Home / Poem

Browsing Tag: Poem

ಸಗ್ಗದಿ… ಸಂಕ್ರಾಂತಿ ಸಡಗರದಿ ಬರುತಿರೆ ಸವಿಯ ಸಂಕೇತದಿ ಎಳ್ಳು-ಸಕ್ಕರೆ ವಿನಿಮಯಿಸುತ್ತ ಸಾಗೋಣ ಸರಸದಿ ಸೌಹಾರ್ದತೆಯಲಿ ಮೇಲು-ಕೀಳು ಭೇದಭಾವ ಮರೆತು ಕ್ರಾಂತಿಯ ಸಂದೇಶ… ಸಕಲರಿಗೂ ಸಾರುತಲಿ… ಸಹಬಾಳ್ವೆಯಲಿ… ಸಾಗೋಣ. ಜಲ-...

ಚಂದದಿ ಕೇಳಿದರ ವಿಸ್ತಾರ ವೇದಾಂತದ ಸಾರಾ ಮನಸುಗೊಟ್ಟು ಆಲಿಸಿರಿ ಪೂರಾ || ಪ|| ಮೊದಲಿಗಿತ್ತು ನಿರಾಕಾರಾ ಅದರಿಂದ ಸಾಕಾರ ಶಬ್ದ ಹುಟ್ಟಿತೋ ಓಂಕಾರ ಅಕಾರ ಉಕಾರ ಮಕಾರ ನಾದಬಿಂದು ಕಳಾಕಾರ ಸತ್ವ ರಜ ತಮದಿಯ ವಿಸ್ತಾರ ಸ್ಥೂಲ ಸೂಕ್ಷ್ಮ ಕಾರಣ ಪೂರಾ ಆದೀತ...

ಜೀವನವೊಂದು ಸುಖ-ದುಃಖಗಳ ಸುಂದರ ಸುದೀರ್ಘ ಯಾತ್ರೆ ಭೇದವ ಬೆರೆಸದೆ-ಮಿಂದು ಮುಂದೆ.. ಮುಂದೆ ಸಾಗಬೇಕು ದ್ವೇಷ-ಅಸೂಯೆ ಬದಿಗೊತ್ತುತಲಿ ಜಾತಿ-ಮತಗಳ ಭೇದವ ತುಳಿಯುತ ಒಂದೇ ತಾಯಿಯ ಉದರದಿ ಜನಿಸಿದ ಮನುಕುಲದ ಕುಡಿಗಳೆನ್ನುತಲಿ ಮಿಂದು ಮುಂದೆ-ಮುಂದೆ ಸಾಗಬ...

ಮೂರು ಗುಂಡು ಹಾಕಿ ಆ ಗಾಂಧಿಯನ್ನು ಕೊಂದರಂತೆ ನೂರು ಗುಂಡುಹಾಕಿದರೂ ನಾ ಸಾಯಲೊಲ್ಲೆ ಅಂಥಾದ್ದು ನನ್ನ ಮಹಾತ್ಮೆ ನನ್ನ ಹೃದಯಕ್ಕೆ ಗುಂಡು ತಾಗುವುದಿಲ್ಲ ಯಾಕೆಂದರೆ ನನಗೆ ಹೃದಯವೇ ಇಲ್ಲ ! ಇದ್ದರೂ ಅದು ಹೃದಯವಲ್ಲ ಹೃದಯವಾಗಿದ್ದರೂ ಅದು ಮನುಷ್ಯರದಲ್ಲ...

ಕೋಶಗ್ರಂಥ ವ್ಯಾಕರಣ ಪ್ರಸಂಗದಿ ವಾದಿಸ್ಯಾಡುವ ದಾಸರ ನಾಯಿ || ಪ || ಹೇಸಿ ವಿಷಯ ಗುಣಕೊಳಗಾಗುವ ಕವಿದೋಷಿಕ ಮಾಸ್ಯಾಳರ ನಾಯಿ ಕಾಸು ಕಾಸಿಗೆ ಕೈಯೊಡ್ಡುವ ಯಾಚಕ ದೋಷಕಿಯರು ಸಾಕುವ ನಾಯಿ ಆಸಗೆ ಬೀಳುವ ಸನ್ಯಾಸಿ ಫಕೀರರು ಪಾಶಗಾರ ಪಾಪದ ನಾಯಿ ಕ್ಲೇಶವನರಿ...

