Home / ಕಾದಂಬರಿ

Browsing Tag: ಕಾದಂಬರಿ

ಅಧ್ಯಾಯ ೧೨ ಮುರಿದುಬಿದ್ದ ಮದುವೆ ಸಂಜೆ ರಿತು ಮನೆಗೆ ಬರುವಷ್ಟರಲ್ಲಿ ಜಸ್ಸು ಬಂದು ಕುಳಿತಿದ್ದ. ಎಂದಿನ ನಗು, ಆಕರ್ಷಣೆ, ಇದೇ ನಗುವಿಗಲ್ಲವೇ ತಾನು ಸೋತುಹೋಗಿದ್ದು. ಆ ಸ್ನೇಹಪರತೆ, ಸರಳತೆ, ನೇರ ಮಾತು, ದಿಟ್ಟ ನಡೆ ಎಲ್ಲವೂ ತನಗೆ ಮೆಚ್ಚುಗೆಯಾಗಿತ್...

ಅಧ್ಯಾಯ ೧೧ ಸಂತಸದ ನಡುವಿನ ಚಿಂತೆ ತಿಂಡಿ-ಕಾಫಿ ತಂದಿಟ್ಟು ಬಲವಂತ ಮಾಡಿದರೂ ಯಾಕೋ ತಿನ್ನಲು ಮನಸ್ಸಾಗದೆ ಬರೀ ಕಾಫಿ ಮಾತ್ರ ತೆಗೆದುಕೊಂಡಳು. ಒಳಗಿರುವ ಹಿರಿಯ ಜೀವವನ್ನು ಒಮ್ಮೆ ನೋಡಬೇಕೆಂದು ಮನಸ್ಸು ಬಯಸಿತು. ಅದನ್ನು ವ್ಯಕ್ತಪಡಿಸಿದಳು. “...

ಅಧ್ಯಾಯ ೧೦ ಅಡುಗೆ ಭಟ್ಟರ ಅವಾಂತರ “ವಾಸು, ಇದೇನು ಮಾಡ್ತಾ ಇದ್ದೀರಿ? ಸಾಮಾನು ಕಡಿಮೆ ಇದೆ ಅಂತ ಅಡುಗೆಯವರು ಹೇಳ್ತಾ ಇದ್ದಾರೆ. ನೀವು ಮಾತ್ರ ಬಿಲ್ ಸರಿಯಾಗಿ ಕೊಡ್ತಾ ಇದ್ದೀರಿ, ಯಾಕೆ ವಾಸು?” ಗಂಭೀರವಾಗಿ ಪ್ರಶ್ನಿಸಿದಳು ರಿತು. &#...

ಅಧ್ಯಾಯ ೯ ಅಮ್ಮ-ಮಗನ ಕಥೆ ಸರೋಜಮ್ಮ-ಗೋವಿಂದಪ್ಪ ದಂಪತಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳಿಲ್ಲದೆ ಕೊರಗುತ್ತಿದ್ದರು. ಪೂಜೆ, ವ್ರತ, ಆಸ್ಪತ್ರೆ ಎಲ್ಲಾ ಆದರೂ ಫಲ ಮಾತ್ರ ದೊರೆತಿರಲಿಲ್ಲ. ಮಕ್ಕಳಿಲ್ಲದ ಸಂಕಟ ಕಾಡಿ, ಹಿಂಸಿಸುತ್ತಿತ್ತು. ಒಂದು ...

ಅಧ್ಯಾಯ ೮ ‘ನಮ್ಮ ಮನೆ’ಯ ಕಥೆ ಸ್ವಾರ್ಥವಿಲ್ಲದ ಜೀವನ ಇಷ್ಟೊಂದು ನೆಮ್ಮದಿ ತರಬಹುದೇ ಎಂಬ ಪ್ರಶ್ನೆ ಹಲವಾರು ಬಾರಿ ವಸುವಿನಲ್ಲಿ ಮೂಡಿ ಮರೆಯಾಗುತ್ತಿತ್ತು. ಆದರೆ ವೆಂಕಟೇಶನ ವರ್ತನೆ ಅವಳನ್ನು ಸಾಕಷ್ಟು ಕುಗ್ಗಿಸುತ್ತಿತ್ತು. ಎಂಥ ಉದಾತ್ತ ವ್ಯಕ್ತಿ ...

