ಹೆಸರಿನೊಳಗೇನಿದೆ?

೧ ದರ್ಪ ಸೂಚನೆ ಸುಖದ ವಂಚನೆ ’ಮನು’ ಮನದ ಯಾತನೆ ಜಾತಿ ಧರ್ಮ ಆಸ್ತಿ ಗೌರವ ಕಾಣಲಾರವೆ ಹೆಸರೊಳಗೆ? ಊರ ಗೌಡನ ಹೆಸರು ಶೂದ್ರ ಸಿದ್ದನದೇನು? ಗೌಡ ಕರೆದಂತೆ ಕರಿಸಿದ್ದನನ್ನು ಕೂಗಬಹುದೇ ಹೊಲೆಯ ಗೌಡನನ್ನು?...

ಇನಿಯಳಿಗೊಂದು ಕೊನೆಯ ಪತ್ರ !

ಮರೆತು ಬಿಡು ಇರುವ ನೆನಪುಗಳನೆಲ್ಲಾ ಗಂಟುಕಟ್ಟಿ ಎಸೆದು ಬಿಡು ತೇಲಿ ಹೋಗಲಿ ಸಪ್ತ ಸಮುದ್ರಗಳ ತೀರ ದಾಟಿ ತೂರಿ ಬಿಡು ಬರೆದ ಓಲೆಯನೆಲ್ಲಾ ಹರಿದು ಚೂರು ಚೂರು ಹಾರಿಹೋಗಲಿ ಊರು ಕೇರಿಗಳ ಎಲ್ಲೆ ಮೀರಿ...

ಹೊಸ ಸೂರ್ಯನುದಯಕೆ

ತುಂಬಿದೊಡಲ ಅಬಲೆ ಮೇಲೆ ಕಾಮಾಂಧರ ನರ್ತನ ತಾಯೆ ನಿನ್ನ ಒಡಲ ಮೇಲೆ ನಿತ್ಯ ರಕ್ತ ತರ್ಪಣ ಅರಳಲಿಲ್ಲಿ ತಾವು ಎಲ್ಲಿ ಫಲಪುಷ್ಪದ ನಂದನ? ಅತ್ತು ಅತ್ತು ಸತ್ತ ಭ್ರೂಣ ಬಿಕ್ಕಿ ಬಿಕ್ಕಿ ಅತ್ತ ’ಬಾನು’...

ಎತ್ತಿ ಮುದ್ದಾಡು

ಯಾರು ಏನಂದರೇನು ಯಾರಿಗೆ ಹೇಗಿದ್ದರೇನು ಅವರವರ ಮಗು ಅವರಿಗೇ ಚೆನ್ನ ಪುಟಿಕಿಟ್ಟ ಚೊಕ್ಕ ಚಿನ್ನ ಮೂಗು ಮೊಂಡಾಗಿದೆಯೆಂದಿರಾ? ಬೇಟೆಗಾರನ ಕೈಯ ಬಾಣ ಜೋಕೆ ಕಣ್ಣು ಗುಲಗುಂಜಿಯೇ? ದೇವರ ಮುಂದೆ ಹಚ್ಚಿಟ್ಟ ದೀಪ ದೂರವಿರಿ ನಕ್ಕರೆ...

ಚಂದಿರನಿಗೊಂದು ಲಾಲಿ ಹಾಡು

ತಿಳಿ ನೀಲಿಯಾಗಸದಿ ಕರಿಮುಗಿಲ ಹಿಂಡು ‘ಜೋಕುಮಾರನೆ ಚಂದಿರ’ ಮರೆತೆಯಲ್ಲೋ ಬೆಳ್ಳಂಬೆಳಕಿನ ನಗುವ ಉಂಡು ಮಲಗುವ ಮಂಚ ಅವ್ವನ ಹರಿದ ಸೀರೆಯ ಕೌದಿ ನಿನ್ನ ಅಪ್ಪುಗೆಯಿರದೆ ಚಂದಿರ ಮೌನ ತಾಳಿವೆಯಲ್ಲೋ ತಣ್ಣಗೆ ಹೆಬ್ಬಾವಿನೊಲು ಹೊರಳುವ ಹಾದಿಗೆ...

