು. ಹಾಳು ಬಾವಿಯ ಬದುಕ ಹೇಗೆ ಹೇಳಲಿ ನಿಮಗೆ ಬಿರುದ-ಬಾವಲಿ ಎಲ್ಲ ಹೂಳು ಚಿತ್ತ ಎಷ್ಟು ಕೊರೆದರ...

ಬಡವರ ಬೆತ್ತಲೆ ಕಂಡು ಕಂಗಾಲಾದ ಸೂರ್ಯ ಮೋಡದ ಮರೆ ಸೇರಿದ, ಯಾತನೆಯ ಎಚ್ಚರಕ್ಕಂಜಿದ ಗಾಳಿರಾಯ ಗಡ ಗಡ ನಡುಗಿ ಹೆಪ್ಪುಗಟ್ಟಿದ. ಮೈ ಮುಚ್ಚಲು ಮನಸ್ಸು ಹುಡುಕುತ್ತ ಮನುಷ್ಯ ನೆಲ ಸೇರಿದ. ಅಲ್ಲೊಂದು ಮರ ಬೆಳೆದು ಅಮರವಾಗುವ ಕನಸು ಕಾಣುತ್ತಿದ್ದಾಗ ಅರಿವಿ...

ಕಾಡುತ್ತಿವೆ ರಾತ್ರಿಗಳು ಹಗಲು ಕಟ್ಟಿದ ಇರುಳ ಕೋಟೆ ಒಳಗೆ ಒಂದೇ ಸಮ ಕತ್ತಿವರಸೆ ಪ್ರಾಣ ಹೋಗದ ಸಾವುಗಳು ಸದ್ದು ಮಾಡದ ನೋವುಗಳ. ಕತ್ತಲ ಸೋನೆ ಚರಿತ್ರೆಯಲ್ಲಿ ತೋಯ್ದ ಮೆದುಳ ನೆಲದಲ್ಲಿ ಮನಸ್ಸಿನ ಬೀಜ ಬಿರಿದು ತಿಕ್ಕಾಟವಾಗುತ್ತಲೇ ತೆಕ್ಕೆಯಾಗುವ ರೀತ...

ನಾನು ಕಾಲಿಟ್ಟಲ್ಲಿ- ಕರುಳು ಕಿಟಾರನೆ ಕಿರುಚಿ ಬೆವರೊಡೆಯುತ್ತದೆ. ನೆರಳು ನಗುತ್ತದೆ. ನಾನು ಕೂತಲ್ಲಿ- ನೆಲ ಕೀವೊಡೆದು ಬಾವು ಬಿರಿಯುತ್ತದೆ; ನೋವು ಹರಿಯುತ್ತದೆ. ನಾನು ಮಲಗಿದಲ್ಲಿ- ಮಂಚ ಮೌನ ಮುರಿದು ಉರಿಯುತ್ತದೆ; ಕನಸು ಬೂದಿಯಾಗುತ್ತದೆ. ****...

ನಿಮ್ಮ ಹಣ ಬೇಡ ನಿಮ್ಮ ನೆಣ ಬೇಡ ಒಂದಿಷ್ಟು ಅಳು ಕೊಡುತ್ತೀರ ನನಗೆ? ನಿಮ್ಮ ಕಾರು ಬೇಡ ನಿಮ್ಮ ಜೋರು ಬೇಡ ಕೇವಲ ಒಂದಿಷ್ಟು ಅಳು ಕೊಡುತ್ತೀರ ನನಗೆ? ಸದ್ಯ ನಿಮ್ಮ ಭೂಮಿ ಬೇಡ ಬಂಗಲೆ ಬೇಡ ಮೊದಲು ಒಂದಿಷ್ಟು ಅಳು ಕೊಡುತ್ತೀರ ನನಗೆ? ನಿಮ್ಮ ಮರ್‍ಯಾದೆ ...

ಬೆದೆ ಹತ್ತಿದ ಎದೆ ಹಾಡಿದಾಗ ಸದೆ ಬಡಿಯುವ ಸಿಂಹಾಸನವೇ ಸಾವ ಸಂಭ್ರಮದಲ್ಲಿ ನೋವು ನಿವಾರಿಸುವ ಜೋಳವಾಳಿಯೇ. ಕಾಲ ಚಕ್ರ ಉರುಳುತ್ತಲೇ ಅರಿವು ಅರಳುತ್ತ ನಾಲಗೆ ನಿಧಾನವಾಗಿ ಮಿಸುಕಾಡುತ್ತಿದೆ ಬಾಯೊಳಗೆ ಬ್ರಹ್ಮಾಂಡ, ಶತಶತಮಾನದ ವಿರಾಟ್ ದರ್‍ಶನ ವಿರಾಟಪ...

1...34567...18

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...