ಎಂದು ಬರುವನೇ ಜೀಸಸ್ ಕ್ರಿಸ್ತ
ಇಂದು ಬರುವನೇ ನಾಳೆ ಬರುವನೇ
ನಾಡಿದು ಬರುವನೆ ಕ್ರಿಸ್ತ
ಎಂದಾದರೂ ಬರುವನೆ
ಮೇರಿ ಮಾತೆಯ ಪ್ರೀತಿಯ ಪುತ್ರ
ಕ್ರಿಸ್ತನು ಬಂದರೆ ಆ ದಿನ ಸುದಿನ
ಕ್ರಿಸ್ತನು ಬಂದ ದಿನವೇ ಸುದಿನ
ಇಂದಾದರು ಎಂದಾದರು
ಪ್ರತಿದಿನವೂ ಶುಭದಿನ
ಕ್ರಿಸ್ತನು ಬಂದರೆ ಸಿದ್ದರೆ ನಾವು
ಸ್ವಾಗತಿಸಲು ಅವನ
ಇಂದಾದರು ಎಂದಾದರು
ಸ್ವೀಕರಿಸಲು ಅವನ
ಕ್ರಿಸ್ತನು ಬಂದರೆ ಸಿದ್ದರೆ ನಾವು
ಗುರುತಿಸಲು ಅವನ
ದೀನರಲಿ ದೀನ ದಲಿತರಲ್ಲಿ ದಲಿತ
ಪರಮ ಪವಿತ್ರ ದೇವರ ಮಗನ
ಮೈಯಲಿ ಮೊಳೆಗಳ ಗಾಯ
ಶಿರದಲಿ ಮುಳ್ಳುಗಳ ಗಾಯ
ಸೊಂಟದ ಕಿರುವಸ್ತ್ರ ರಕ್ತಸಿಕ್ತ
ಲೋಕವನುಳಿಸಲು ತಾನೇ ಸತ್ತ
ದೇವರ ಇವರ ರಕ್ಷಿಸೆಂದವನ
ತನ್ನ ಹಂತಕರನ್ನೇ ಕ್ಷಮಿಸೆಂದವನ
ಕರುಣೆಯೆ ಮೈವೆತ್ತು ಬಂದಂಥವನ
ಪುಣ್ಯವನಿತ್ತು ಪಾಪವ ಕೊಂಡವನ
ಸಿದ್ಧರೆ ನಾವು ಸ್ವಾಗತಿಸಲು ಅವನ
*****


















