ಬಡವರ ಬೆತ್ತಲೆ ಕಂಡು ಕಂಗಾಲಾದ
ಸೂರ್ಯ ಮೋಡದ ಮರೆ ಸೇರಿದ,
ಯಾತನೆಯ ಎಚ್ಚರಕ್ಕಂಜಿದ ಗಾಳಿರಾಯ
ಗಡ ಗಡ ನಡುಗಿ ಹೆಪ್ಪುಗಟ್ಟಿದ.
ಮೈ ಮುಚ್ಚಲು ಮನಸ್ಸು ಹುಡುಕುತ್ತ
ಮನುಷ್ಯ ನೆಲ ಸೇರಿದ.
ಅಲ್ಲೊಂದು ಮರ ಬೆಳೆದು
ಅಮರವಾಗುವ ಕನಸು ಕಾಣುತ್ತಿದ್ದಾಗ
ಅರಿವಿಲ್ಲದೆ ಹರಿದುಹೋಯ್ತು
ಹಸಿರು ಸೀರೆ.
*****

ಕನ್ನಡ ನಲ್ಬರಹ ತಾಣ
ಬಡವರ ಬೆತ್ತಲೆ ಕಂಡು ಕಂಗಾಲಾದ
ಸೂರ್ಯ ಮೋಡದ ಮರೆ ಸೇರಿದ,
ಯಾತನೆಯ ಎಚ್ಚರಕ್ಕಂಜಿದ ಗಾಳಿರಾಯ
ಗಡ ಗಡ ನಡುಗಿ ಹೆಪ್ಪುಗಟ್ಟಿದ.
ಮೈ ಮುಚ್ಚಲು ಮನಸ್ಸು ಹುಡುಕುತ್ತ
ಮನುಷ್ಯ ನೆಲ ಸೇರಿದ.
ಅಲ್ಲೊಂದು ಮರ ಬೆಳೆದು
ಅಮರವಾಗುವ ಕನಸು ಕಾಣುತ್ತಿದ್ದಾಗ
ಅರಿವಿಲ್ಲದೆ ಹರಿದುಹೋಯ್ತು
ಹಸಿರು ಸೀರೆ.
*****