ಇದೋ ನೋಡಿ ಚಿತ್ತ-ಪಟ
ಗಾಳಿಯಲ್ಲಿ ಓಲಾಟ
ಬಾನೆತ್ತರಕ್ಕೆ ಹಾರಾಟ
ಹಿಡಿತ ಬಿಟ್ಟರೆ ಅದರದೇ ಚೆಲ್ಲಾಟ
ನಮ್ಮ ಊಹೆಯನ್ನು ಮೀರಿ
ಎತ್ತರೆತ್ತರಕ್ಕೆ ಹಾರಿ
ಬಾನಂಗಳವನ್ನು ಏರಿ
ಮಾಡುತ್ತದೆ ಸೀಮೋಲ್ಲಂಘನ
ಒಮ್ಮೆ ಆಕಡೆಗೆ ಸೆಳೆತ
ಮತ್ತೊಮ್ಮೆ ಈ ಬದಿಗೆ ಎಳೆತ
ಎಳೆತ ಸೆಳೆತಗಳ ನಡುವೆ
ಅದೇನೋ ಮಿಡಿತ
ಆಸೆಯ ಸೆಳೆತಕ್ಕೆ ಬಾಗುವ
ಮೇಲಕ್ಕೆ ಹಾರುತ್ತ ಬೀಗುವ
ಆಕಾಂಕ್ಷೆಗಳ ಹಾದಿಯಲ್ಲಿ ಸಾಗುವ
ನಿತ್ಯ ನೂತನ ಪಯಣ
*****


















