Home / Lakshminarayana Bhatta

Browsing Tag: Lakshminarayana Bhatta

ಮೂಲ: ಭಾಸ್ಕರ ಚಕ್ರವರ್ತಿ ಕಣ್ಣೀರ ಹನಿಯೊಂದು ಮರುಭೂಮಿಯಲ್ಲಿ ಉರುಳಿತು ಅಮ್ಮ ತಂಗಿ ಅದನ್ನು ಹುಡುಕುವುದಕ್ಕೆ ಹೊರಟರು. ಹತ್ತಿ ಔಷಧದ ಜೊತೆ ಡಾಕ್ಟರೂ ಬಂದರು. ಕಪ್ಪು ಗೌನು ತೊಟ್ಟ ಅಡ್ವೊಕೇಟ್ ಕೂಡ. ಮೂಕನಂತೆ ನಾನು ಇಡೀ ಮೂರು ತಿಂಗಳು ಮೌನವಾಗಿದ್ದ...

ಮೂಲ: ಭಾಸ್ಕರ ಚಕ್ರವರ್ತಿ ಅಚ್ಚುಮೆಚ್ಚಿನ ಲೇಖಕ ಯಾರೂ ಇಲ್ಲ ನನಗೆ ಪುಸ್ತಕ ಓದಿ ಕೂಡಲೆ ಮುಚ್ಚಿಬಿಡುತ್ತೇನೆ ಓಡಿ ಹೋಗಿ ನನ್ನ ಹಾಸಿಗೆಗೆ ಜಿಗಿದು ಎಷ್ಟೋ ಹೊತ್ತು ಸುಮ್ಮನೆ ಮಲಗಿರುತ್ತೇನೆ ನಿರಾಳವಾಗಿರುತ್ತೇನೆ. ಆಹ ಹಾಸಿಗೆ! ನನ್ನ ಪರಮಮಿತ್ರ! ನನ...

ಮೂಲ: ಸಮರೇಂದ್ರಸೇನ್ ಗುಪ್ತ ಬದಿಗೆ ನಿಲ್ಲಿ ಅಂತ ಪೋಲೀಸು ಹೇಳಿದ, ನಿಂತೆ ಬದಿಯಲ್ಲಿ. ಪ್ರಮುಖ ವ್ಯಕ್ತಿ ಯಾರೋ ಹೋಗಲಿರುವಂತಿತ್ತು ರಸ್ತೆಯಲ್ಲಿ; ಬಸ್ಸು ಕಾರುಗಳನ್ನು ರಿಕ್ಷಾ ಸ್ಕೂಟರ್‌ಗಳನ್ನು ತಡೆಯಲಾಗಿತ್ತು. ನಾನು ಇದ್ದದ್ದೊ ಆ ರಸ್ತೆ ಬದಿಯಲ್...

ಮೂಲ: ಮಣೀಂದ್ರ ಗುಪ್ತ “ವಿಶ್ವಪ್ರಳಯದ ಬಳಿಕ ಹೊಸ ಜಗತ್ತಿನ ಸೃಷ್ಟಿ ಆಗಬೇಕಿದೆ ಅಂತ ಇಟ್ಟುಕೊ ಭಾರಿ ತೇಜೋಗೋಲ ಕಾಣಿಸುತ್ತಿದೆ ಅಗೋ ಆಕಾಶದಲ್ಲಿ ಹೇಳು ನೋಡೋಣ ಆ ಹೊಸಗೋಲದಲ್ಲಿ ಏನೇನಿರಬೇಕು ಅಂತ ಬಯಸುತ್ತೀಯೆ ನೀನು?” “ಸೂರ್ಯ, ಚಂದ್ರ, ಗಾಳಿ...

ಮೂಲ: ಕಾಳೀಕೃಷ್ಣ ಗುಹ ಗಾಳೀಮರದ ಬಗ್ಗೆ ಸ್ವಲ್ಪ ಹೇಳುತ್ತೇನೆ ಸ್ಕೂಲಿನ ಬಳಿ ಹಾಯುವ ವಿಶಾಲ ರಸ್ತೆಯ ಬಗ್ಗೆ ಎತ್ತರದ ದನಿಯಲ್ಲಿ ಒಟ್ಟಾಗಿ ಹಾಡುವ ಪುಟ್ಟ ಮಕ್ಕಳ ಬಗ್ಗೆ ಹಾಗೆಯೇ ಜೊತೆಗೆ ಗಾಳೀಮರದ ಬಗ್ಗೆ. ರಾತ್ರಿ ಗಾಳೀಮರ ಕತ್ತಲಲ್ಲಿ ಮುಳುಗುತ್ತದೆ...

