ಶೂನ್ಯ ಆದಿ ಶೂನ್ಯ ಅನಾದಿ
ಶೂನ್ಯ ಅಂತ ಶೂನ್ಯ ಅನಂತ
ಶೂನ್ಯವೆನ್ನುವುದಿಲ್ಲ ಶೂನ್ಯವೇ ಎಲ್ಲ
ಶೂನ್ಯದಲ್ಲಿ ಶೂನ್ಯ ಶೂನ್ಯವೇ ಮಹಾಶೂನ್ಯ
ಶೂನ್ಯ ಆಕಾಶ ಶೂನ್ಯ ಅವಕಾಶ
ಶೂನ್ಯ ದ್ಯಾವಾ ಪೃಥವೀ
ಶೂನ್ಯ ಕಾಲ ಶೂನ್ಯ ದೇಶ
ಶೂನ್ಯ ಕ್ಷಣ ನಿಮಿಷ
ಶೂನ್ಯವೆಂದರೆ ಏನು?
ಶೂನ್ಯವೆಂದರೆ ನೀನು
ಶೂನ್ಯವೆಂದರೆ ನಾನು
ಶೂನ್ಯವೆಂದರೆ ದೈವ ತಾನು
ಶೂನ್ಯವೇ ಸೃಷ್ಟಿ ಸ್ಥಿತಿ ಲಯ
ಶೂನ್ಯವೇ ಆಲಯ ಶೂನ್ಯ ಮಹಾಲಯ
ಶೂನ್ಯಕ್ಕೆ ಶೂನ್ಯವ ಕೂಡಿಸಿ
ಶೂನ್ಯ ಸಂಪಾದನೆ
ಶೂನ್ಯದಿಂದ ಶೂನ್ಯವ ಕಳೆದು
ಶೂನ್ಯ ಸಂಪಾದನೆ
ಶೂನ್ಯದಿಂದ ಶೂನ್ಯವ ಗುಣಿಸಿ
ಶೂನ್ಯ ಸಂಪಾದನೆ
ಶೂನ್ಯದಿಂದ ಶೂನ್ಯವ ಭಾಗಿಸಿ
ಶೂನ್ಯ ಸಂಪಾದನೆ
ಮಹಾಶೂನ್ಯ ನಮ್ಮ ಶಿವನ ನೆನೆದು
ಶೂನ್ಯ ಸಂಪಾದನೆ
*****


















