Home / Kannada Poetry

Browsing Tag: Kannada Poetry

ತೊಗಲ ನಾಲಗೆ ನಿಜವ ನುಡಿಯಲೆಣಿಸಿದರೆ, ತಾ- ನಂಗೈಲಿ ಪ್ರಾಣಿಗಳ ಹಿಡಿಯಬೇಕು. ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು ಉರಿಯ ನಾಲಗೆಯಿಂದ ನುಡಿಯಬೇಕು. ಸುಡುಗಾಡಿನಲಿ ಹುಡುಗ ಹೆಣವಾದರೇನು? ಕೈ- ಹಿಡಿದವಳು ಹೊಲೆಯನಾಳಾದರೇನು ? ಸಿಲುಬೆಯಲ್ಲೊಡಲು, ವಿ...

ಭಗವಿದ್ದಿತು ಭಗವಂತನಿದ್ದನು ಫ್ರಾಯ್ಡನು ಬರುವ ವರೆಗೆ ಕಾಮವಿದ್ದಿತು ಪ್ರೇಮವಿದ್ದಿತು ರೋಮಾಂಚನವು ಇದ್ದಿತು. ಹೆಣ್ಣುಗಂಡುಗಳಿದ್ದರು ಸ್ತ್ರೀಲಿಂಗ ಪುಲ್ಲಿಂಗಗಳಿದ್ದುವು ಅಂಗನೆಯರಿದ್ದರು ಅನಂಗನು ಇದ್ದನು ಅವನ ಕೈಯಲಿ ಕಬ್ಬಿನ ಬಿಲ್ಲು ಇದ್ದಿತು ಲಿ...

ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ ಸಾಫಾಗ್ ಅಳ್ಳ ತಿಟ್ಟಿಲ್ದಂಗೆ ಮಡಿಕೇರೀಲಿ ಮಂಜು! ಮಡಗಿದ್ ಅಲ್ಲೇ ಮಡಗಿದ್ದಂಗೆ ಲಂಗರ್ ಬಿದ್ದಿದ್ ಅಡಗಿದ್ದಂಗೆ ಸೀತಕ್ ಸಕ್ತಿ ಉಡಗೋದಂಗೆ ಅಳ್ಳಾಡಾಲ್ದು ಮಂಜು! ೧ ತಾಯಿ ಮೊಗೀನ್ ...

(೧೯೪೩ನೆಯ ಇಸವಿಯ ಕೊನೆಯ ೪ ತಿಂಗಳಲ್ಲಿ ಬಂಗಾಲದಲ್ಲಿ ಕ್ಷಾಮಕ್ಕೂ ರೋಗಕ್ಕೂ ತುತ್ತಾದವರನ್ನು ಕುರಿತು) ಸತ್ತರೇ ಅಕಟ ಮೂವತ್ತಯಿದು ಲಕ್ಷ ಬಂಗಾಲದೊಳಗೆಮ್ಮ ಕಂಗಾಲ ಬಳಗಂ! ಬೋನದಾ ದುರ್‍ಭಿಕ್ಷ, ಬೇನೆಯ ಸುಭಿಕ್ಷ – ಕರು ಉಂಡಿತೇ ಹಾಲು ತುರು ಹಿ...

ಕನ್ನಡ ತಾಯ್ ಹೊನ್ನ ತೇರ ಎಳೆಯ ಬನ್ನಿ ಕನ್ನಡದಾ ಭಾವದೆಳೆಯ ಸಸಿಯ ನೆಡ ಬನ್ನಿ || ವನಸ್ತೋಮಗಣಮತ ಮಾನವತೆಯ ತೆನೆಯ ಬೆಳೆಸಿ ಹಸಿದ ಜೀವಂತ ದಾಳದ ಹಸಿರಾಗ ಬನ್ನಿ|| ವ್ಯೋಮ ಕೂಟವನು ನಿಲ್ಲಿಸಿ ಹಾಲ್ಗಡಲ ಮಥಿಸಿ ಐಕ್ಯ ಭಾವದೆಳೆಯ ಜೀವ ಕೋಟಿ ಮೂರ್ತಉದಿಸ ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ‘ಹೆಣ್ಣುಗಳ ವ್ಯಾಮೋಹ ಇದೆಯೆಂತಲೇ ನನಗೆ ಮಲೆಗಳಲ್ಲೂ ಇಂಥ ಮೋಹ’ ದೈವ ಕಳಿಸಿದ ಜಾಗದಲ್ಲಿ ಅಲೆಯುವ ಒರಟು ಮುದುಕ ನುಡಿದನು ಹೀಗೆ ಮನವ. “ಸಾಯಲಾರೆನೆ ನಾನು ಮನೆಯ ಚಾಪೆಯ ಮೇಲೆ ಮುಚ್ಚು ಕಣ್ಣನು ನಿನ್ನ ಕೈಯಿಂದಲೇ,...

