ಪಾಪ ಆ ಸೂರ್ಯ ಒಂದೇ ಒಂದು ದಿನ
ಕೆಲಸ ತಪ್ಸಲ್ಲ; ಬೆಳಕು ಹರೀತಿದ್ದ ಹಾಗೆ
ಹಾಜರು, ಒಂದು ನಿಮಿಷ ಲೇಟ್ ಮಾಡಲ್ಲ ಪರದೇಶಿ ಎಷ್ಟು
ಒಳ್ಳೇ ಮನುಷ್ಯ
ನೀನಿದೀಯ ನೋಡು ಚಂದ್ರ, ಒಳ್ಳೇ ದರವೇಶಿ
ಒಂದೊಂದು ದಿನ ಒಂದೊಂದು ವೇಷ
ಎಲ್ಲೋ ಹುಣ್ಣಿಮೆ ಗಿಣ್ಣಿಮ್ಮೆಗೊಮ್ಮೆ ಬಿಟ್ಟರೆ
ಒಂದೇ ಒಂದು ದಿನವೂ ಸಮಯಕ್ಕೆ ಸರಿಯಾಗಿ ಬಂದು
ದಿನಪೂರ್ತಿ ಕೆಲಸ ಮಾಡಿದ್ದೂಂತನೇ ಇಲ್ಲ.
ಅಮಾವಾಸ್ಯೆ ಬಂತೂ ಅಂದ್ರೆ ಸಾಕು ಕಾಯ್ತಿರ್‍ತೀಯಾ
ಪೂರ್ತಿಚಕ್ರ ಕೊಟ್ಟು ಆಡಿಕೆ ಮಾಡಿ ಎಲ್ಲಿ ಹೋಗ್ತೀಯೋ ಹೋಗ್ತೀಯಾ
ಯಾರ ಕೈಗೂ ಸಿಗದೇ ಪರಾರಿಯಾಗ್ತೀಯಾ.
*****
Latest posts by ಶ್ರೀನಿವಾಸ ಕೆ ಎಚ್ (see all)
- ಅಯ್ಯೋ - December 27, 2019
- ದೊಡ್ಡ ಗ್ವಾಲೆ - December 20, 2019
- ಅಮ್ಮಂದಿರ ಗುದ್ದು - December 13, 2019