ಜೀವನವೊಂದು ಸುಖ-ದುಃಖಗಳ
ಸುಂದರ ಸುದೀರ್ಘ ಯಾತ್ರೆ
ಭೇದವ ಬೆರೆಸದೆ-ಮಿಂದು
ಮುಂದೆ.. ಮುಂದೆ ಸಾಗಬೇಕು
ದ್ವೇಷ-ಅಸೂಯೆ ಬದಿಗೊತ್ತುತಲಿ
ಜಾತಿ-ಮತಗಳ ಭೇದವ ತುಳಿಯುತ
ಒಂದೇ ತಾಯಿಯ ಉದರದಿ ಜನಿಸಿದ
ಮನುಕುಲದ ಕುಡಿಗಳೆನ್ನುತಲಿ
ಮಿಂದು ಮುಂದೆ-ಮುಂದೆ ಸಾಗಬೇಕು

ನ್ಯಾಯ-ನೀತಿಯನು ಎತ್ತಿ ಹಿಡಿಯುತ
ದುಷ್ಟ-ದೌರ್ಜನ್ಯವನು ದೂರಕೆ ತಳ್ಳುತ
ಯುವಶಕ್ತಿಯನ್ನೆಲೆಡೆ ಮೆರೆಸುತ
ಭ್ರಾತೃತ್ವ, ಸೌಹಾರ್ದತೆ ಕಹಳೆ ಮೊಳಗಿಸುತ
ಅಳುಕದೆ… ಅರಳುತಲಿ… ಮುನ್ನಡೆಯುವಾ

ಮಾನವೀಯತೆಯ ಮರದಡಿಯಲಿ
ಪ್ರೀತಿ-ಪ್ರೇಮಗಳ ಬಲೆಯಲಿ
ನಾವುಗಳೆಲ್ಲ ಸಹೋದರರೆನ್ನುತಾ…
ಬಿಗುಮಾನಗಳ ಕೊಂಡಿಯ ಕಳಚಿ
ಸ್ವಾಭಿಮಾನದ ಕಿಡಿ-ಕಿಡಿಯಾಗಿ…

ಶಾಂತಿಧಾಮದ ಹಸಿರು ಬಳ್ಳಿಯಾಗುತಲಿ
ಸತ್ಯ-ಶಾಂತಿ, ಸೌಹಾರ್ದತೆ ಚಿಲುಮೆಯಾಗುತ
ಅರಿತು-ಬೆರೆತು-ಒಗ್ಗಟ್ಟಲಿ…
ಮುಂದೆ… ಮುಂದೆ… ಸಾಗಬೇಕು.

***