ರಕ್ತ ಸಿಕ್ತ ಕರ್‍ಬಲಾದ ಬೀದಿಗಳೇ ನಿಮ್ಮೆದೆಯ ಕದವ ತೆರೆದು ಮಾತಾಡಿಸಿ ಗಲೀಫ್ ತೊಟ್ಟ ಕಲ್ಲು ಗೋರಿಯಾಗಿಸದಿರಿ ನಿಮ್ಮ ಮನೆ ಬಾಗಿಲಿಗೆ ಬಂದಿರುವೆನು. ನಿಮ್ಮ ಮನೆ ಮುಂದೆಯೇ ರಕ್ತ ರಣರಂಗವಾಗುವಾಗ, ನೀವೇಕೆ ಪ್ರತಿಭಟಿಸಲಿಲ್ಲ ಮಾತಾಡಿ ಮೀನಾರುಗಳೇ. ನಿ...

ತೊಗಲ ಚೀಲಗಳಲ್ಲಿ ಬದುಕು ನಡೆದಿದೆ. ಹೊಟ್ಟೆ ಹೊಸೆಯುವದೆ ಬಾಳುವೆಯು; ನಿದ್ದೆ ಹಿಗ್ಗು; ಮಣ್ಣಿನಲಿ ಅನ್ನವನು ಹುಡುಕುತಿವೆ ಕಣ್ಣುಗಳು; ಇನ್ನುವೂ ಹೂತಿಲ್ಲ ಮನದ ಮೊಗ್ಗು. ಬಾನ ತುಂಬಿದೆ ಶಂಖನಾದ, ತಿರುತಿರುಗುತಿದೆ ಚಕ್ರ, ಬಣ್ಣಗಳಲ್ಲಿ ಬೀರಿ ಪ್ರಭೆ...

ಉಂಡುಂಡು ಮಲಗೋ ನಂಜುಂಡ ಅಯ್ಯ ಚಿತ್ರಾನ್ನ ಮೊಸರನ್ನ ಪರಮಾನ್ನ ತಂದೇವೊ ಹಾಲನ್ನ ಪಾಯಸ ಮೃಷ್ಟಾನ್ನ ತಂದೇವೊ ಉಂಡುಂಡು ಮಲಗಯ್ಯ ನಂಜುಂಡ ಅಯ್ಯ ನೀ ದುಂಡಾಗೆ ಮಲಗೊ ತಿಂದು ಮಲಗೋ ನಂಜುಂಡ ಅಯ್ಯ ಒಗ್ಗರಣೆ ಅವಲಕ್ಕಿ ಕಲಸಿದ ಮಂಡಕ್ಕಿ ಎಳ್ಳುಂಡೆ ಗುಳ್ಳುಂಡ...

ಅವರು ಹೆತ್ತು ಹೆತ್ತು ನಲುಗಿದ ಹೆಣ್ಣುಗಳು ದುಡಿದು ದುಡಿದು ಸವೆದು ಹೋದ ದೇಹಗಳು ಸಹಿಸಿ ಸಹಿಸಿ ಸುಣ್ಣವಾದ ಅವರ ಮನಸುಗಳು ಸುತ್ತಲೂ ಎತ್ತರೆತ್ತರದ ಪಹರೆ ಗೋಡೆಗಳು ಉಸಿರುಗಟ್ಟಿಸುವ ನಿಯಮಗಳು ನಡುವೆ ಸಮಾಧಿಯಾದ ಬದುಕು. ಗೋಡೆಯಾಚೆ ತೂಗುತ್ತಿದೆ ನೋಡ...

1...3637383940...161

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....