ಬೇವಿನ ರಸದಲ್ಲಿ
ಬೆರೆತು ಹೋಗಿದ್ದ ವಿಷವು
ಸಿಹಿಯಾಗಿ ಹೋಯ್ತು ನೋಡು!
ಅವರು ಅಪ್ಪಟ ಸುಳ್ಳನ್ನೇ
ಎಷ್ಟು ಚೆನ್ನಾಗಿ ಹೇಳಿದರೆಂದರೆ
ಜನ ನಿಜವೆಂದು ಭಾವಿಸಿದರು ನೋಡು!
ಆ ಕಾವ್ಯದ ಬಟ್ಟೆಯು
ಎಷ್ಟು ಬೆಳ್ಳಗಿತ್ತೆಂದರೆ
ಜನರು ಬೆಳಗಾಯಿತೆಂದರು ನೋಡು!
ಆ ಕಾವ್ಯ ಎಷ್ಟೊಂದು ಶುದ್ಧವಾಗಿತ್ತೆಂದರೆ
ಜನರು ಹಿಮಬ್ಭಾದಿತ ಹಿಮಾಲಯ
ಹೊದ್ದು ಮಲಗಿದೆಯೆಂದರು ನೋಡು!
*****



















