ಗುರುವ ಮರೆತರ ನಿನಗ ಚಂದವೇನ ತಂಗಿ
ಮರೆಯಬೇಡಾ ತಂಗಿ ಮರುಗಬೇಡಾ
ಬಾಳೆಹೊನ್ನೂರಾಗ ಬಂಗಾರ ಯುಗಬ೦ತ
ಕಳಶ ಕನ್ನಡಿ ತುಂಬ ತಾರ ತಂಗಿ
ಗುರುವೆ ತಾಯಿಯು ಯುಗಳ ಗುರುವೆ ತಂದಿಯು ಜಗಕ
ಚಿತ್ತ ಚಿನುಮಯ ಲಿಂಗ ಗುರುವು ತಂಗಿ
ಗುರುವು ತೋರಿದ ದಾರಿ ಸತ್ಯವಂತರ ಭೇರಿ
ರಂಭಾಪುರೀ ಪೀಠ ಭಾರಿ ತಂಗಿ
ಕಲಶ ತು೦ಬುತ ಬಾರೆ ತುಪ್ಪದಾರತಿ ಬೇರೆ
ಸೆರಗು ಹಾಸುತ ನೀರೆ ನಂಬಿ ಬಾರೆ
ಗುರು ಬ೦ದ ಹರ ಬಂದ ಶಿವಬಂದ ಅಪ್ಪಯ್ಯ
ಪಂಚಪೀಠದ ಮಿಂಚು ತುಂಬಿ ತೋರ
ಉಸಿರು ಉಸಿರಲಿ ಶಿವನ ಹೆಸರು ಬರೆಯೆ ತಂಗಿ
ಕಮಲ ಮಲ್ಲಿಗಿ ಜಾಜಿ ಸುರಿಸಿ ಬಾರೆ
ಗುರು ಲಿಂಗ ಜಂಗಮಕೆ ಜಗವು ಝಗಮಗ ತಂಗಿ
ಅಂಗೈಯ ಗಿಣಿರಾಮ ಕೂಗತಾನೆ
*****