Home / Hanneradumath

Browsing Tag: Hanneradumath

ಗುರುವೆ ನಿನ್ನ ನೆನಪು ತಂಪು ಲಿಂಗ ಬೆಳಕು ಬೆಳಗಿದೆ ಒಳಗು ತಂಪು ಹೊರಗು ಸಂಪು ಜ್ಯೋತಿ ಲಿಂಗವು ಅರಳಿದೆ ಮೌನ ಕಡಲಿನ ಶಾಂತ ಅಲೆಯಲಿ ಮನವು ಮಲ್ಲಿಗೆಯಾಗಿದೆ ಆಳ ಸಾಗರ ಶಾಂತ ತಳದಲಿ ಲಿಂಗ ಬಾಗಿಲು ತೆರೆದಿದೆ ನಿನ್ನ ಸ್ಪರ್ಶಾ ಹರ್ಷ ಹರ್ಷಾ ನವಿಲು ನಾಟ...

ತುಂಬು ಕಂಕಣ ಚಲುವಿ ತುಂಬ ಬಾರೆ ಇಲ್ಲಿ ಬಾಳೆಹೊನ್ನೂರಿನಲಿ ಬೆಳಕು ಕಂಡೆ ಏನು ಕೋಗಿಲೆ ಗಾನ ಎಂಥ ಪ್ರೀತಿಯ ಪಾನ ಗುಡ್ಡ ಬೆಟ್ಟದ ಮೌನ ಗುರುವ ಕಂಡೆ ಜಾತಿ ಜಂಜಡ ಇಲ್ಲ ಕೋತಿ ಕಿಚಪಿಚ ಇಲ್ಲ ಓ ನೋಡು ನಿ೦ತಾನು ವೀರಭದ್ರ ಪ್ರೀತಿಯೊಂದೆ ಗೊತ್ತು ಪ್ರಾಣಲಿ...

(ಜಾನಪದ ಶೈಲಿ) ಕಂಡೆನವ್ವಾ ಕ೦ಡೆ ಗ೦ಡನ ಖಡಕ ಗಂಡಾ ಕಾಡಿದಾ ಬೇಡವೆಂದೆ ಖೋಡಿಯೆಂದೆ ಮೋಡಿ ಮಾಡಿ ಓಡಿದಾ ತ೦ದಿ ಗುರುವು ಮುಂದೆ ಬಂದಾ ಕಾಡುಲಿಂಗನ ಕಟ್ಟಿದಾ ಕಾಣಲಾರದ ಪತಿಯ ಕಾಣಿಸಿ ನಾಡ ಮದುವಿಯ ಮಾಡಿದಾ ಮಿಲನವಿಲ್ಲಾ ಮಾತು ಇಲ್ಲಾ ಮಂಚವಿಲ್ಲಾ ಶಿವಶಿ...

(ಕೋಲು ಕುಣಿತ) ಬಾರೆ ಸಖೀ ಚಂದ್ರ ಮುಖಿ ಕೋಲು ಕುಣಿಯುವಾ ಗೆಜ್ಜೆ ಹೆಜ್ಜೆ ಘಿಲ್ಲ ಘಿಲಕ ಗುರುವ ನೆನೆಯುವಾ ಠಪ್ಪ ಠಪಾ ಬಣ್ಣ ಕೋಲು ಗುರುವ ಕೂಗುವಾ ಠಕ್ಕ ಠಕಾ ಕೋಲು ಕುಟ್ಟಿ ಹರನ ಕರೆಯುವಾ ಗಿರ್ರ ಗಿರಕ ಗಿರಕಿ ಹಾಕಿ ಗುರುವ ಕಾಲುವಾ ಕೂಗಿ ಕುಣಿದು ಕ...

ನಾನೆ ಹೂವು ನಾನೆ ತಂಗು ನಾನೆ ಆರತಿಯಾಗುವೆ ಪಂಚಪೀಠದ ಪರಮ ಗುರುವೆ ನಿನಗೆ ಆರತಿ ಬೆಳಗುವೆ ಜಯ ಜಯ ಗುರುವರ ರೇಣುಕಾ ಜಗದ್ಗುರು ಋಷಿ ರೇಣುಕಾ || ಜಡದ ದೇಹದ ತೇಗು ಹಿಡಿಯುವೆ ಮನದ ಕರ್ಪೂರ ಹಚ್ಚುವೆ ಜೋಡು ಕಣ್ಣಿನ ತುಪ್ಪದಾರತಿ ನಿನಗೆ ಅರ್ಪಿಸಿ ಬೆಳಗ...