ಒಡೆದ ಗುಮ್ಮಟದ ತುಂಬಾ

೧ ಇರುಳ ಆಕಾಶದ ತುಂಬಾ ಕಪ್ಪನೆಯ ಮೋಡಗಳು ಮಳೆ ಸುರಿದಿದೆ ಧಾರಾಕಾರ ಮೈ ಕೊರೆವ ಚಳಿಯಲ್ಲಿ?! ೨ ಒಂದು ಕಾಲವಿತ್ತು ಈ ನೆಲದ ಮೂಲೆ ಮೂಲೆಯ ಮೇಲೆ ಆ ದೇವನ ಪ್ರೀತಿ ಜಿನುಗಿತ್ತು ಹನಿ...

ಊರಮಂದಿ ದೂರವಾಗೋ ಕಾಲ ಬರುತೈತಿ

ಊರಗುಬ್ಬಿ ಕಾಣದಾದ್ವಲ್ಲೆಽಽಽ ಯಮ್ಮಾಽಽಽ ಊರಗುಬ್ಬಿ ಮಾಯವಾದ್ವಲ್ಲೊಽಽಽ ಯಪ್ಪಾಽಽಽ ಬೆಳಕು ಹರಿದರೆ ಬೆಳಕಿನಂಗೆ ತೂರಿ ಬರುತಿದ್ವಲ್ಲೇಽಽಽ ಗಾಳಿಯಂಗೇ ಗಾಳಿ ಜೊತೆಗೆ ಹಾರಿ ಬರುತಿದ್ವಲ್ಲೋಽಽಽ ಪುರ್ರಂತ ರೆಕ್ಕೆ ಬಿಚ್ಚಿ ಸೊರ್ರಂತ ಹಾರುತಿದ್ವಲ್ಲೋಽಽಽ ಮರದ ತುಂಬಾ ಗಿಲಕಿ ಸದ್ದು...

ಚೇತನ

ಮೊಗ್ಗರಳಿ ಹೂವಾಗಿ ಜಗವು ನಂದನವಾಗಿ ಪ್ರೀತಿಯೊಲಮೆಯ ಚಿಲುಮೆ ಉಕ್ಕಿ ಬರಲಿ ಕೆರೆಯ ದಂಡೆಯ ಮೇಲೆ ಹಸಿರು ಗರಿಕೆಯ ಲೀಲೆ ನಿನ್ನೆದೆಯ ಭಾವಗಳು ಹಾಡುತ್ತ ಬರಲಿ ಮಾವಿನ ಚಿಗುರಲಿ ಕೋಗಿಲೆಯ ದನಿಯಲಿ ನಿನ್ನೊಲವು ಹಾಡಾಗಿ ಹರಿದು...

ಹುಟ್ಟುತ್ತೇನೆ ಹುಲ್ಲಾಗಿ

ನಮ್ಮಮ್ಮ ಹೇಳಿದ್ಲು ‘ದೊಡ್ಡವ್ರು ಸತ್ರೆ ಆಕಾಶದಾಗೆ ಚುಕ್ಕಿ ಆಗ್ತಾರೆ ನಮ್ಮೊಂತೋರು ಸತ್ರೆ ಗುಡ್ಡದಾಗಿನ ಕಲ್ಲು, ಹೊಲದಾಗಿನ ಹುಲ್ಲು ಆಗ್ತೀವಿ’ ಅಂತ ಹುಡುಕುವುದಿಲ್ಲ ಸತ್ತ ಅಪ್ಪನ ಆಕಾಶದಲಿ ಕಳೆದುಹೋದ ಅಮ್ಮನ ಚುಕ್ಕಿಗಳಲಿ... ಎದುರಾಗುವ ಕಲ್ಲು ಬೆಟ್ಟಗಳಲ್ಲಿ...

ಕಾವ್ಯ ಕನ್ನಿಕೆ

ಆಕಿ ಹೆಂಗದಳ ‘ಯಂಗ್’ ಅದಳ ಹೆಂಗೆಂಗೋ ಅದಳ ಮುಂಜಾನಿ ಮೂಡೋ ರಂಗಾಗ್ಯಾಳ ಸಂಜೀಗಿ ಹೊಳೆಯೋ ಚಿಕ್ಕೀ ಆಗ್ಯಾಳ, ಗಿಡದಾಗಿನ ಹಕ್ಕಿ ಆಗ್ಯಾಳ ಆಕಿ ಹೆಂಗದಳ ಬಂಗಾರದಂಥ ನಿಂಬಿ ಆಗ್ಯಾಳ ಜೀವ ತುಂಬಿದ ಗೊಂಬಿ ಆಗ್ಯಾಳ...
cheap jordans|wholesale air max|wholesale jordans|wholesale jewelry|wholesale jerseys