ಬುದ್ಧ ಬೇರಾಗು ನನ್ನಲ್ಲಿ ಸಿದ್ಧಿ ತೇರಾಗು. ಝೆನ್‌ಗೆ ಬೇಕೆ? ತುತ್ತೂರಿ ಪೀಪಿ ಶಂಖನಾದ, ಖಡ್ಗ? ನಿಂತಿರುವ ನೋಡಿ ಮುಗ್ಧ ಹುಡುಗ ಓದಿ ಝೆನ್ ಅವನ ಮೊಗದ ತುಂಬಾ! ನನ್ನ ಹೃದಯ ವೀಣೆಯ ಝೆನ್ ತಂತಿಯ ಝೆನ್ ಝೇಂಕಾರ ಅದು ನನ್ನ ಸಾಕಾರ. ಕವಿತೆ ಬರೆದರೆ ಕವ...

ಉದಯ ವಿಹಾರದಲಿ ಎರೆಹುಳು ಹುಡುಕುತಿದೆ ಬಾನ ನಕ್ಷತ್ರ, ದಡದ ಶಂಕಚಕ್ರ ಜಲಪಾತದಡಿಯಲ್ಲಿ ಹಸಿರು ಹುಲ್ಲಿನ ನೃತ್ಯ ಜೀವಸ್ಪಂದನ ಭೂಗರ್ಭದಲ್ಲಿ ಒಂದು ಎರಡು ಅಂಗುಲ ಬುವಿ ಮೇಲೆ, ಕೆಳಗೆ ಬದುಕು ಸಾವಿನ ಭವ್ಯ ಸತ್ಯ ಕ್ರಿಮಿಕೀಟದೊಂದಿಗೆ ಕೆರೆಯ ನೀರಿನಲಿ ತ...

ರಕ್ಷಿಸಿ… ಉಳಿಸಿ, ವಾತ್ಸಲ್ಯದ ಓ… ನನ್ನ ಪ್ರೀತಿಯ ಸಹೋದರರೇ ನನ್ನಿಹ ಉಳಿವು ಅಳಿವಾಗುತಿದೆ ಶೋಷಣೆ ಎಲ್ಲೆಡೆ ನಡೆದಿದೆ ಕೀಚಕ, ದುಶ್ಯಾಸನರು ತುಂಬಿಹರು ಮಾತೆ-ಸಹೋದರಿಯ ಅರ್ಥ ಅರಿಯದ ಲೈಂಗಿಕ ಲಾಲಸೆಯಲಿರುವರು ಬಲಿಪಶುವಾಗಿಸಿ ಬಲಿಗೊಡು...

ಕಾಮ ಇಲ್ಲದ ಮುಂಚೆ ಕಾಮ ಆದಿಯಲ್ಲಿ ಕಾಮಶಾಸ್ತ್ರ ಯಾವಲ್ಲಿತ್ತು ಕಾಮ ಸುಟ್ಟು ಬಹು ಕಷ್ಟವಾಯಿತು ರತಿದೇವಿಗೆ ಬಂದಿತು ಹೊತ್ತು ಭೂಮಿಯೊಳಗ ಆತಿ ಕೌತುಕವಾಯಿತು ಆ ಮಹಾದೇವರು ಬ್ಯಾಸತ್ತು ನೇಮ ಹಿಡಿದು ಆ ಹೇಮಕೂಟದಲಿ ತಾನು ರಹಿತ ಒಂಭತ್ತು ಹೇಮಕೂಟದಲಿ ಉ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...