ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ
ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ, ಉತ್ತಮರು ನಿಂದೆಮಾತಿಗೆ ಸದಾ ಸಿಕ್ಕವರೆ; ಸೌಂದರ್ಯದಾಭರಣ ಸಂಶಯಕೆ ಹೊರತಲ್ಲ ನಿರ್ಮಲಾಕಾಶದಲೂ ಕಾಗೆ ಹಾರುವುದೇ. ನೀನು ಯೋಗ್ಯನೆ, ನಿನ್ನ ಕುರಿತ ಆರೋಪಗಳು ನಿನ್ನ ಮೇಲ್ಮೆಯನೆ ಹೇಳುವುವು, ಕೇಡೂ...