ಕೋಟಿ ಕೋಟಿ ಜಗದ ಚಿಂತೆಗೆ ಪಂಚ ಪೀಠವೆ ಉತ್ತರಾ ಶಿವನ ಪರಮಾನಂದ ಭಾಗ್ಯಕೆ ಪಂಚಪೀಠವೆ ಹತ್ತಿರಾ ಪಂಚ ಪೀಠದ ಪೃಥ್ವಿ ಢಮರುಗ ಪಂಚ ಗುರುಗಳು ಢಮಿಸಲಿ ಪ೦ಚ ಪೀಠದ ಚಂದ್ರ ತಾರೆಗೆ ಭುವನ ಸು೦ದರವಾಗಲಿ ಚರ್ಮ ದೇಹವೆ ಮಂತ್ರವಾಗಲಿ ಶಿಲೆಯು ಶಿವಗುಣ ಪಡೆಯಲಿ ಜ...

ಮಲಯ ಪರ್ವತ ಮಧುರ ಬನದಲಿ ಯಾರು ನಿನ್ನನು ಕರೆದರು ಕಣ್ಣು ಕಾ೦ಚನ ಶಿವನ ಲಾಂಛನ ದೇವ ಗುರುಗಳು ಬಂದರು ಕಾಡು ಕಂದರ ಶಿಖರ ಸುಂದರ ಹಸಿರು ಹೂವಿನ ದೇವರು ಮೇಲೆ ಗಗನದ ಹನಿಯು ತೋರಣ ಕಾಯ ಹರುಷವ ತಂದರು ಹೊನ್ನ ಮುಕುಟಾ ಹಸಿರು ಬಾವುಟಾ ವೀರಪೀಠದಿ ಮರೆವರು ...

ಪಂಚಪೀಠದ ಶಿವನ ಮಠದಲಿ ಬನ್ನಿ ಬನ್ನಿರಿ ಕುಣಿಯುವಾ ಹೆಜ್ಜೆ ಹೆಜ್ಜೆಗೆ ಗೆಜ್ಜೆ ಕುಣಿಸುತ ಯೋಗ ನರ್ತನ ಮಾಡುವಾ… ಶಿವಧೋಂ ಶಿವಧೋಂ ಶಿವಧೋಂಽಽ ಮಾವು ಮಲ್ಲಿಗೆ ಬಕುಲ ಸಂಪಿಗೆ ಚಂಗುಲಾಬಿಯ ತೂರುವಾ ಆತ್ಮಸಂಯಮ ಯೋಗ ಸ೦ಯಮ ಲಿಂಗ ಸತ್ಯವ ಸಾರುವಾ ನಾ...

ಅತ್ತಾ ಇತ್ತಾ ಸುತ್ತಾ ಮುತ್ತಾ ವ್ಯರ್‍ಥ ತಿರುಗಿದೆ ಗಣಗಣಾ ನನ್ನ ಅರಮನೆ ಶಿವನ ಸಿರಿಮನೆ ಮರೆತು ಸುತ್ತಿದೆ ಬಣಬಣ ಗುಡ್ಡಾ ಹತ್ತಿದೆ ಬೆಟ್ಟಾ ದಾಟಿದೆ ಶಿವನ ಹುಡುಕುತಾ ತಿರುಗಿದೆ ಹೊಳೆಯು ಹಳ್ಳಕೆ ಕಡಲು ಕೊಳ್ಳಕೆ ಶಿವನ ಕೂಗುತಾ ಬಳಲಿದೆ ಅವರು ಇವರಿ...

ಬಾಳೆಹೊನ್ನೂರಿನಲ್ಲಿ ಜೇನು ತುಪ್ಪದ ಹಾಡು ಶಿವಯೋಗದಾನಂದ ಗಾನ ಕೇಳು ಗುರುಲಿಂಗ ಜಂಗಮದ ಶಿವತತ್ವ ಸಂಗೀತ ವೀರಭದ್ರನ ಬಳಿಗೆ ಬಂದು ಕೇಳು ಗಗನವೆ ಗುರುಲಿಂಗ ಭೂಮಿಯೆ ಶಿವಲಿಂಗ ವೀರಸೋಮೇಶ್ವರನ ಪೂಜೆ ನೋಡು ಶ್ರೀವೇದ ವೇದಾಂತ ಸಿದ್ದಾಂತ ಭಾಷ್ಯಗಳ ಪರಮ ಜ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...