ರಕ್ಷಿಸಿ… ಉಳಿಸಿ, ವಾತ್ಸಲ್ಯದ
ಓ… ನನ್ನ ಪ್ರೀತಿಯ ಸಹೋದರರೇ
ನನ್ನಿಹ ಉಳಿವು ಅಳಿವಾಗುತಿದೆ
ಶೋಷಣೆ ಎಲ್ಲೆಡೆ ನಡೆದಿದೆ

ಕೀಚಕ, ದುಶ್ಯಾಸನರು ತುಂಬಿಹರು
ಮಾತೆ-ಸಹೋದರಿಯ ಅರ್ಥ ಅರಿಯದ
ಲೈಂಗಿಕ ಲಾಲಸೆಯಲಿರುವರು

ಬಲಿಪಶುವಾಗಿಸಿ ಬಲಿಗೊಡುತಿಹರು
ಮಾನ ಹರಾಜುಗೊಳಿಸುತಲಿ
ನೋವು-ನರಳಾಟದಲಿ ನೂಕುತ
ಅಟ್ಟಹಾಸಗೈಯುತಿಹರು

ನನ್ನಯ ಆಸರೆಗೆ ನೀ ನೆರಳಾಗು
ತಂಗಿಯ ಕರುಳಿನ ಕೊರಳಾಗು
ಪ್ರೀತಿವಾತ್ಸಲ್ಯದ ಶಕ್ತಿಯಲಿ
ನನಗೆಂದೆಂದು… ಬದುಕಲಿ
ಬಾಂಧವ್ಯದ ಶಿಲ್ಪಿಯು ನೀನಾಗು…

***