Moon

ಹೊದಿಕೆ ಹೊದಿಸೋಕೆ

ಕಿಟಕಿಯಲ್ಲಿ ಹಣಕಿದ್ದು ಹನಿಮೂನ್ ಗಂಡು ಹೆಣ್ಣನ್ನ ಕದ್ದು ನೋಡೋಕಲ್ಲ ಮಾರಾಯರೆ, ಹೇಳ್ತಿನಿ ಕೇಳಿ ಹೋದದ್ದು ಪಾಪ, ಬೆತ್ತಲೆ ಮಲಗಿದ್ದವರಿಗೆ ಬೆಳದಿಂಗಳ ಹೊದಿಕೆ ಹೊದಿಸೋಕೆ. *****

ಬುದ್ಧಿ ಹೇಳಿ

ಸೂರ್ಯ ದೇವರೇ, ಇಲ್ಲ ಸ್ವಲ್ಪ ಕೇಳಿ ಇಷ್ಟ ಬಂದ್ಹಾಗೆ ಹನಿಮೂನ್ ಮಾಡೋದು, ಕಷ್ಟಪಟ್ಟು ಹೊಸದಾಗಿ ಮದುವೆಯಾದ ಹೆಣ್ಣು ಗಂಡಿನ ಪಾಳಿ, ಆದರೆ ಈ ಚಂದ್ರಂಗ್ಯಾಕೇಂತ, ರಾತ್ರೆ ಅವರ […]

ಪಾಪ ಆ ಸೂರ್ಯ

ಪಾಪ ಆ ಸೂರ್ಯ ಒಂದೇ ಒಂದು ದಿನ ಕೆಲಸ ತಪ್ಸಲ್ಲ; ಬೆಳಕು ಹರೀತಿದ್ದ ಹಾಗೆ ಹಾಜರು, ಒಂದು ನಿಮಿಷ ಲೇಟ್ ಮಾಡಲ್ಲ ಪರದೇಶಿ ಎಷ್ಟು ಒಳ್ಳೇ ಮನುಷ್ಯ […]

ಶಿಸ್ತಿನ ಸಿಪಾಯಿ

ಸೂರ್ಯ ನೋಡು ಶಿಸ್ತಿನ ಸಿಪಾಯಿ ಕತ್ತಲಾಗುತ್ತಲೂ ಮಲಗಿ ಹೊತ್ತಿನಂತೆ ಎದ್ದು ಹೊರಟು ಬಿಡುತ್ತೆ ಸವಾರಿ ನೀನಿದೀಯಾ ನೋಡು ಚಂದ್ರ, ರಾತ್ರಿಯೆಲ್ಲಾ ಪೋಲಿ ಸುತ್ತಿ ಬೆಳಗಾದ ಮೇಲೆ ಪತ್ತೆ […]

ಚಂದ್ರಾ ನಿನಗೆ ಹೊತ್ತಿಲ್ಲ ಗೊತ್ತಿಲ್ಲ

ನಿನಗೇನು ಹೇಳು ಹೊತ್ತಿಲ್ಲ ಹೆತ್ತಿಲ್ಲ ಸಾಕಬೇಕಿಲ್ಲ ಸಲಹಬೇಕಿಲ್ಲ ಮಕ್ಕಳು ಮರಿ ಹೊಟ್ಟೆಪಾಡಿಗಾಗಿ ಬೆವರು ಸುರಿಸಿ ದುಡೀಬೇಕಾಗಿಲ್ಲ ಶಿಸ್ತಾಗಿ ಬೆಳಗಿನವರೆಗೂ ಬಿಳಿ ಬಿಳಿಯಾಗಿ ಷೋಕಿ ಮಾಡಿಕೊಂಡು ಆಕಾಶ ಅಳೀ(ಲೀ)ತಾ […]

ವ್ಯರ್ಥ

ವರ್ಷವಿಡೀ ಭೂಮಿ ಸೂರ್ಯನ ಸುತ್ತ ಸುತ್ತೋದಕ್ಕೇನರ್ಥ? ಅಷ್ಟೂ ತಿಳಿಯೊಲ್ಲವಾ? ಅಪ್ಪಾ ಅವಳಸುತ್ತ ತಿಂಗಳಿಡೀ ನೀನು ಠಳಾಯಿಸೋದು ಸುಮ್ಮನೆ ವ್ಯರ್ಥ. *****

ಎಂಥಾ ಬೆಪ್ಪು

ಈ ಚಂದ್ರ ಎಂಥಾ ಬೆಪ್ಪು ಹುಣ್ಣಿಮೇ ದಿನಾ ಅವನ ಚಂದ ನೋಡಿದ ಸಮುದ್ರ ಕನ್ಯೆ ಹುಚ್ಚಿ ಥರಾ, ಬಟ್ಟೆ ಬಿಚ್ಚಿ ಬೆವರು ಸುರಿಸಿ ಕ್ಯಾಬ್ರೆ ಕುಣಿದಿದ್ದ ನೋಡಿ […]

ನೈಟ್ ಶಿಫ್ಟ್

ಈ ಚಂದ್ರ ನೈಟ್ ಶಿಫ್ಟ್‌ಗೆ ಹಾಕಿಕೊಂಡಿರೋದು ಡ್ಯೂಟಿ ಮಾಡೋಕೆ ಅಲ್ಲ ತಾರೆಯರ ಬ್ಯೂಟಿ ನೋಡೋಕೆ. ಹೇಳೋದು ನೈಟ್ ಡ್ಯೂಟಿ ಮಾಡೋದು ತಾರೆಯರ ಜತೆ ದೊಡ್ಡ ಪಾರ್ಟಿ. *****