ಸಾಫ್ಟ್‌ವೇರ್ ವಾತಾವರಣದ ಮೂಲಕ ನೆರವಾಗುವ ಸಣ್ಣ ಉಪಗ್ರಹಗಳನ್ನು ಅಮೇರಿಕಾದ ಕ್ಯಾಲಿಫೋರ್ನಿಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಉಡಾಯಿಸಿದೆ. ಹೀಗಾಗಿ ಕಂಪ್ಯೂಟರ್ ಕ್ಷೇತ್ರಕ್ಕೆ ಹೊಸತನ ನಿರ್ಮಿಸಿದೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಣ್ಣ ಉಪಗ್ರಹಗಳು ದೂರದರ್ಶನಕ್ಕೆ ಬಳಸುವ ಉಪಗ್ರಹಗಳಿಂದ ಸಂಪೂರ್ಣ ಪ್ರತ್ಯೇಕವಾಗಿದ್ದು ಗಿನ್ನೀಸ್ ದಾಖಲೆ ಸೇರಿವೆ.

ಈ ಉಪಗ್ರಹಗಳ ವಿನ್ಯಾಸದ ರೂವಾರಿ ರಾಬಿನ್‌ಸನ್. ಕಂಪ್ಯೂಟರ್ ಕ್ಷೇತ್ರದಲ್ಲಿ ಸಾಫ್ಟ್‌ವೇರ್ ಡೆವಲಪರ್‌ಗಳು ಮುಗಿಲು ಮುಟ್ಟುವ ಕೆಲಸ ಪೂರೈಸಿ ಇದೀಗ ಏನು ಮಾಡಬೇಕು ಎಂಬ ಆಲೋಚನೆಗಳ್ಳಿದ್ದಾಗ ಈ ಸಣ್ಣ‌ಉಪಗ್ರಹಗಳ ರಚನೆಯನ್ನು ಮಾಡಲಾಯಿತು.

ಹಿಂದೆಂದೂ ಕಾಣದ ಉಷ್ಣ ಹಾಗೂ ಶಾಖವನ್ನು ಅಮೇರಿಕಾ ಎದುರಿಸುತ್ತಿದ್ದೂ ಅಲ್ಲಿನ ವಾತಾವರಣ ಹಾಗೂ ವಾಯುಗುಣ ಸಂಪೂರ್ಣ ಬದಲಾಗಿದ್ದು ಪರಿಸರದ ಮೇಲೂ ತೀವ್ರ ಪ್ರತಿಕೂಲ ಪರಿಣಾಮ ಕಾಣುತ್ತದೆ. ಈ ಹಿನ್ನಲೆಯಾಗಿ ಉಪಯೋಗಕ್ಕಾಗಿ ರಚಿತವಾದ ಉಪಗ್ರಹಗಳು ವಾತಾವರಣದಲ್ಲಿ ಪ್ರಭಾವಬೀರುತ್ತವೆ. ಒಟ್ಟಿನಲ್ಲಿ ಭೂಮಿಯ ಸುತ್ತಲೂ ಈಗಾಗಲೇ ಸಹಸ್ರಾರು ಸಂಖ್ಯೆಯ ಉಪಗ್ರಹಗಳು ಸುತ್ತತ್ತಲೇ ಇವೆ. ಒಂದಕ್ಕೊಂದು ಎಕ್ಸಿಡೆಂಟಾಗದಿದ್ದರೆ ಸಾಕಲ್ಲವೆ? ಇಂಥಹ ಸಣ್ಣ‌ಉಪಗ್ರಹಗಳ ರಚನೆ ಬೇರೆ ದೇಶಗಳಲ್ಲಿಯೂ ಪ್ರಚೋಧನೆ ನೀಡುತ್ತಲಿದೆ.
*****