ಎಚ್ಚರ ಮಾನವ ನಿತ್ಯ ಎಚ್ಚರ
ನೀನು ಅಮರನೆಂದು ಕೊಬ್ಬಬೇಡ
ನಿನ್ನ ಜನುಮದೊಂದಿಗೆ ಸಾವಿದೆ
ಸಾವಿನೊಂದಿಗೆ ನಿನ್ನ ಸರಸಬೇಡ
ನಾಳೆ ಸಾವು ಬಪ್ಪುದೆಂದು ಆಲೋಚಿಸಿಯೂ
ಇಂದೇ ಹೇಗೊ ಬಾಳಬೇಡ
ಸ್ವಾರ್ಥ ಸಾಧಿಸುತ್ತ ಸದಾ ನೀನು
ನಿನ್ನ ಘಾಸಿ ಮಾಡಿಕೊಳ್ಳಬೇಡ
ಕ್ಷಣದ ಬದುಕು ಇದು ಕ್ಷಣ ಭಂಗೂರ
ಆ ಮೇಲೆ ಇರುವುದೆಲ್ಲ ಇತಿಹಾಸ
ಈಗ ನಡೆದದ್ದೆಲ್ಲ ಆಗುವುದು ಕನಸು
ತೋರಬೇಡ ನಿನ್ನ ಜಂಭದ ಸಹಾಸ
ಬಾಳಿಗೆ ಎಂಥಹದೇ ಅರ್ಥವಿಲ್ಲ
ನಿನ್ನ ಆಯುಷ್ಯದಗಳಿಗೆಗಳೆಲ್ಲ
ದೇವಾನಾಮ ವಿಲ್ಲದೆ ಕಳೆಯಬೇಡ
ಮಾಣಿಕ್ಯ ವಿಠಲ ಬಿಟ್ಟು ನೊಂದಬೇಡ
*****
















