Home / Poem

Browsing Tag: Poem

ನಾವು ಕಲಾವಿದರು ಬೆಳಕಿನ ತೇರನೆಳೆಯುವವರು ರವಿ ಮೂಡುವ ಮುನ್ನ ಕಣ್ಣ ತೆರೆದು ನಾಗರಿಕ ಕಿರಣಗಳು ನೆಲ ಮುಟ್ಟುವ ಮುನ್ನವೇ ಎದ್ದವರು ತಂಗಾಳಿಗೆ ಮೈಯೊಡ್ಡಿದವರು ಅರುಣೋದಯದ ಉಷಾಕಾಂತಿಗೆ ಮೈಪುಳಕಗೊಂಡು ಆಹಾ ಓಹೋ ಓಂ…. ಎಂದು ಉದ್ಗಾರ ತೆಗೆದವರು ...

ಯಾವ ನಲಿವು ನನ್ನ ಹೀಗೆ ತಬ್ಬಿ ಹಿಡಿದಿಹುದು ಸಹಿಸಲಾಗದಂಥ ಮಧುರ ನೋವು ಕೆರಳಿಹುದು? ಬೀದಿಜನರು ಕೈ ತೋರುವ ಮನೆಯ ತನಕ ಬಂದು ರಾಧೆಗೊಲಿದ ಮೇಘಪ್ರೀತಿ ಕದವ ತಟ್ಟಿತು ಇಷ್ಟು ದಿನದ ಧ್ಯಾನಕೆ ಕಾಯ್ದುಕೊಂಡ ಮಾನಕೆ ಒಲಿದ ದೈವ ಒಳಗೆ ಬಂದು ಬೆಳಕ ತುಂಬಿತು...

ಎಲ್ಲೆಲ್ಲೂ ತೈಲುಬಾವಿಗಳ ಜಿಡ್ಡು ಘಾಟಿವಾಸನೆ ಮರುಭೂಮಿಗಳಿಗದೇನೋ ಜೀವನೋತ್ಸಾಹ ಸೆಳಕು ಸೆಳಕು ಬಿಸಿಲು ಹರಿದೋಡಲು ಹೆದ್ದಾರಿಗುಂಟ ಏರ್ ಕಂಡೀಶನ್‌ಗಳ ಘಮಲು…. ಕಣ್ತಪ್ಪಿ ಎಂದೋ ಬೀಳುವ ಧಾರಾಕಾರ ಮಳೆಯ ಸಾವಿರಕಾಲೋ ನೂರು ಗಾಲಿಗಳೊ ಉರುಳುರುಳಿ ...

ಅಲ್ಲಿ ಝಗಝಗಿಸುವ ಸೂರ್ಯ ಉರಿನಾಲಿಗೆ ಚಾಚುತ್ತಾನೆ ಅವನಂತೆ ತಿರುಗಣಿಯ ಗೋಳಾಟವಾಡುವ ಉರಿಯುಂಡೆಗಳು ಯಾವ ಒಡಲಿಗಾಗಿ ತಿರುಗುತ್ತಿವೆಯೋ? ಎರವಲಿಗೆ ಮೈತೊರೆದು ಗೂಟಕೊಡನಾಡುತಿವೆ ಗಣನೆಯಿಲ್ಲದ ಮಣ್ಣ ಗುಂಡುಗಳು, ನೆರಳ ಬಂಡುಗಳು ಇಲ್ಲಿ ಕೆಳಗೆ ಹಸಿದ ಮಣ...

ಅವಳು ದೋಸೆಹಿಟ್ಟು ತಿರುವಿ ಬೋಸಿಗೆ ತುಂಬಿಟ್ಟು ಇದ್ದಂಗೇ ಇರಬೇಕು ಎಂದೆಚ್ಚರಿಕೆ ಕೊಟ್ಟು ನೆಮ್ಮದಿಯಲಿ ಮಲಗಿ ಏಳುವಾಗಾಗಲೇ… ದೋಸೆಹಿಟ್ಟು ಒಳಗೇ ಹುಡುಗಿ ಸೊಕ್ಕಿ ಬೋಸಿ ಮೀರಿ ಉಕ್ಕುಕ್ಕಿ ಹರಿಹರಿದು ಹೊಸಿಲು ದಾಟಿ ಶುಭ್ರ ಬಿಳಿಯ ನದಿಯಾಗಿ ಚ...

ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ ಮನಸು ಕನಸುಗಳನ್ನು ಕಲೆಸಿರುವುದು? ಗಿರಿಕಮರಿಯಾಳದಲಿ ತೆವಳಿದ್ದ ಭಾವಗಳ ಮುಗಿಲ ಮಂಚದೊಳಿಟ್ಟು ತೂಗುತಿಹುದು? ಸತ್ತ ಬಾಳಿಗೆ ಮತ್ತೆ ಅಮೃತವೆರೆದು ಕತ್ತಲಾಳಗಳಲ್ಲಿ ದೀಪವುರಿದು ಬಾಳು ಕೊನೆಯೇರುತಿದೆ ಬೆಳಕಿನು...

‘ಆಸೆಯೇ ದುಃಖಕ್ಕೆ ಕಾರಣ’ ತಿಳಿಸಿದ ಬುದ್ಧ ಬೋಧಿಯಾಗಿ ಆಗಾಗ ಅಲ್ಲಲ್ಲಿ ಅವರವರ ಮನಸಿನಲಿ ಚಿಗುರೊಡೆವ ಜೀವ ಕಣ್ತೆರೆಸುವ ದೇವದೂತ. ಸುಂದರ ನಗರಿ ವೈಶಾಲಿ ಸಸ್ಯ ಶ್ಯಾಮಲೆಯ ನಾಡು ಬೀಡು ಅಂಬವನದ ನಿಶ್ಶಬ್ದ ಹಗಲುರಾತ್ರಿಗೆ ಹೂ ಬಳ್ಳಿಗಳ ಪಿಸುಪಿಸು ಮಾತ...

ಅಪ್ಪಾ ಹೊರಲಾರೇನೋ ಈ ಮಣಭಾರ ಹೆಣಭಾರಾ ತಿಂದುಂಡ ತುತ್ತುಗಳೆಲ್ಲಾ ಬಾಯಲ್ಲೇರಿ ಬಂದಾಡಿಕೊಳ್ಳುತ್ತವೆ ಕುಡಿದ ಹನಿಹನಿಯೂ ಕಣ್ಣೀರ ಪೋಣಿಸುತ್ತದೆ ಸೇವಿಸಿದ ಉಸಿರುಸಿರೂ ಮೂಗುಕಟ್ಟುತ್ತದೆ ಮಲಗಿದಿಂಚಿಂಚು ನೆಲವೂ ಬಾಯ್ದೆರೆದು ನುಂಗುತ್ತದೆ ನಡೆದಡಿಯಡಿ ...

ವ್ಯೋಮ ಮಂಡಲದೊಳಗಿನ ರಹಸ್ಯ ಲೋಕದಂತೆ ನೂರುಗೂಢಗಳ ಗರ್ಭದೊಳಗೇ ಅಡಗಿಸಿ ಕಣ್‌ ಮಿಟುಕಿಸಿ ಸೆಳೆವ ತುಂಟ ಊರೊಳಗಿನ ಈ ಬೀದಿ. ಬಣ್ಣಬಣ್ಣಗಳ ಕನಸು ತುಂಬಿಟ್ಟುಕೊಂಡ ಅಂಗಡಿ ಸಾಲು ಎಂದಿಗೂ ಯಾರೂ ಕೊಳ್ಳದ ಕೈಗೆಟುಕದ ಸೂರ್ಯಚಂದ್ರತಾರೆ ಎಲ್ಲ ಬಿಕರಿಗಿಟ್ಟ ಮ...

ಹೇಳು ಸಖೀ ಹೇಳೇ ಆ ಹೆಸರನು ನನ್ನೀ ಕಿವಿಗಳಲಿ, ಮಿಡಿಯುತಿದೆ ಅದು ದಿವ್ಯಗಾನವನು ನನ್ನೆದೆ ವೀಣೆಯಲಿ. ವಸಂತ ಬಿಡಿಸಿದ ವನದ ಹಾಸಿನಲಿ ತೇಲಿ ಬಂದ ಹೆಸರು ವಿರಹಿ ವಿಹಂಗದ ಮಧುರ ಗೀತೆಯಲಿ ಕಳವಳಿಸಿದೆ ಉಸಿರು ಸಖಿಯರ ಮುಖದಲಿ ಏನೋ ಬೆರಗು ಸುಳಿದಿದೆ ಏಕೆ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...