
ಸಂಜೇಲ್ ಓ ಲಸ್ಮಣಾಂತ್ ಏಳಿ ಅಟ್ಟೀಗ್ ಬಂದ್ರೆ ಬೇಗ ದಾರೀನ್ ನೋಡ್ತ ನಿಂತ್ಕೊಂಡೌಳೆ ನಂಜಿ ಬಾಗಿಲ್ನಾಗ! ೧ ಜೀತಕ್ ಜೀವ ಬಲಿ ಕೊಟ್ಮೇಲೆ ನಂಜೀನೆ ಒಸ್ ಪ್ರಾಣ! ನಂಜೀನ್ ಏನ್ರ ನೆನಿದೆ ಓದ್ರೆ ಉಡಗೋಗ್ತೈತೆ ತ್ರಾಣ! ೨ ಜೀವಾನ್ ಬೆಳಸೋಕ್ ತಾಕತ್ ಅಂದ್ರೆ ...
ತಂತಾನೆ ತಣಿವಿನಲ್ಲಿದ್ದ ತಲ್ಲೀನತೆಯು ನಿದ್ದೆ ತಿಳಿದೆದ್ದಾಗ ಎನಿತೆನಿತು ಶಾಂತಿ! ಬಾಯಿಲ್ಲದನುಭವದ ನೆನವೆ ನನೆಕೊನೆಹೋಗಿ ಕನಸೇ ನನಸಾಗಿರಲದೆಂಥ ನವ ಕಾಂತಿ! ಆಟವೇ ಹಿಗ್ಗು? ಒಡನಾಟವೇ ಹಿರಿ ಹಿಗ್ಗು ನೋಟದ ವಿಲಾಸವೇ ಗುಡಿಕಟ್ಟಿದಂತಿದೆ. ಒಂದು ಹಿಗ್...
ಬೆಟ್ಟಪ್ಪ ಎದ್ದಾನ ಘಟ್ಟದ ಮ್ಯಾಲೆ ಕಣ್ಣ ಮಿಟುಕಿಸಿ ಕಂಬಳಿ ಸರಿಸಿ ಮೂಡಲ ಮನೆಯೊಳಗೆ ಸೂರಪ್ಪ ಆಗಲೆ ಎದ್ದೆದ್ದು ಬೆಳಕ ಕಳಿಸ್ಯವನೆ ಇನ್ನೀಗ ನಿದ್ದಿಲ್ಲ ಇನ್ನೀಗ ಕನಸಿಲ್ಲ ಬೆಟ್ಟಪ್ಪ ತಲೆಯೆತ್ತಿ ಕುಂತವನೆ ಮೋಡದ ಮರಿಗಳ ತಲೆ ತಡವಿ ಹೇಳ್ಯವನೆ ಕುರಿಗಳ...
ಇದೆಂತಹ ಗಡಿಗಳು ಎಂತಹ ವಿಭಾಜಕ ರೇಖೆಗಳು ಕಾವೇರಿಯ ತಟದಲಿ ಕುಂಟಾಬಿಲ್ಲೆ ಆಡುತ್ತಾ ಎಲ್ಲರೊಂದಿಗೆ ಕೂಡಿ ಬೆಳೆದವಳು ನಾನು ಇಲ್ಲಿ ಮುಹಾಜಿರಳಾಗಿರುವೆ. ಅಲ್ಲಿ ಮಾಮರಗಳ ಹತ್ತಿ ಮರಕೋತಿ ಆಡಿದ್ದವಳು ಆ ನದಿ, ಬೆಟ್ಟ, ಗಿಳಿ, ಕೋಗಿಲೆ ಹಿಂಡು ಹಿಂಡು ಗೆಳ...
ಬಿತ್ತರಿಸದೆ ತಾಂ ಕಾವ್ಯವ ಗೊತ್ತರಿಯಲಳವೆ ಕವಿಯೆದೆಯಂ? ಕವಿಯೆದೆಯಂ| ಗೆತ್ತಿರದ ವಿಮರ್ಶಕನೇಂ? ಹೆತ್ತರಿಯದ ಬಂಜೆ ಸೂಲಗಿತ್ತಿಯೆ ಜಗದಿ? ||೧|| ಬೆಳಗುವೂಲರ್ಥದಿಂದ ನುಡಿ, ಕಾಣಿಕೆಯಿಂ ಬೆಳೆವಂತೆ ಲೋಚನಂ, ತಳುವುವೊಲಿಂಚರಂ ಸ್ಫುರಣದಿಂ, ನದಿ ತಕ್ಕನಿ...
