
ಎಂದು ಬರುವನೇ ಜೀಸಸ್ ಕ್ರಿಸ್ತ ಇಂದು ಬರುವನೇ ನಾಳೆ ಬರುವನೇ ನಾಡಿದು ಬರುವನೆ ಕ್ರಿಸ್ತ ಎಂದಾದರೂ ಬರುವನೆ ಮೇರಿ ಮಾತೆಯ ಪ್ರೀತಿಯ ಪುತ್ರ ಕ್ರಿಸ್ತನು ಬಂದರೆ ಆ ದಿನ ಸುದಿನ ಕ್ರಿಸ್ತನು ಬಂದ ದಿನವೇ ಸುದಿನ ಇಂದಾದರು ಎಂದಾದರು ಪ್ರತಿದಿನವೂ ಶುಭದಿನ ...
ಎಲ್ಲರಂಥವನಲ್ಲ ನಮ್ಮ ಗೊಮ್ಮಟ ಮಳೆಯಲು ಬಿಸಿಲಲು ಇವನೊಬ್ಬನೆ ಮನ್ಮಥ ಏನು ಮೈ ಏನು ಮಾಟ ‘ಏನುದಾತ್ತ ನೋಟವು ಹುಟ್ಟಿದುದಕೆ ಸಾರ್‍ಥಕವಾಯ್ತೊ ಇವನು ನಿಂತ ಬೆಟ್ಟವು ರಾಜ್ಯ ಬಿಟ್ಟು ವಿರಾಜಮಾನ ಈ ವರ್‍ಧಮಾನ ಯುಗದಗಲ ಜಗದಗಲ ಈ ಪ್ರವರ್‍ಧಮಾನ ಎಂಥ ಮನದ ಎ...
ಭರತನಿದ್ದ ಬಾಹುಬಲಿಯಿದ್ದ ಗೊಮ್ಮಟನಿರಲಿಲ್ಲ ಜಿನನಿರಲಿಲ್ಲ ಭರತ ಬಾಹುಬಲಿಯ ಮಧ್ಯೆ ಯುದ್ಧ ನಡೆದಿತ್ತು ಅಣ್ಣತಮ್ಮನ ನಡುವೆ ಗೊಮ್ಮಟನಿರಲಿಲ್ಲ ಜಿನನಿರಲಿಲ್ಲ ಗಧಾಯುದ್ಧ ಖಡ್ಗ ಯುದ್ಧ ಸಕಲಾಸ್ತ್ರ ಯುದ್ಧ ನಡೆದಿತ್ತು ಸಹಸ್ರವರ್‍ಷ ಗೊಮ್ಮಟನಿರಲಿಲ್ಲ ಜ...
ಕ್ಷುಬ್ಧ ಸಾಗರದಂತೆ ಅಲ್ಲೋಲಕಲ್ಲೋಲ ನನ್ನಂತರಂಗದಲ್ಲಿ ಹೃದಯವಿಂದು ಕುದಿಯುತಿದೆ ಉಕ್ಕುತಿದೆ ಬತ್ತುತಿದೆ ಒಂದೊಂದು ನನ್ನಾತ್ಮ ಬಿಂದು ಯಾವ ತಪ್ಪಿಗೆ ಯಾವ ಶಿಕ್ಷೆಯಿದೊ ಕಾಣೆನು ಸರ್‍ವ ಕ್ಷಮೆ ಯಾಚಿಸಲು ನಾನಿಂದು ಸಿದ್ಧನು ಏನ ಮಾಡಲು ಹೊರಟು ಏನಾಯಿತ...
ದೋಣಿಯೊಂದು ಹುಟ್ಟು ನಿನಗೆ ದೋಣಿಯೊಂದು ಹುಟ್ಟು ನನಗೆ ದೋಣಿಯೊಂದೆ ಯಾನವೊಂದೆ ಜೀವ ನದಿಯು ಒಂದೆಯೆ ಎಲ್ಲಿ ಯಾಕೆ ಸಾಗುತ್ತಿದೆ ತಿಳಿಯದು ನದಿ ನೀರಿಗೂ ಇರುವತನಕ ಹರಿವುದೊಂದೆ ಇರುವ ಗತಿಯು ಜೀವಿಗೂ ಹಕ್ಕಿ ನೀನು ಹಕ್ಕಿ ನಾನು ಗೂಡು ನಮ್ಮದೊಂದೆಯೆ ಎಲ...