ಅಧ್ಯಾಯ ೭ ಅಪ್ಪನಿಂದಾಗಿ ದೂರವಾದ ಗಂಡ ವಸು ಇಬ್ಬರು ಅಕ್ಕಂದಿರು, ಇಬ್ಬರು ತಮ್ಮಂದಿರ ನಡುವೆ ಮುಟ್ಟಿದವಳು. ಬರೀ ಹೆಣ್ಣೇ ಎಂದು ಅಸಹನೆಯಿಂದ ಸಿಡಿಯುತ್ತಿದ್ದ ಸಂಸಾರದಲ್ಲಿ ತಂಗಾಳಿಯಂತೆ ಹುಟ್ಟಿದ ಗಂಡುಮಕ್ಕಳು ಹೆಣ್ಣುಮಕ್ಕಳ ಪಾಲಿಗೆ ಬಿಸಿ ಗಾಳಿಯಾಗ...

ಅಧ್ಯಾಯ ೬ ರತ್ನಮ್ಮನ ಕರುಣ ಕಥೆ ರಿತು ಆಫೀಸಿಗೆ ಬರುವಾಗ ಹೊರಗಡೆ ಕಾರು ನಿಂತದ್ದನ್ನು ಗಮನಿಸಿ, ಯಾರು ಬಂದಿರಬಹುದು ಎಂದುಕೊಳ್ಳುತ್ತಲೇ ಒಳನಡೆದಿದ್ದಳು. ಹಣ್ಣು ಹಣ್ಣು ಮುದುಕಿಯೊಬ್ಬರನ್ನು ಇಬ್ಬರು ತೋಳು ಹಿಡಿದು ನಿಧಾನವಾಗಿ ನಡೆಸಿಕೊಂಡು ಹೋಗುತ್...

ಅಧ್ಯಾಯ ೫ ಸೊಸೆಯ ದೂರು ಮನೆಗೆ ಬರುವಷ್ಟರಲ್ಲಿ ಊರಿನಿಂದ ಮನುವಿನ ತಮ್ಮ ರಾಜೀವ್ ಅಮ್ಮನನ್ನು ಕರೆದುಕೊಂಡು ಬಂದಿದ್ದ. ಅತ್ತೆ ಗಾಬರಿಯಾಗುವರೆಂದು ಮನು ಬಿದ್ದ ವಿಷಯ ಅಲ್ಲಿಗೆ ತಿಳಿಸುವುದು ಬೇಡವೆಂದು ತನುಜಾ ತಡೆದಿದ್ದಳು. ಆದರೆ ಹೇಗೊ ವಿಷಯ ತಿಳಿದೊ...

ಅಧ್ಯಾಯ ೪ ವೃದ್ಧ ದಂಪತಿಗಳ ಆತ್ಮಹತ್ಯೆ ಗುಂಪಾಗಿ ನಿಂತು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಕುತೂಹಲ ಕೆರಳಿ ಗುಂಪಿನತ್ತ ನಡೆದಳು. ತನುಜಾಳನ್ನು ಕಂಡಕೂಡಲೇ ಸಮೀರ್, “ಮೇಡಮ್ ವಿಷಯ ಗೊತ್ತಾಯ್ತಾ? ಮೊನ್ನೆ ಮಗನನ್ನು ಹುಡುಕಿಕೊಂಡು ಬಂದಿದ್ರ...

ಅಧ್ಯಾಯ ೩ ಮನು ಕಾಲು ಮುರಿದುಕೊಂಡ “ರಿತು ಇವತ್ತು ಏನಾಯ್ತು ಗೊತ್ತಾ? ಆಫೀಸಿನಲ್ಲಿ, ಇನ್ನೇನು ಆಫೀಸ್ ಟೈಮ್ ಮುಗೀಬೇಕು ಅನ್ನುವಾಗ ಯಾರೋ ಇಬ್ಬರು ವಯಸ್ಸಾದ ದಂಪತಿ ಲಗೇಜ್ ಹಿಡ್ಕೊಂಡು ಸೀದಾ ಆಫೀಸಿನೊಳಗೆ ಬಂದರು. ಅವರ ಮಗ ಇದೇ ಆಫೀಸಿನಲ್ಲಿ ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...