ಕನ್ನಡದಾ ಬಾವುಟವ ಹಾರಿಸಬನ್ನಿ ಕನ್ನಡದಾ ಕಹಳೆಯ ಮೊಳಗ ಬನ್ನಿ ಕನ್ನಡದಾ ದೀವಿಗೆ ನೀವಾಗಿ ಬನ್ನಿ ಕನ್ನಡಿಗರು ನಾವೆಂದು ಎದೆ ತಟ್ಟಿ ಬಾಳಿ|| ಕೆಂಪು ಹಳದಿ ಬಣ್ಣದ ಧ್ವಜವ ಹಿಡಿದು ವೀರಗಾಥೆಯ ತಿಲಕವನ್ನು ಹಣೆಯ ಮೇಲೆ ಇಟ್ಟು ಐಕ್ಯತೆಯ ಭಾವುಕದ ಮೆರಗನ್...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ದಾರಿಯಲ್ಲಿ ಎದುರಾದರು ಪಾದ್ರಿ ಮಾತ ಮಧ್ಯೆ ಎಚ್ಚರಿಸಿದರು. ‘ಚಪ್ಪಟೆ ಮೊಲೆಗಳು ಜೋತಿವೆ ಕೆಳಗೆ, ಬತ್ತಿ ಹೋಗುತಿವೆ ನಾಳಗಳು; ವಾಸಿಸು ಹೆಣ್ಣೆ ದೇವಸೌಧದಲಿ, ತಕ್ಕುವಲ್ಲ ಕೊಳೆರೊಪ್ಪಗಳು’. ಕೂಗಿ ಹೇಳಿದೆನು ಪಾದ್ರಿಗೆ ...
ಒಂದೇ ಕೇರೀಲ್ ಉಟ್ಟ್ ಬೆಳದೋರು ಒಂದೇ ಬೀದೀಲ್ ಒತ್ ಕಳದೋರು ನಾವ್ಗೊಳ್ ಆಡಿ ಮಾಡಿದ್ದೆಲ್ಲಾ ನಿಂಗ್ ನೆಪ್ಪೈತ ನಂಜಿ? ಕಲ್ಲು ಬಕ್ರೆ ಆರೀಸ್ಕೋಂತ ಗಂಡ ಯೆಡ್ತೀರ್ ಸಂಸಾರಾಂತ ಚಿಕ್ಕಂದ್ನಲ್ ನಾವ್ ಆಟಗೊಳ್ ಆಡಿದ್ ನಿಂಗ್ ನೆಪ್ಪೈತ ನಂಜಿ? ೧ ರತ್ನ ನಂಜಿ...
ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ! ಹಗಲಿರುಳು ದುಡಿದರೂ, ಹಲಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆವೆಚ್ಚ. ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು ನೆತ್ತರದಿ ಬರೆದುದಕೆ ಲೆಕ್ಕವಿಲ್ಲ. ಚಿತ್ರ ಚಿತ್ರ...
ಇರುವೆಗಳಿದಾವೆ ಜಾಗ್ರತೆ ಪುಟಾಣಿ ಇರುವೆಗಳು ಕಟಾಣಿ ಇರುವೆಗಳು ಎತ್ತಲೋ ಹೊರಟಿರ್ತ ಇತ್ತ ನೋಡೋಣಾಂತ ಸುತ್ತ ಬಂದಿವೆ ನಮ್ಮ ಅಟ್ಟುಂಬೊಳಕ್ಕೆ ಸಕ್ಕರೆ ತೆಗೆವಾಗ ಚೆಲ್ಲಿಬಿಟ್ಟೀರಿ ಸಕ್ಕರೆ ಎಂದರವಕ್ಕೆ ಪಂಚಪ್ರಾಣ ಬೆಲ್ಲದ ಡಬ್ಬವ ತೆರೆದೇ ಇಟ್ಟೀರಿ ಬ...