ಯಾರು ಏನು ಯಾಕೆ ಎಂದು ಹೇಳುವವರು ಯಾರು ಇಲ್ಲ ಕೇಳುವವರೆ ಎಲ್ಲರು ಮರವು ತಾನೆ ಏರದು ದಾರಿ ತಾನೆ ನಡೆಯದು ಕತೆಯು ತಾನೆ ಹೇಳದು ಕವಿತೆ ತಾನೆ ಹಾಡದು ಎಲ್ಲಿ ಕಾರ್‍ಯ ಕಾರಣ ಮಳೆಯು ತಾನೆ ಸುರಿಯದು ನದಿಯು ತಾನೆ ಹರಿಯದು ಕಡಲು ತಾನೆ ಉಕ್ಕದು ನೌಕೆ ತಾನ...
ಅಪ್ಪಮ್ಮ ಕಾಯ್ತಾರೆ ಮನೆಯೊಳಗೆ ಗೆಳತಿಯರಿದ್ದಾರೆ ಮರೆಯೊಳಗೆ ಹೊರೆಯಷ್ಟು ಕೆಲಸ ಬಿದ್ದಿದೆಯೊ ಸರಸಕ್ಕೆ ಸಮಯ ಈಗಿಲ್ಲವೊ ಗೋವುಗಳ ಕರಕೊಂಡು ಹೊಳೆಗೊಯ್ಯಬೇಕೊ ಅವುಗಳ ಮೈತಿಕ್ಕಿ ತೊಳೆಯಬೇಕೊ ಪಾತ್ರೆ ಪಗಡೆ ಉಜ್ಜಿ ಬೆಳಗಿಡಬೇಕೊ ನೆಲ ಸಾರಿಸಿ ಒರೆಸಿ ಹೊಳ...
ಎಷ್ಟು ಹೊರಳಿದರು ಮುಗಿಯದಂಥ ನೆನಪಿನ ತೆರೆಯೊಂದು ಮರಳಿ ಮರಳಿ ಹಾಯ್ವುದು ಕಾರಣವಿರದೆ ಏನೇನೊ ತರುವುದು ಏನೇನೊ ಕೊಂಡು ತೆರಳುವುದು ಜನರ ನಡುವೆ ನಾನಿರುವ ಕಾಲ ಏಕಾಂತದಲ್ಲಿ ಕೂತಿರುವ ಕಾಲ ಏನೊ ವಿಷಯದಲಿ ಮಗ್ನನಾಗಿರುವ ಕಾಲ ಸಂಜೆ ಬಣ್ಣವ ನೋಡುತ್ತಿರು...
ಜೋಡಿ ಹಕ್ಕಿ ಗೂಡು ಕಟ್ಟಿ ಮರಿಗಳಾದುವೋ ಮರಿಗಳೆಲ್ಲಮ್ಮ ಮರಿಗಳೆಲ್ಲ ಹಾರಿ ಹೋಗಿ ಗೂಡು ಬರಿದಾಯಿತೋ ಗೂಡು ಎಲ್ಲಮ್ಮ ಮಳೆ ಬಂದು ಹಳ್ಳ ತುಂಬಿ ಹಸಿರಾಯಿತೋ ಹಸಿರು ಎಲ್ಲಮ್ಮ ಮಳೆ ನಿಂತು ಹಳ್ಳ ಬತ್ತಿ ಭಣಗುಟ್ಟಿತೋ ಹಳ್ಳ ಎಲ್ಲಮ್ಮ ಹೂವರಳಿ ಗಂಧ ಬೀರಿ ಬ...
ಮೀನಿಗೆ ತಿಳಿಯದು ನೀರೇನೆಂದು ನೀರಿಗೆ ತಿಳಿಯದು ಮೀನೇನೆಂದು ಮೀನೊಳಗೆ ನೀರು ನೀರೊಳಗೆ ಮೀನು ನೀರು ಮೀನುಗಳೆರಡು ನಿನ್ನೊಳಗೊ ಬ್ರಹ್ಮ ಬೆಂಕಿಗೆ ತಿಳಿಯದು ಉರಿಯೇನೆಂದು ಉರಿಗೆ ತಿಳಿಯದು ಬೆಂಕಿಯೇನೆಂದು ಬೆಂಕಿಯೊಳಗೆ ಉರಿ ಉರಿಯೊಳಗೆ ಬೆಂಕಿ ಬೆಂಕಿ ಉ...














