ತುದಿಗಾಲಿನೊಳು ನಿಂತು ನೋಡುತಿದೆ ಚೆಲುವಿಲ್ಲಿ
ಹುರುಳದೇನಿಹುದೆಂದು ಬೇಲಿಯಾಚೆ
ತುದಿಗಾಲಿನೊಳೆ ತಿಳಿವು ನೆಗೆದು ಕುಸಿದೇಳುತಿದೆ
ಕೌತುಕವದೇನೆಂದು ತಡಿಕೆಯೀಚೆ
ತನ್ನ ಜಂಘೆಯ ಬಲವನುಡುಗಿ ಕೆಡೆದಿಹುದಳಲು
ಹರಕೆಯೊಳು ಬಾಗಿಲೆಡೆ ಬೆತ್ತಲೆಯೊಳು
ತುಡಿತುಡಿದು ಧಾವಿಸುತ ಸಂಸಾರದುಗ್ರಭಯ
ಆಸರೆಯನೆರೆವುದೀ ಕತ್ತಲೆಯೊಳು-
ಭವ್ಯ ಪರಿವರ್ತನವನಾಶಿಸುತ ಜಗದೆಲ್ಲ ಚಿಂತೆ
ಕವಿದಿಹುದು, ಶಿವಭೂತಿಗನುವಪ್ಪ ಭೂತಗಣದಂತೆ.
*****


















