ಮುಚ್ಚು- ಮರೆ ಇಲ್ಲದ ಚೊಕ್ಕ ಸ್ಫಟಿಕದ ಹೃದಯ ಕಾವ್ಯ ವಾಹಿನಿಯ ಉದಯ ಬಿಂದು ಕವಿಯ ಹೃದಯ; ಕಾವ್ಯ ಜ್ಯೋತಿಯ ಕಾಯ ಮಿಂಚಿಹುದು; ಓ ಚಿಮ್ಮಿ ಬಂದಿಹುದು ಸರ್ಗಗ೦ಗೆಯ ಕರೆದು ನಲಿದಾಡಬಲ್ಲ ಸೂರ್ಯ ಚಂದಿರರೊಡನೆ ಆಡಬಲ್ಲ...
ಗೆಲವಿರಲಿ, ಬರದಿರಲಿ ಎದುರು ಸೋಲು ಎಲ್ಲೆಡೆಗು ನಡೆದಾಗ ಗೆಲುವೆ ಮುಂಬರಲಿ ಗೆಲುವಿನಾಶಯ ಜೀವ ಜಗದಿ ಮೇಲು ಸೋಲಿನಲ್ಲೇನಿಹುದು; ಗೆಲುವೆಮಗೆ ಕಾದಿರಲಿ ಒಲವು ಗೆಲವಿನೆಡೆಗೆ ಒಯ್ಯುತಲಿರಲಿ ತಿಳಿದಿರಲಿ; ಬರುವವೇನೋ ನೂರಾರು ಸೋಲುಗಳು ಕಲ್ಲು-ಮುಳ್ಳಿಲ್ಲದ ದಾರಿ ಆವುದಿಹದಲಿ?...
ಯತಿವರನೆ ನಿನ್ನ ಹೆಸರಿಂದು ಉಸಿರಾಗಿಹುದು ನಿನ್ನ ತಪೋಬಲದಿ ಬೆಳಗಿರುವೆ ನಾಡನೆಲ್ಲವನು ಸುಖ-ದುಃಖ ಸಮನಾಗಿಸಿದ ಸ್ಥಿತಪ್ರಜ್ಞ ನೀನು! ಕಡುವಿರ ಸಿದ್ಧಯೋಗಿ ಶ್ರೀ ಕಾಡಸಿದ್ದೇಶ್ವರಾ!! ಈ ಪುಣ್ಯ ಭೂಮಿಯಲಿ ಪುಲ್‌ಪೊದರು ಬೆಳೆದು ಹಿಂದೊಮ್ಮೆ, ಪ್ರಕೃತಿ ರೌದ್ರರಮಣೀಯತೆ ತಾಳಿತ್ತು,...