Poem

ಬಾರ್‌ಗಳು

ಹಿಂದೆ ನೆಡುತ್ತಿದ್ದರು ರಸ್ತೆಗಳ ಉದ್ದಕ್ಕೂ ಸಾಲುಮರ ನೆರಳು ನೀಡಲು ಈಗ ಕಟ್ಟುತ್ತಿದ್ದಾರೆ ಬಾರ್‍ ರೆಸ್ಟೊರೆಂಟ್‌ಗಳು ಕುಡಿದು ತೂರಾಡಲು *****

ಸೇವೆ

ಬಣ್ಣ ಬಣ್ಣದ ಅಕ್ಷರಗಳಿಂದ ಬೀಗುತ್ತವೆ ಬೀದಿ ಬೀದಿಗಳಲ್ಲಿ ಜಾಹಿರಾತಿನ ಫಲಕಗಳು ಯಾವ ಅಕ್ಷರಗಳನ್ನೂ ಶಾಶ್ವತವಾಗಿ ತಮ್ಮೊಳಗೆ ಉಳಿಸಿಕೊಳ್ಳದೆ ನಿಸ್ವಾರ್‍ಥ ಸೇವೆ ಸಲ್ಲಿಸುತ್ತವೆ ಶಾಲೆಗಳಲ್ಲಿನ ಕಪ್ಪು ಹಲಗೆಗಳು *****

ಸಾಧನೆ

ಕೆಲವರು ಬಯಸುತ್ತಾರೆ ತಾವು ಇಡುವ ಪಾದಗಳ ಕೆಳಗೆ ಇರಬೇಕೆಂದು ರತ್ನಕಂಬಳಿಗಳು ಅಮೃತ ಶಿಲೆಗಳು ಡಾಂಬರಿನ ನಯ ನಾಜೂಕಿನ ರಸ್ತೆಗಳು ಆದರೆ ತಮ್ಮ ಕಾಲುಗಳ ಕೆಳಗೆ ಹಿಮಾಲಯ ಪರ್‍ವತಗಳ […]

ಮತ್ಸರ

ನಾ ಚೆಲುವಿಯೆಂದು ಅತಿರೂಪ ಸುಂದರಿಯೆಂದು ಗೆಳತೀ ನಿನಗೇಕೆ ಮತ್ಸರ? ಅರಿತುಕೊ ಎಂದೆಂದಿಗೂ ಗುಣವೇ ಪ್ರಧ್ಯಾನವೆಂದು ಬಹಿರಂಗ ಚೆಲುವೆಲ್ಲಾ ನಶ್ವರ *****