ಮೊಗ್ಗರಳಿ ಹೂವಾಗಿ
ಜಗವು ನಂದನವಾಗಿ
ಪ್ರೀತಿಯೊಲಮೆಯ ಚಿಲುಮೆ ಉಕ್ಕಿ ಬರಲಿ

ಕೆರೆಯ ದಂಡೆಯ ಮೇಲೆ
ಹಸಿರು ಗರಿಕೆಯ ಲೀಲೆ
ನಿನ್ನೆದೆಯ ಭಾವಗಳು ಹಾಡುತ್ತ ಬರಲಿ

ಮಾವಿನ ಚಿಗುರಲಿ
ಕೋಗಿಲೆಯ ದನಿಯಲಿ
ನಿನ್ನೊಲವು ಹಾಡಾಗಿ ಹರಿದು ಬರಲಿ

ಮನೆಯಂಗಳದಿ ಬಳ್ಳಿಯಲಿ
ಮಲ್ಲಿಗೆಯು ಮಘಮಘಿಸಿ
ನಿನ್ನತನವೆನ್ನುವದು ತೇಲಿ ಬರಲಿ

‘ಚೇತನ’ವು ಚೆಲುವಾಗಿ
ನಗೆಯು ಸಿರಿ ಮೊಗವಾಗಿ
ಜೀವನದಲುತ್ಸಾಹ ಮೂಡಿಬರಲಿ
*****