ಮೂಲ: ಬುದ್ಧದೇವ ದಾಸಗುಪ್ತ ಛತ್ರಿಗಳೆಲ್ಲ ಥಟ್ಟನೆ ಬೀದಿಗೆ ಬಂದಿದ್ದಾವೆ, ಒಂದರ ಸಹಾಯದಿಂದ ಒಂದು ನಡೆಯುತ್ತಿದ್ದಾವೆ. ಪುಟ್ಟನೆ ಛತ್ರಿಯ ಹೆಗಲಿನ ಮೇಲೆ ಒಂದು ಕೈಯಿಟ್ಟು ದೊಡ್ಡ ಛತ್ರಿ ನಡೆಯುತ್ತಿದೆ ತಾನೇ ಪ್ರತ್ಯೇಕ. ಎಷ್ಟೋ ಹೊತ್ತಿನಿಂದ ಪಾಪ ಬಸ...

ಮೂಲ: ನರೇಶ್ ಗುಹಾ ಅಯ್ಯೊ ಎಲ್ಲೆಲ್ಲೂ ಮರದ ಎಲೆಗಳ ಕೆಳಗೆ ರಾತ್ರಿ ಹಗಲೂ ಜಾರಿ ಉದುರುತ್ತಿವೆ. ಒಂದೆ ಬಿರುಗಾಳಿಯೂ ಇಲ್ಲಿ ಕಾಡುಗಳಲ್ಲಿ ಒಣಮರದ ಕಂಬಗಳು ಸುಯ್ಯುತ್ತಿವೆ. ಎಷ್ಟೊಂದು ಭೂತ ಕಾಡಲ್ಲಿ ಕುಣಿಯುತ್ತಿವೆ ಅಸ್ಥಿಪಂಜರ ಹಲ್ಲು ಕಿಸಿಯುತ್ತಿವೆ...

ಮೂಲ: ತಾರಾಪದ ರಾಯ್ ಹೇಳು ಕಲ್ಕತ್ತಾ, ನನ್ನ ಬಳಿಯಿದ್ದ ಹಸಿರಂಗಿ, ಪಾಸ್‌ ಪೋರ್ಟುಗಳ ನೆನಪಿದೆಯೆ ನಿನಗೆ? ಪೂರ್ವ ಪಾಕಿಸ್ತಾನದಿಂದ ಓಡುತ್ತ ಬಂದ ರೈಲಿಂದ ಇಳಿದು ಸಿಯಾಲ್ದಾ ನಿಲ್ದಾಣದ ಹೆಬ್ಬಾಗಿಲನ್ನು ದಾಟಿ ಬಂದೆ ಸುರಿಮಳೆಯಲ್ಲಿ. ನನ್ನ ಜೀವನದಲ್ಲ...

ಮೂಲ: ಸುರೇಂದ್ರಸೇನ್ ಗುಪ್ತ ನಾನು ಎನ್ನುವುದು ನನಗೆ ನನ್ನಿಂದ ನನ್ನಲ್ಲಿ, ನಾನೇ ಎಲ್ಲದರ ಶಿಖರ ಉತ್ತಮ ಪುರುಷ ನಾನು ಎತ್ತರದ ದನಿಯಲ್ಲಿ ಕೂಗಿಕೊಂಡೆ ಸುತ್ತ ಇದ್ದವರೆಲ್ಲ ಬೆಚ್ಚಿ ನೋಡಿದರು ದೇಶ ಹೊರಗಟ್ಟಿದ್ದ ದಂಗೆಕೋರನೊ ಎಂದು ಚಕಿತರಾದರು ಕೆಲವರ...

ಮೂಲ: ಭಾಸ್ಕರ ಚಕ್ರವರ್ತಿ ಈ ಉದ್ದನೆ ಕಾರಿಡಾರ್ ಒಂದು ಇಕ್ಕಟ್ಟು ಓಣಿಯ ಹಾಗೆ. ಇವತ್ತು ರಾತ್ರಿ ಇಲ್ಲಿ ಕುರ್ಚಿಯೊಂದೆ ಕೂರುತ್ತದೆ. ದೂರದ ಪೊದೆಯಿಂದ ಚಂದಿರ ಬಾನಿಗೆ ಜಿಗಿಯುತ್ತದೆ; ಮಹಡಿ ಬದಿಯಿಂದ ಬೆಕ್ಕು ಒಲೆ ಕಡೆ ನೆಗೆಯುತ್ತದೆ. ಗರಿಕೆ ಹಾಡುತ...

12345...49

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...