ಅಮೇರಿಕೆಯ ಫೋಲಿಸ್ ಇಲಾಖೆಯ ತಜ್ಞರು ಹೊಸ ಬಗೆಯ ಪಿಸ್ತೂಲುಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ತಜ್ಞರು ಅಭಿವೃದ್ಧಿ ಪಡಿಸಿದ ಈ ಪಿಸ್ತೂಲನ್ನು ಬಳಸಬೇಕಾದರೆ ನಿರ್ದಿಷ್ಟವಾದ ಒಂದು ಉಂಗುರವನ್ನು ಧರಿಸಬೇಕಾಗುತ್ತದೆ. ಈ ಉಂಗುರದ ವಿಶಿಷ್ಟವಾದ ವಿನ್ಯಾಸವನ್ನು ಪಿಸ್ತೂಲು ಗುರುತಿಸಲ್ಪಡುತ್ತದೆ. ಮತ್ತೊಂದು ಬಗೆಯ ಪಿಸ್ತೂಲು ಮಾಲಿಕನ ಧ್ವನಿಯನ್ನು ಗ್ರಹಿಸುವಂತಹದ್ದಾಗಿದೆ. ಇನ್ನೊಂದು ಬಗೆಯ ಪಿಸ್ತೂಲು ಕೈ ಬೆರಳಚ್ಚನ್ನು ಗುರುತು ಹಿಡಿದು ಕೆಲಸ ಮಾಡುವಂಥಹದ್ದಾಗಿದೆ. ನ್ಯೂಮೆಕ್ಸಿಕೋದಲ್ಲಿರುವ ಸ್ಯಾಂಡಿಯಾ ರಾಷ್ಟ್ರೀಯ ಪ್ರಯೋಗಾಲಯವು ದೂರ ಸಂವೇದಿ ತಂತ್ರಜ್ಞಾನವನ್ನು ಬಳಸಿಕೊಂಡು ಕೆಲಸಮಾಡುವಂತಹ ಪಿಸ್ತೂಲನ್ನು ಅಭಿವೃದ್ದಿಪಡಿಸಿದೆ. ಪಿಸ್ತೂಲು ಇಡಲು ಬಳಸಲು ಕವಚವನ್ನು ಇದಕ್ಕಾಗಿ ವಿಶೇಷ ರೀತಿಯಲ್ಲಿ ತಯಾರಿಸಬೇಕಾಗುತ್ತದೆ. ಕವಚದಲ್ಲಿ ಪಿಸ್ತೂಲನ್ನು ಇರಿಸುವಾಗ ಅದು ನಿಷ್ಕ್ರಿಯವಾಗಿರುತ್ತದೆ. ಕವಚದಿಂದ ಹೊರೆತೆಗೆದಾಗ ಮಾತ್ರ ಅದು ಕ್ರಿಯಾಶೀಲಗೊಳ್ಳುತ್ತದೆ.
*****



















